Avalakki Recipe : ನೀವು ಎಂದಾದರೂ ತೊವ್ವೆ ಅವಲಕ್ಕಿ ತಿಂದಿದ್ರಾ ಒಮ್ಮೆ ಟ್ರೈ ಮಾಡಿ ಈ ರೆಸಪಿ

ಅವಲಕ್ಕಿಯನ್ನು ಬಳಸಿಕೊಂಡು (Avalakki Recipe) ವಿವಿಧ ಖಾದ್ಯಗಳನ್ನು ತಯಾರಿಸಬಹುದು. ಬೆಳಗ್ಗಿನ ಅವಸರಕ್ಕೆ ಅವಲಕ್ಕಿಯಿಂದ ಬಹಳ ಬೇಗನೆ ತಿಂಡಿಯನ್ನು ರೆಡಿ ಮಾಡಬಹುದು. ಅವಲಕ್ಕಿಯನ್ನು ಬಳಸಿಕೊಂಡು ಚಿತ್ರಾನ್ನ, ಪೂವಂ ಇಲ್ಲದಿದ್ದರೆ ಅವಲಕ್ಕಿಗೆ ಸ್ವಲ್ಪ ಮೊಸರು ಸೇರಿಕೊಂಡು ತಿಂದರೂ ಕೂಡ ಬೆಳಗ್ಗಿನ ತಿಂಡಿ ಆದಂತೆ ಎನ್ನಬಹುದು. ಇನ್ನು ಅವಲಕ್ಕಿ ಮೊಸರು ಸೇರಿಕೊಂಡು ತಿನ್ನುವುದರಿಂದ ಆರೋಗ್ಯಕರವಾಗಿ ನಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಇನ್ನು ಅವಲಕ್ಕಿ ಈ ಹೊಸ ರೆಸಿಪಿ ಬಹಳಷ್ಟು ರುಚಿಯಾಗಿರುದಷ್ಟೇ ಅಲ್ಲದೇ, ಆರೋಗ್ಯಕ್ಕೆ ಹೆಚ್ಚಿನ ಪೌಷ್ಠಿಕಾಂಶವನ್ನು ಕೂಡ ಒದಗಿಸುತ್ತದೆ. ಹೀಗಾಗಿ ತೊವ್ವೆ ಅವಲಕ್ಕಿಯನ್ನು ಹೇಗೆ ತಯಾರಿಸುವು ಅದಕ್ಕೆ ಏನೆಲ್ಲಾ ಬೇಕಾಗುತ್ತದೆ ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ.

ಬೇಕಾಗುವ ಸಾಮಾಗ್ರಿ :

  • ದಪ್ಪ ಅವಲಕ್ಕಿ
  • ಹೆಸರು ಬೇಳೆ
  • ಹಸಿಮೆಣಸು
  • ಹಸಿ ನೆಲಗಡಲೆ
  • ಹಸಿ ಬಟಾಣಿ
  • ಗೋಡಂಬಿ
  • ಸಾಸಿವೆ
  • ಜೀರಿಗೆ

ಮಾಡುವ ವಿಧಾನ :
ಮೊದಲಿಗೆ ಗ್ಯಾಸ್‌ ಟವ್‌ ಮೇಲೆ ಒಂದು ಕುಕ್ಕರ್‌ ಇಟ್ಟು ಒಂದು ಅಥವಾ ಎರಡು ಚಮಚ ಆಗುವಷ್ಟು ತುಪ್ಪ ಹಾಕಿಕೊಳ್ಳಬೇಕು. ಅದಕ್ಕೆ ಅರ್ಧ ಕಪ್‌ ಆಗುವಷ್ಟು ಹೆಸರು ಬೇಳೆಯನ್ನು ಚೆನ್ನಾಗಿ ನೀರಲ್ಲಿ ತೊಳೆದುಕೊಂಡು ಹಾಕಬೇಕು. ಹೆಸರು ಬೇಳೆಯನ್ನು ಎರಡು ನಿಮಿಷಗಳ ಕಾಲ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಅದಕ್ಕೆ ಎರಡು ಕಪ್‌ ಆಗುವಷ್ಟು ನೀರನ್ನು ಹಾಕಿಕೊಳ್ಳಬೇಕು. ಆಮೇಲೆ ಅದಕ್ಕೆ ಉದ್ದಕ್ಕೆ ಕತ್ತರಿಸಿಕೊಂಡ ಎರಡು ಹಸಿಮೆಣಸು, ಹತ್ತು ಕಾಳುಮೆಣಸು, ಕಾಲು ಚಮಚ ಅರಶಿನ ಪುಡಿ ಹಾಗೂ ಅರ್ಧ ಚಮಚ ಉಪ್ಪುನ್ನು ಹಾಕಿ ಕುಕ್ಕರ್‌ ಬಾಯಿ ಮುಚ್ಚಬೇಕು. ದೊಡ್ಡ ಊರಿಯಲ್ಲಿ ಕುಕ್ಕರ್‌ ನಾಲ್ಕು ವಿಶಲ್‌ ಕೂಗಿಸಬೇಕು. ಕುಕ್ಕರರ ಸೀಟಿ ಆರಿದ ಮೇಲೆ ಅದರ ಮುಚ್ಚಳ ತೆಗೆದು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.

ಆಮೇಲೆ ಒಂದು ಬಾಣಲೆಯಲ್ಲಿ ಒಂದರಿಂದ ಎರಡು ಚಮಚ ತುಪ್ಪ ಅಥವಾ ಎಣ್ಣೆಯನ್ನು ಹಾಕಿ ಹತ್ತರಿಂದ ಹದಿನೈದು ಗೋಡಂಬಿ ಚೆನ್ನಾಗಿ ಹುರಿದುಕೊಂಡು ಒಂದು ಪಾತ್ರೆ ತೆಗೆದು ಇಟ್ಟುಕೊಳ್ಳಬೇಕು. ಅದೇ ಬಾಣಲೆಗೆ ಒಂದು ಚಮಚ ಸಾಸಿವೆ, ಅರ್ಧ ಚಮಚ ಜೀರಿಗೆ, ಚಿಟಿಕೆ ಇಂಗು, ಹತ್ತು ಕರಿಬೇವಿನ ಎಲೆ ಹಾಕಿ ಹುರಿದುಕೊಳ್ಳಬೇಕು. ನಂತರ ಎರಡು ದೊಡ್ಡ ಚಮಚ ಹಸಿ ನೆಲಗಡಲೆ, ಅರ್ಧ ಕಪ್‌ ಹಸಿ ಬಟಾಣಿ ಹಾಗೂ ಕಾಲು ಚಮಚ ಆಗುವಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು, ಮುಚ್ಚಳ ಮುಚ್ಚಿ ಎರಡು ನಿಮಿಷ ಕಾಲ ಬೇಯಿಸಿಕೊಳ್ಳಬೇಕು.

ಇದನ್ನೂ ಓದಿ : Tomato Dosa Recipe : ಟೊಮ್ಯಾಟೋ ದೋಸೆ ರೆಸಿಪಿ ಎಂದಾದ್ರೂ ತಿಂದಿದ್ರಾ ? ಒಮ್ಮೆ ಟ್ರೈ ಮಾಡಿ ಹೊಸ ರೆಸಿಪಿ

ಇದನ್ನೂ ಓದಿ : Dose Recipe : ಬೆಳಗ್ಗಿನ ತಿಂಡಿಗೆ ಏನ್‌ ಮಾಡೋದು ? ಅಂತಾ ಚಿಂತಿಸುವವರಿಗೆ ಇಲ್ಲಿದೆ ಸೂಪರ್‌ ದೋಸೆ ರೆಸಿಪಿ ಟಿಪ್ಸ್

ನಂತರ ಇದಕ್ಕೆ ಹಸಿ ತೆಂಗಿನಕಾಯಿಯನ್ನು ಸಣ್ಣ ಹೊಳು ಸ್ವಲ್ಪ ಹಾಕಿಕೊಂಡು ಒಂದು ನಿಮಿಷ ಕಾಲ ಹುರಿದುಕೊಳ್ಳಬೇಕು. ಆಮೇಲೆ ಇದಕ್ಕೆ ಬೇಯಿಸಿ ಇಟ್ಟುಕೊಂಡ ಹೆಸರು ಬೇಳೆ ಹಾಗೂ ಅರ್ಧ ಕಪ್‌ ನೀರನ್ನು ಹಾಕಿಕೊಂಡು, ಚೆನ್ನಾಗಿ ಕಲಕಿಕೊಳ್ಳಬೇಕು. ನಂತರ ಇದಕ್ಕೆ ಐದು ನಿಮಿಷ ನೆನೆಸಿ ಇಟ್ಟುಕೊಂಡ ದಪ್ಪ ಅವಲಕ್ಕಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪುನ್ನು ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಆಮೇಲೆ ಐದು ನಿಮಿಷ ಸಣ್ಣ ಊರಿಯಲ್ಲಿ ಬೇಯಿಸಿಕೊಂಡು, ಸಣ್ಣಕ್ಕೆ ಹಚ್ಚಿದ ಕೊತ್ತಂಬರಿ ಸೊಪ್ಪು ಹಾಗೂ ತುಪ್ಪದಲ್ಲಿ ಹುರಿದು ಇಟ್ಟುಕೊಂಡ ಗೋಡಂಬಿಯನ್ನು ಹಾಕಿಕೊಂಡರೆ ರುಚಿ ರುಚಿಯಾದ ತೊವ್ವೆ ಅವಲಕ್ಕಿ ಸವಿಯಲು ಸಿದ್ದವಾಗಿರುತ್ತದೆ. ಇದನ್ನು ಬೆಳಗ್ಗಿನ ಉಪಹಾರವಾಗಿಯೂ ತಿನ್ನಬಹುದು ಅಥವಾ ರಾತ್ರಿಯ ಊಟವನ್ನಾಗಿ ಕೂಡ ಸೇವಿಸಬಹುದು.

Avalakki Recipe : Best tovve avalakki recipe for breakfast try this recipe once

Comments are closed.