Tomato Dosa Recipe : ಟೊಮ್ಯಾಟೋ ದೋಸೆ ರೆಸಿಪಿ ಎಂದಾದ್ರೂ ತಿಂದಿದ್ರಾ ? ಒಮ್ಮೆ ಟ್ರೈ ಮಾಡಿ ಹೊಸ ರೆಸಿಪಿ

ಟೊಮೆಟೊ ಎಲ್ಲ ರೀತಿಯ ರೆಸಿಪಿಗೆ ಬೇಕಾಗುವ ಬಹು ಮುಖ್ಯ ತರಕಾರಿ ಎಂದರೆ ತಪ್ಪಾಗಲ್ಲ. ಯಾಕೆಂದರೆ ಹೆಚ್ಚಿನ ಅಡುಗೆಯಲ್ಲಿ (Tomato Dosa Recipe) ಟೊಮೆಟೊ ಹಣ್ಣುಗಳನ್ನು ಬಳಸುತ್ತಾರೆ. ಅದರಲ್ಲೂ ನಗರಗಳಲ್ಲಿ ವಾಸಿಸುವ ಜನರು ಟೊಮೆಟೊ ಇಲ್ಲದೇ ತಿಂಡಿ, ಸಾರು-ಸಾಂಬರುಗಳನ್ನು ಮಾಡುವುದೇ ಇಲ್ಲ. ಕೆಂಪಾಗಿರುವ ಈ ಟೊಮೆಟೊ ಮಾರುಕಟ್ಟೆಯಲ್ಲಿ ತುಂಬಾ ದುಬಾರಿಯಾಗಿದೆ. ಇನ್ನು ಟೊಮೆಟೊ ರಸಂ, ಸಾರು, ಸಾಂಬರು, ಚಟ್ನಿ ಸೇರಿದಂತೆ ಅನೇಕ ವಿವಿಧ ಖಾದ್ಯಗಳನ್ನು ಸೇವಿರುತ್ತಾರೆ. ಇನ್ನು ಟೊಮೆಟೊ ಹಣ್ಣಿನಿಂದ ಗರಿ ಗರಿಯಾಗಿ ರುಚಿಯಾದ ದೋಸೆಯನ್ನು ಕೂಡ ಮಾಡಬಹುದಾಗಿದೆ. ನೀವು ಎಂದಾದರೂ ಟೊಮೆಟೊ ಹಣ್ಣಿನಿಂದ ಮಾಡಿದ ದೋಸೆ ತಿಂದಿದ್ದೀರಾ ? ಬಹಳ ಸುಲಭವಾಗಿ, ಬೇಗನೆ ಮಾಡುವ ಟೊಮೆಟೋ ರೆಸಿಪಿ ಬಗ್ಗೆ ಈ ಕೆಳಗೆ ತಿಳಿಸಲಾಗಿದೆ.

ಬೇಕಾಗುವ ಸಾಮಾಗ್ರಿ :

  • ಟೊಮೆಟೊ
  • ಸೂಜಿ ರವೆ
  • ಅಕ್ಕಿಹಿಟ್ಟು
  • ಗೋಧಿಹಿಟ್ಟು
  • ಹಸಿಶುಂಠಿ
  • ಖಾರದ ಪುಡಿ

ತಯಾರಿಸುವ ವಿಧಾನ :
ಮೊದಲಿಗೆ ಒಂದು ಮಿಕ್ಸಿ ಜಾರಿಗೆ ಕತ್ತರಿಸಿ ಇಟ್ಟುಕೊಂಡಿರುವ ಮೂರು ಟೊಮೆಟೊ, ಅರ್ಧ ಇಂಚು ಹಸಿ ಶುಂಠಿ ಹಾಗೂ ಒಂದು ಟೀ ಸ್ಪೂನ್‌ನಷ್ಟು ಖಾರದ ಪುಡಿ ಹಾಕಿಕೊಂಡು (ನೀರು ಹಾಕುವುದು ಬೇಡ) ನುಣ್ಣಗೆ ರುಬ್ಬುಕೊಳ್ಳಬೇಕು. ನುಣ್ಣಗೆ ರುಬ್ಬಿಕೊಂಡ ಟೊಮೆಟೊ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿಕೊಳ್ಳಬೇಕು. ನಂತರ ಅದಕ್ಕೆ ಅರ್ಧ ಕಪ್‌ ಸೂಜಿ ರವೆ, ಗೋಧಿ ಹಿಟ್ಟು ಹಾಗೂ ಅರ್ಧ ಕಪ್‌ ಅಕ್ಕಿ ಹಿಟ್ಟು ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.

ನಂತರ ಅದಕ್ಕೆ ಮೊದಲಿಗೆ ಒಂದು ಕಪ್‌ನಷ್ಟು ನೀರನ್ನು ಹಾಕಿಕೊಂಡು ಚೆನ್ನಾಗಿ ಹದ ಮಾಡಿಕೊಳ್ಳಬೇಕು. ಮತ್ತೆ ದೋಸೆ ಹಿಟ್ಟು ಹದಕ್ಕೆ ಬೇಕಾಗುವಷ್ಟು ನೀರನ್ನು ನೋಡಿಕೊಂಡು ಹಾಕಿಕೊಳ್ಳಬೇಕು. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪುನ್ನು ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಇದಕ್ಕೆ ಬೇಕಾದಲ್ಲಿ ಅರ್ಧ ಟೀ ಸ್ಪೂನ್‌ನಷ್ಟು ಕಾಳುಮೆಣಸಿನ ಪುಡಿ, ಜೀರಿಗೆ ಹಾಗೂ ಕೊತ್ತಂಬರಿ ಸೊಪ್ಪುನ್ನು ಹಾಕಿ ಮಿಕ್ಸ್‌ ಮಾಡಿ ಹತ್ತಿರರಿಂದ ಹದಿನೈದು ನಿಮಿಷ ಹಾಗೆ ಬಿಡಬೇಕು.

ಇದನ್ನೂ ಓದಿ : Dose Recipe : ಬೆಳಗ್ಗಿನ ತಿಂಡಿಗೆ ಏನ್‌ ಮಾಡೋದು ? ಅಂತಾ ಚಿಂತಿಸುವವರಿಗೆ ಇಲ್ಲಿದೆ ಸೂಪರ್‌ ದೋಸೆ ರೆಸಿಪಿ ಟಿಪ್ಸ್

ಆಮೇಲೆ ದೋಸೆ ಹಿಟ್ಟು ತುಂಬಾ ದಪ್ಪ ಅನಿಸಿದರೆ ಸ್ವಲ್ಪ ನೀರನ್ನು ಸೇರಿಕೊಳ್ಳಬಹುದು. ಟೊಮೆಟೊ ದೋಸೆ ರುಚಿ ಮತ್ತಷ್ಟು ಹೆಚ್ಚಿಸಲು ಸಣ್ಣಕ್ಕೆ ಈರುಳ್ಳಿ ಹಚ್ಚಿಕೊಂಡು ಹಾಕಿಕೊಳ್ಳಬಹುದು. ನಂತರ ಗ್ಯಾಸ್‌ ಮೇಲೆ ದೋಸೆ ತವಾ ಇಟ್ಟು ಕಾದ ಮೇಲೆ ಎಣ್ಣೆ ಹಚ್ಚಿ ಅದಕ್ಕೆ ದೋಸೆ ಹಿಟ್ಟನ್ನು ಹಾಕಿದರೆ ಗರಿ ಗರಿಯಾದ ರುಚಿಯಾದ ಟೊಮೆಟೋ ದೋಸೆ ಸವಿಯಲು ಸಿದ್ದವಾಗುತ್ತದೆ. ಇದಕ್ಕೆ ತೆಂಗಿನಕಾಯಿ ಚಟ್ನಿ ಜೊತೆ ಸವಿಯಲು ಇನ್ನು ರುಚಿಯಾಗಿರುತ್ತದೆ. ಇನ್ನು ಈ ದೋಸೆಯನ್ನು ದಿಢೀರ್‌ ಕೂಡ ಮಾಡಿಕೊಳ್ಳಬಹುದು.

Tomato Dosa Recipe: Have you ever eaten Tomato Dosa Recipe? Try this new recipe

Comments are closed.