ಕಾಂಗ್ರೆಸ್‌ ಶಾಸಕ ವಿ. ಸುಬ್ಬಾರೆಡ್ಡಿಗೆ ಇಡಿ ಶಾಕ್‌ : ಏಕಕಾಲ 5 ಕಡೆ ದಾಳಿ

Subba Reddy ED Raid : ಚಿಕ್ಕಬಳ್ಳಾಪುರ : ಬಾಗೇಪಲ್ಲಿಯ ಕಾಂಗ್ರೆಸ್‌ ಶಾಸಕ ವಿ.ಸುಬ್ಬಾರೆಡ್ಡಿಗೆ ಬೆಳ್ಳಂಬೆಳಗ್ಗೆಯೇ ಇಡಿ ಶಾಕ್‌ ಕೊಟ್ಟಿದೆ. ಇಡಿ ಅಧಿಕಾರಿಗಳು ಏಕಕಾಲದಲ್ಲಿ 5 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಮನೆ, ಸಂಬಂಧಿಕರ ಮನೆಯಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ವಿದೇಶಿ ಹಣ ವಿನಿಮಯ ನಿರ್ವಹಣೆ ಕಾಯ್ದೆ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯ ವೇಳೆಯಲ್ಲಿ ಅಧಿಕಾರಿಗಳು ಹಲವು ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಚಿಕ್ಕಬಳ್ಳಾಪುರದ ಬಾಗೇಪಲ್ಲಿ ವಿಧಾನಭಾ ಕ್ಷೇತ್ರದ ಶಾಸಕ ಕ ವಿ. ಸುಬ್ಬಾರೆಡ್ಡಿ ಅವರ ಕುಟುಂಬಸ್ಥರು ವಿದೇಶದಲ್ಲಿ ಆಸ್ತಿ ಹೊಂದಿದ್ದಾರೆ ಎನ್ನಲಾಗುತ್ತಿದ್ದು, ಆದಾಯದ ಮೂಲವನ್ನು ಇಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

Also Read : ಎಲ್‌ಐಸಿ ಕನ್ಯಾದಾನ ಯೋಜನೆ : 121 ರೂ. ಹೂಡಿಕೆ ಮಗಳ ಭವಿಷ್ಯ, ಮದುವೆಗೆ ಪಡೆಯಿರಿ 27 ಲಕ್ಷ ರೂ.

Subba Reddy ED Raid : ವಿದೇಶದಿಂದ ಅಕ್ರಮ ಹಣ ವರ್ಗಾವಣೆ ?

ವಿದೇಶದಿಂದ ಅಕ್ರಮ ಹಣ ವರ್ಗಾವಣೆ (Money Laundering) ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (BIAL) ಬಳಿ ಭೂಮಿ ಖರೀದಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ನಡೆದಿರುವ ಆರೋಪ ಕೇಳಿಬಂದಿದೆ.

ಏಲ್ಲೆಲ್ಲಾ ದಾಳಿ ನಡೆದಿದೆ ?

ಶಾಸಕ ಸುಬ್ಬಾರೆಡ್ಡಿ ಅವರ ಬೆಂಗಳೂರಿನ ನಿವಾಸ, ಕಚೇರಿಗಳು ಮತ್ತು ಅವರೊಂದಿಗೆ ಸಂಬಂಧ ಹೊಂದಿರುವ ಇತರ ವ್ಯಕ್ತಿಗಳ ಆಸ್ತಿಪಾಸ್ತಿಗಳ ಮೇಲೆ ದಾಳಿಗಳು ನಡೆದಿವೆ. ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ನಗರಗಳಲ್ಲಿನ ಹಲವಾರು ಸ್ಥಳಗಳನ್ನು ಏಕಕಾಲದಲ್ಲಿ ಪರಿಶೀಲಿಸಲಾಗಿದೆ.

ಈ ದಾಳಿಗಳು ನಡೆಯುತ್ತಿರುವ ಬಗ್ಗೆ ಇತ್ತೀಚಿನ ಮಾಧ್ಯಮ ವರದಿಗಳಲ್ಲಿ ಮಾಹಿತಿ ಇದೆ. ಇಡಿ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಮತ್ತು ಮುಂಬರುವ ದಿನಗಳಲ್ಲಿ ಇನ್ನಷ್ಟು ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.

Also Read : ಉಚಿತ ಬಸ್‌ ಪ್ರಯಾಣಕ್ಕೆ ಸ್ಮಾರ್ಟ್‌ ಕಾರ್ಡ್‌ ಕಡ್ಡಾಯ : ಜಾರಿಯಾಯ್ತು ಹೊಸ ರೂಲ್ಸ್‌

ವಿ.ಸುಬ್ಬಾರೆಡ್ಡಿ ಆಸ್ತಿ ಮೌಲ್ಯ 313 ಕೋಟಿ

ಕಾಂಗ್ರೆಸ್ ಶಾಸಕ ವಿ. ಸುಬ್ಬಾರೆಡ್ಡಿ 2023ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಆಸ್ತಿ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿದ್ದರು. ಈ ವೇಳೆಯಲ್ಲಿ ಅಫಿಡವಿಟ್‌ನಲ್ಲಿ ಬರೋಬ್ಬರಿ 313.61 ಕೋಟಿ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು ₹313.61 ಕೋಟಿ ಎಂದು ವರದಿಯಾಗಿದೆ.

  • ಚರಾಸ್ತಿ (Movable Assets): ₹127.14 ಕೋಟಿ.
  • ಸ್ಥಿರಾಸ್ತಿ (Immovable Assets): ₹186.47 ಕೋಟಿ.

ಇತ್ತೀಚೆಗೆ ನಡೆದ ಇಡಿ ದಾಳಿಯ ಹಿನ್ನೆಲೆಯಲ್ಲಿ, ಈ ಆಸ್ತಿ ಮೌಲ್ಯಗಳ ಕುರಿತು ಹೆಚ್ಚಿನ ಪರಿಶೀಲನೆ ನಡೆಯುವ ಸಾಧ್ಯತೆಯಿದೆ.

Chikkaballapur Bagepalli Congress MLA Subba Reddy House ED Raid from 5 places simultaneously

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories