Dose Recipe : ಬೆಳಗ್ಗಿನ ತಿಂಡಿಗೆ ಏನ್‌ ಮಾಡೋದು ? ಅಂತಾ ಚಿಂತಿಸುವವರಿಗೆ ಇಲ್ಲಿದೆ ಸೂಪರ್‌ ದೋಸೆ ರೆಸಿಪಿ ಟಿಪ್ಸ್

ಎಲ್ಲರ ಮನೆಯಲ್ಲೂ ಬೆಳಿಗ್ಗಿನ ತಿಂಡಿ (Dose Recipe) ಹಾಗೂ ಊಟಕ್ಕೆ ಏನು ಮಾಡುವುದು ಎನ್ನುವ ಚಿಂತೆ ಸರ್ವೆ ಸಾಮಾನ್ಯವಾಗಿರುತ್ತದೆ. ಪ್ರತಿಯೊಬ್ಬರ ಮನೆಯ ಜನರು ಬೆಳಿಗ್ಗೆ ತಿಂಡಿಯಲ್ಲಿ ಬದಲಾವಣೆಯನ್ನು ಬಯಸುತ್ತಾರೆ. ಯಾಕೆಂದರೆ ಒಂದೇ ತಿಂಡಿಯನ್ನು ದಿನಲೂ ತಿನ್ನಲು ಬಯಸುವುದಿಲ್ಲ. ಹಾಗಾಗಿ ಅಡುಗೆ ಮನೆಯ ಜವಬ್ದಾರಿ ಹೊತ್ತ ಮಹಿಳೆಗೆ ಇದೊಂದು ದೊಡ್ಡ ತಲೆ ನೋವು ಎಂದರೆ ತಪ್ಪಾಗಲ್ಲ. ಬೆಳಿಗ್ಗಿನ ತಿಂಡಿಗಾಗಿ ಚಿಂತಿಸುವವರಿಗಾಗಿ ಸೂಪರ್‌ ದೋಸೆ ಬಗ್ಗೆ ತಿಳಿದುಕೊಳ್ಳಿ. ಈ ದೋಸೆ ರೆಸಿಪಿಗೆ ಕಡಿಮೆ ಪದಾರ್ಥವನ್ನು ಬಳಸಿಕೊಂಡು ಸುಲಭವಾಗಿ ರುಚಿ ರುಚಿಯಾಗಿ ಮಾಡಬಹುದಾಗಿದೆ. ಹಾಗಾದರೆ ಈ ಸೂಪರ್‌ ದೋಸೆಯನ್ನು ಹೇಗೆ ತಯಾರಿಸಬಹುದು ಎನ್ನುವುದನ್ನು ಈ ಕೆಲಗೆ ತಿಳಿಸಲಾಗಿದೆ.

ಬೇಕಾಗುವ ಸಾಮಾಗ್ರಿ :

  • ಕೆಂಪು ಹಸಿ ಹುರಿಗಡಲೆ
  • ಅಕ್ಕಿ
  • ಅವಲಕ್ಕಿ

ತಯಾರಿಸುವ ವಿಧಾನ :
ಮೊದಲಿಗೆ ಎರಡು ಬೌಲ್‌ ಅಕ್ಕಿ, ಒಂದು ಕಪ್‌ ಕೆಂಪು ಹಸಿ ಹುರಿಗಡಲೆಯನ್ನು ಎರಡು ಮೂರು ಸಲ ಚೆನ್ನಾಗಿ ನೀರಲ್ಲಿ ತೊಳೆದುಕೊಳ್ಳಬೇಕು. ನಂತರ ಇವೆರಡನ್ನು ಮುಳುಗಿಸುವಷ್ಟು ನೀರನ್ನು ಹಾಕಿ ನೆನಸಿ ಇಡಬೇಕು. ಅಕ್ಕಿ ಮತ್ತು ಹುರಿಗಡಲೆಯನ್ನು ಸುಮಾರು ೮ ಗಂಟೆಗಳ ಕಾಲ ನೀರಿನಲ್ಲಿ ನೆನಸಿ ಇಡಬೇಕು. ಹೀಗಾಗಿ ಬೆಳಿಗ್ಗೆ ಅಕ್ಕಿ ಮತ್ತು ಹುರಿಗಡಲೆಯನ್ನು ನೆನೆಸಿ ಇಟ್ಟರೆ, ಸಂಜೆ ಒಳಗೆ ಚೆನ್ನಾಗಿ ನೆನದಿರುತ್ತದೆ. ಹಾಗೆಯೇ ಈ ದೋಸೆ ಹಿಟ್ಟಿಗೆ ಒಂದು ಬೌಲ್‌ ಆಗುವಷ್ಟು ಗಟ್ಟಿ ಅವಲಕ್ಕಿ ಅಥವಾ ನಾರ್ಮಲ್‌ ಅವಲಕ್ಕಿಯನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಇಟ್ಟುಕೊಳ್ಳಬೇಕು. ಆಮೇಲೆ ಗ್ರೈಂಡರ್‌ ಅಥವಾ ಮಿಕ್ಸಿಗೆ ಮೂರು ಪದಾರ್ಥಗಳನ್ನು ಹಾಕಿ ಹದಕ್ಕೆ ಬೇಕಾಗುವಷ್ಟು ನೀರನ್ನು ಹಾಕಿಕೊಂಡು ನುಣ್ಣಗೆ ರುಬಿಕೊಳ್ಳಬೇಕು.

ಈ ದೋಸೆ ಹಿಟ್ಟಿಗೆ ಅವಲಕ್ಕಿಯನ್ನು ಬಳಸುವುದರಿಂದ ದೋಸೆ ತುಂಬಾ ಸಾಫ್ಟ್‌ ಆಗಿ ಬರುತ್ತದೆ. ಹೀಗೆ ಅಕ್ಕಿ, ಹುರಿಗಡಲೆ ಹಾಗೂ ಅವಲಕ್ಕಿಯನ್ನು ಚೆನ್ನಾಗಿ ರುಬ್ಬಿಕೊಂಡ ಮೇಲೆ ಒಂದು ಪಾತ್ರೆಗೆ ಹಾಕಿಕೊಳ್ಳಬೇಕು. ಹೀಗೆ ರುಬ್ಬಿಕೊಂಡ ಹಿಟ್ಟಿಗೆ ಒಂದು ಸ್ಪೂನ್‌ನಷ್ಟು ಉಪ್ಪುನ್ನು ಹಾಕಿ ಕೈಯಲ್ಲಿ ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಬೇಕು. ಸಂಜೆ ಹೊತ್ತಿಗೆ ರುಬ್ಬಿಕೊಂಡ ಹಿಟ್ಟು ಚೆನ್ನಾಗಿ ಉಬ್ಬುವುದಕ್ಕಾಗಿ ಈಡೀ ರಾತ್ರಿ ಹಾಗೆ ಬಿಡಬೇಕಾಗುತ್ತದೆ. ಕೂಡಲೇ ದೋಸೆ ಮಾಡುವುದಾದರೆ ಬೇಕಿಂಗ್‌ ಸೋಡಾ ಅಥವಾ ಇನೋ ಪೌಡರ್‌ ಹಾಕಿಕೊಳ್ಳುವುದರಿಂದ ಕೂಡ ದೋಸೆ ಚೆನ್ನಾಗಿ ಬರುತ್ತದೆ.

ಇದನ್ನೂ ಓದಿ : Ghee Avalakki Recipe : ಮಳೆಗಾಲದ ಸಂಜೆ ಸ್ನಾಕ್‌ಗೆ ಟ್ರೈ ಮಾಡಿ ತುಪ್ಪದ ಅವಲಕ್ಕಿ

ಇದನ್ನೂ ಓದಿ : Carrot Coriander Juice Benefits‌ : ಕಾಂತಿಯುತ ಚರ್ಮಕ್ಕಾಗಿ ಕುಡಿಯಿರಿ ಕ್ಯಾರೆಟ್ ಕೊತ್ತಂಬರಿ ಜ್ಯೂಸ್

ಹೀಗೆ ಚೆನ್ನಾಗಿ ಉಬ್ಬಿರುವ ಹಿಟ್ಟನ್ನು ದೋಸೆ ಕಾವಲೆಗೆ ಸ್ವಲ್ಪ ಎಣ್ಣೆ ಅಥವಾ ತುಪ್ಪವನ್ನು ಹಂಚಿಕೊಳ್ಳುವುದರಿಂದ ದೋಸೆ ತುಂಬಾ ಚೆನ್ನಾಗಿ ಬರುತ್ತದೆ. ಇನ್ನು ದೋಸೆ ಹಿಟ್ಟನ್ನು ಹಾಕಿ ಅದರ ಮೇಲೆ ಹಚ್ಚಿ ಇಟ್ಟುಕೊಂಡ ಟೊಮೆಟೋ, ಈರುಳ್ಳಿ ಕೊತ್ತಂಬರಿ ಸೊಪ್ಪುನ್ನು ಹಾಕುವುದರಿಂದ ದೋಸೆ ಇನ್ನು ರುಚಿಯಾಗಿ ಬರುತ್ತದೆ. ಈ ದೋಸೆಯೊಂದಿಗೆ ಕಾಯಿಚಟ್ನಿ, ಟೊಮೆಟೋ ಚಟ್ನಿ ಇದ್ದರೆ ಸವಿಯಲು ಇನ್ನು ರುಚಿಯಾಗಿರುತ್ತದೆ.

Dose Recipe: What do you do for breakfast? For those who are worried, here are super dosa recipe tips

Comments are closed.