ದೆಹಲಿ ಪ್ರವಾಸದ ವರೆಗೆ ಸಿದ್ದರಾಮಯ್ಯ ಸಿಎಂ : ಶಾಸಕ ಸುನಿಲ್ ಕುಮಾರ್ ವ್ಯಂಗ್ಯ

Karnataka CM Change : ಬೆಂಗಳೂರು : ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಐದು ವರ್ಷಗಳ ಕಾಲ ನಾನೇ ಸಿಎಂ ಎಂಬ ಹೇಳಿಕೆ ನೀಡಿದ್ದಾರೆ. ಆದರೆ ಸಿದ್ದರಾಮಯ್ಯ ಅವರ ಹೇಳಿಕೆಗೆ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಅವರು ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯನವರೇ, ನೀವೇ ಮುಂದಿನ 5 ವರ್ಷಗಳ ಕಾಲ ಮುಖ್ಯಮಂತ್ರಿ ಆಗಿ ಇರುತ್ತೇವೆ ಎಂದು ಹೇಳಿದ್ದೀರಿ. ಬಹಳ ಸಂತೋಷ. ಆದರೆ ಎಷ್ಟು ದಿನ ಈ ಸಂತೋಷ ಅನುಭವಿಸಬೇಕೆಂಬ ಪ್ರಶ್ನೆ ಕಾಡುತ್ತಿದೆ ಎಂದು ತಮ್ಮ ಟ್ವೀಟರ್ ಖಾತೆಯಲ್ಲಿ ಲೇವಡಿ ಮಾಡಿದ್ದಾರೆ.
ಈ ಹಿಂದೆ ಜಾತಿಗಣತಿ ವಿಚಾರದಲ್ಲಿಯೂ ಹೀಗೆ ಹೇಳಿದ್ದೀರಿ. ಯಾರೇ ವಿರೋಧ ಮಾಡಿದ್ದರೂ ಕೂಡ ನಾನು ಜಾತಿಗಣತಿ ಅನುಷ್ಠಾನ ಮಾಡಿಯೇ ತೀರುತ್ತೇನೆ ಎಂದು ಹೂಂಕರಿಸಿದ್ದೀರಿ. ಆದರೆ ಹೈಕಮಾಂಡ್ ವರದಿ ಜಾರಿ ಬೇಡ ಎಂದು ಕುಟುಕುತ್ತಿದ್ದಂತೆ ಬೆಕ್ಕಿನ ಮರಿಯ ಹಾಗೆ ವರದಿಯನ್ನು ತಿಪ್ಪೆಗೆ ಎಸೆದಿರಿ.
Also Read : ಉಡುಪಿ : ಅಂತರಾಷ್ಟ್ರೀಯ ಮಾದಕವಸ್ತು ಸಾಗಾಟ ಜಾಲ ಪತ್ತೆ
ಇದೀಗ ಕರ್ನಾಟಕದ ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿಯೂ ಹಾಗೆಯೇ ? ಐದು ವರ್ಷ ನಾನೇ ಸಿಎಂ ಎಂಬ ನಿಮ್ಮ ಹೇಳಿಕೆಯನ್ನು “ಮುಂದಿನ ಬದಲಾವಣೆ ದೆಹಲಿ ಪ್ರವಾಸದ ಬಳಿಕ ” ಎಂದು ಅರ್ಥೈಸಿಕೊಳ್ಳಬಹುದೇ ಎಂದು ವ್ಯಂಗ್ಯವಾಡಿದ್ದಾರೆ.
Also Read : ವಾರಕ್ಕೆ 70 ಗಂಟೆ ಕೆಲಸ : ಶನಿವಾರ, ಭಾನುವಾರದ ರಜೆಯೂ ಇಲ್ಲ
ಜಾತಿಗಣತಿ ಹೆಸರಲ್ಲಿ ಸಿದ್ದರಾಮಯ್ಯ ಅನ್ಯಾಯ
2015ರಲ್ಲಿ ಕಾಂತರಾಜು ಆಯೋಗ ಸಿದ್ದರಾಮಯ್ಯ ಅವರಿಗೆ ಜಾತಿಗಣತಿಯ ವರದಿಯನ್ನು ಸಲ್ಲಿಕೆ ಮಾಡಿತ್ತು. ಆದರೆ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕಾಂತರಾಜು ವರದಿಯನ್ನು ಜಾರಿಗೆ ತಂದಿರಲಿಲ್ಲ.
Also Read : Heart Attack : ಹೃದಯಾಘಾತ ತಪ್ಪಿಸುವುದು ಹೇಗೆ ?
ಕಾಂಗ್ರೆಸ್ ಹೈಕಮಾಂಡ್ ಕಾಂತರಾಜು ಆಯೋಗದ ವರದಿಯನ್ನು ಜಾರಿಗೆ ತರುವುದು ಬೇಡಾ ಅಂತಾ ಸೂಚನೆ ಬರುತ್ತಲೇ ಸಿದ್ದರಾಮಯ್ಯ ಸೈಲೆಂಟ್ ಆಗಿದ್ದರು. ಜಯಪ್ರಕಾಶ್ ಹೆಗ್ಡೆ ಆಯೋಗದ ವರದಿ ಸರಕಾರಕ್ಕೆ ಸಲ್ಲಿಕೆಯಾಗಿದ್ದರೂ ಜಾರಿಯಾಗಿಲ್ಲ.
Karnataka CM Change Delhi tour: MLA Sunil Kumar sarcastically comments on CM Siddaramaiah in Kannada News



