BeefCorn Idli: ಬೆಳಗಿನ ತಿಂಡಿಗೆ ತಯಾರಿಸಿ ಆರೋಗ್ಯಕರವಾದ ಗೋವಿನಜೋಳದ ಇಡ್ಲಿ

(Beef Corn Idli) ಗೋವಿನಜೋಳವನ್ನು ದೇಶದ ವಿವಿಧ ಭಾಗಗಳಲ್ಲಿ ಬೆಳೆಯುತ್ತಾರೆ. ಗೋವಿನಜೋಳ ಹಲವು ರೀತಿಯಲ್ಲಿ ಆಹಾರ ಕ್ರಮದಲ್ಲಿ ಬಳಕೆ ಮಾಡಲಾಗುತ್ತದೆ. ಬಯಲುಸೀಮೆ ಭಾಗಗಳಲ್ಲಿ ಗೋವಿನಜೋಳದ ಹಿಟ್ಟಿನ ರೊಟ್ಟಿ ಮಾಡಿ ತಿನ್ನುವುದು ರೂಢಿ. ಗೋವಿನಜೋಳ ಪೋಷಕಾಂಶ ಸಮೃದ್ಧವಾಗಿದ್ದು, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದ್ದು, ಹಲವು ಆರೋಗ್ಯ ಪ್ರಯೋಜನ ನೀಡುತ್ತದೆ. ಸಾಮಾನ್ಯವಾಗಿ ನೀವು ರವೆಯ ಇಡ್ಲಿಯನ್ನು ಬೆಳಗಿನ ತಿಂಡಿಗೆ ಸೇವನೆ ಮಾಡಿದ್ದಿರಾ. ಆದ್ರೆ ಇಂದು ನಾನು ಬೆಳಗಿನ ತಿಂಡಿಗೆ ಗೋವಿನಜೋಳದ ಇಡ್ಲಿ ಮಾಡುವುದು ಹೇಗೆ ಅಂತಾ ತಿಳಿಸುತ್ತೇನೆ.

ಗೋವಿನಜೋಳದ ಇಡ್ಲಿ (Beef Corn Idli) ಮಾಡಲು ಬೇಕಾಗುವ ಪದಾರ್ಥಗಳು
ಎರಡು ಬಟ್ಟಲು ಕಾರ್ನ್ ಹಿಟ್ಟು
ಒಂದು ಟೀಸ್ಪೂನ್ ಉದ್ದಿನಬೇಳೆ
ಕಡಲೆಬೇಳೆ ಒಂದು ಟೀ ಸ್ಪೂನ್
ಅರ್ಧ ಕಪ್ ಮೊಸರು
ಒಂದು ಟೀ ಸ್ಪೂನ್ ಜೀರಿಗೆ
ಸಣ್ಣದಾಗಿ ಕೊಚ್ಚಿದ ಎರಡು ಹಸಿರು ಮೆಣಸಿನಕಾಯಿ
ಒಂದು ಟೀ ಸ್ಪೂನ್ ಸಾಸಿವೆ
ಕರಿಬೇವಿನ ಎಲೆಗಳು
ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು
ಇನೋ ಒಂದು ಟೀ ಸ್ಪೂನ್
ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು

ಗೋವಿನಜೋಳದ ಇಡ್ಲಿ (BeefCorn Idli) ತಯಾರಿಸುವ ವಿಧಾನ
ಮೊದಲು ಪ್ಯಾನ್ ಅನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಲು ಇಡಿ. ನಂತರ ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಎಣ್ಣೆ ಬಿಸಿಯಾದ ಕೂಡಲೇ ಸಾಸಿವೆ ಮತ್ತು ಜೀರಿಗೆ ಹಾಕಿ. ನಂತರ ಉದ್ದಿನಬೇಳೆ ಮತ್ತು ಕಡಲೆ ಬೇಳೆಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ನಂತರ ಕರಿಬೇವಿನ ಸೊಪ್ಪು ಮತ್ತು ಹೆಚ್ಚಿಕೊಂಡಿರುವ ಹಸಿಮೆಣಸಿನಕಾಯಿಯನ್ನು ಹಾಕಿ 30 ಸೆಕೆಂಡುಗಳ ಕಾಲ ಚೆನ್ನಾಗಿ ಫ್ರೈ ಮಾಡಿ. ನಂತರ ಅದಕ್ಕೆ ಗೋವಿನಜೋಳದ ಹಿಟ್ಟು ಹಾಕಿ ನಿರಂತರವಾಗಿ ಕೈಯಾಡಿಸಿ ಮೂರು ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿ. ನಂತರ ದೊಡ್ಡ ಬೌಲ್ ತೆಗೆದುಕೊಂಡು ಅದಕ್ಕೆ ಒಗ್ಗರಣೆಗಳ ಜೊತೆಗೆ ಹುರಿದುಕೊಂಡ ಹಿಟ್ಟನ್ನು ಹಾಕಿ ಅದಕ್ಕೆ ಮೊಸರು ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿ. ಇಡ್ಲಿ ಹಿಟ್ಟಿನ ಸ್ಥಿರತೆಯನ್ನು ಗಮನದಲ್ಲಿಟ್ಟುಕೊಳ್ಳಿ. (ಬೇಕಾದಲ್ಲಿ ಬಟಾಣಿ, ಕ್ಯಾರೆಟ್, ಬೀನ್ಸ್ ಇತ್ಯಾದಿ ಸೇರಿಸಬಹುದು).ಕೊನೆಯಲ್ಲಿ ಅದಕ್ಕೆ ಇನೋ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ 15 ನಿಮಿಷ ನೆನೆಯಲು ಬಿಡಿ. ನಂತರ ಇಡ್ಲಿ ಪಾತ್ರೆಗೆ ನೀರು ಹಾಕಿ ಅದನ್ನು ಬಿಸಿ ಮಾಡಲು ಇಡಿ. ಹದಿನೈದು ನಿಮಿಷಗಳ ನಂತರ ಇಡ್ಲಿ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ ಇಡ್ಲಿ ಅಚ್ಚುಗಳಲ್ಲಿ ಹಿಟ್ಟನ್ನು ಹಾಕಿ ಬೇಯಲು ಇಡಿ. ಇಡ್ಲಿ ಬೆಂದ ಮೇಲೆ ತೆಗದು ಬಿಸಿ ಬಿಸಿ ಇರುವಾಗಲೇ ಸವಿಯಿರಿ.

ಚಳಿಗಾಲದಲ್ಲಿ ಗೋವಿನಜೋಳದ ಹಿಟ್ಟಿನಿಂದ ಮಾಡಿದ ಖಾದ್ಯಗಳು ಹಲವು ಕಾಯಿಲೆಗಳಿಂದ ರಕ್ಷಣೆ ನೀಡುತ್ತವೆ. ಮಲಬದ್ಧತೆ, ಕೊಲೆಸ್ಟ್ರಾಲ್, ರಕ್ತದೊತ್ತಡ, ರಕ್ತಹೀನತೆ ಮತ್ತು ಮೂಳೆಗಳ ಆರೋಗ್ಯ ಕಾಪಾಡಲು ಸಹಕಾರಿ ಆಗಿವೆ.

ಇದನ್ನೂ ಓದಿ : Mango Candy Recipe : ಹುಳಿ ಮಾವಿನ ಕಾಯಿಯ ಮ್ಯಾಂಗೋ ಕ್ಯಾಂಡಿ ಮನೆಯಲ್ಲೇ ತಯಾರಿಸಿಕೊಳ್ಳಿ

ಇದನ್ನೂ ಓದಿ : Most Searched Recipe on Google in 2022 : ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್‌ ಮಾಡಿದ ರೆಸಿಪಿ ಯಾವುದು ಗೊತ್ತಾ…

(Beef Corn Idli) Corn is grown in different parts of the country. Cowpea is used in many ways in the diet. In the plains, it is customary to make roti made of cowpea flour and eat it. Cowpea is nutrient rich, rich in vitamins and minerals and offers many health benefits.

Comments are closed.