ಭಾನುವಾರ, ಏಪ್ರಿಲ್ 27, 2025
HomeSpecial StoryBottle Gourd Benefits : ಬೇಸಿಗೆಯ ಸೂಪರ್‌ ತರಕಾರಿ : ಸೋರೆಕಾಯಿಯ ಈ 5 ಪ್ರಯೋಜನಗಳು...

Bottle Gourd Benefits : ಬೇಸಿಗೆಯ ಸೂಪರ್‌ ತರಕಾರಿ : ಸೋರೆಕಾಯಿಯ ಈ 5 ಪ್ರಯೋಜನಗಳು ನಿಮಗೆ ಗೊತ್ತೇ?

- Advertisement -

ಭಾರತದಲ್ಲಿ ಬೇಸಿಗೆಯ ತರಕಾರಿಯಾದ ಸೋರೆಕಾಯಿ (Bottle Gourd Benefits) ಅದ್ಭುತ ಪ್ರಯೋಜನಗಳನ್ನು ಹೊಂದಿದೆ. ಹಸಿವನ್ನು ನೀಗಿಸಲು ಒಳ್ಳೆ ತರಕಾರಿ ಏಕೆಂದರೆ ಶೇಕಡಾ 96 ರಷ್ಟು ನೀರಿನಾಂಶ ಹೊಂದಿದೆ. ಬೇಸಿಗೆಯಲ್ಲಿ ಇದು ದೇಹ ತಂಪಾಗಿರಿಸಲು ಮತ್ತು ಪುನಶ್ಚೇತನಗೊಳಿಸುತ್ತದೆ. ಸೋರೆಕಾಯಿ ಊಟಕ್ಕೆ ಉತ್ತಮವಾಗಿದ್ದು ಅತಿ ಹೆಚ್ಚಿನ ಪೋಷಕಾಂಶಗಳು ಮತ್ತು ಇತರೆ ನಾರಿನಾಂಶ ಹೊಂದಿದೆ. ಇದು ದೇಹ ತಂಪಾಗಿರಸಲು, ಹೊಟ್ಟಯ ಆರೋಗ್ಯಕ್ಕೆ ಮತ್ತು ಆರೋಗ್ಯದ ಅನುಕೂಲಕಾರಿಯಾಗಿದೆ. ಇದನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿಕೊಳ್ಳಿ, ಇದು ದೇಹತೂಕದಿಂದ ಹಿಡಿದು ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತದೆ.

ಬೇಸಿಗೆ ತರಕಾರಿಯಾದ ಸೋರೆಕಾಯಿಯ 5 ಆರೋಗ್ಯ ಪ್ರಯೋಜನಗಳು

  • ನಿರ್ಜಲೀಕರಣ ತಪ್ಪಿಸುತ್ತದೆ:
    ಬೇಸಿಗೆಯ ಕಡು ಬಿಸಿಲು ಉರಿ ಮತ್ತು ನಿರ್ಜಲೀಕರಣ ಹೊಂದುವಂತೆ ಮಾಡುತ್ತದೆ. ನಿರ್ಜಲೀಕರಣ ತಪ್ಪಿಸಲು ಹೆಚ್ಚಿನ ದ್ರವ ಆಹಾರ ಸೇವಿಸುವುದು ಅತಿ ಅಗತ್ಯ. ಬಿಸಿಲಿನ ಬೇಗೆ ತಣಿಯಲು ನೀರೊಂದೇ ಸಾಕಾಗುವುದಿಲ್ಲ ಅದರ ಜೊತೆಗೆ ಆಹಾರಗಳನ್ನೂ ಸೇವಿಸಬೇಕು. ಹಣ್ಣುಗಳ ಜೊತೆಗೆ ತರಕಾರಿಗಳನ್ನು ಸೇವಿಸಬೇಕು. ಅದಕ್ಕೆ ಸೋರೆಕಾಯಿ ಉತ್ತಮವಾಗಿದೆ.
  • ತೂಕ ಇಳಿಸಲು :
    ಸೋರೆಕಾಯಿಯಲ್ಲಿ ಶೇಕಡಾ 90 ನೀರಿದ್ದು ಕ್ಯಾಲೋರಿ ಮತ್ತು ಸೆಟ್ಯರೇಟೆಡ್‌ ಫ್ಯಾಟ್‌ಗಳಿಂದ ಕೂಡಿದೆ. ಇದರ ಪರಿಣಾಮ ಸೋರೆಕಾಯಿಯು ಹಗುರವಾದ ಆಹಾರವಾಗಿದೆ. ಇದರಲ್ಲಿಯ ಅಧಿಕ ನಾರಿನಾಂಶವು ಪಚನ ಕ್ರಿಯೆ ಹೆಚ್ಚಿಸುತ್ತದೆ. ಇದು ದೇಹದಲ್ಲಿರುವ ಕ್ಯಾಲೋರಿಯನ್ನು ತೆಗೆಯಲು ಸಹಕಾರಿ. ಕಡಿಮೆ ಕೊಲೆಸ್ಟ್ರಾಲ್‌ ಅನ್ನೂ ಹೊಂದಿದೆ. ವಿಟಾಮಿನ್‌ B, C, A, K, E, ಕಬ್ಬಿಣ, ಮ್ಯಾಗ್ನಾಸಿಯಂ ಗಳೆಲ್ಲವೂ ಈ ಬೇಸಿಗೆಯ ತರಕಾರಿಯಲ್ಲಿದೆ. ಸೋರೆಕಾಯಿ ಜ್ಯೂಸ್‌ ತೂಕ ಇಳಸಿಲು ಸಹಕಾರಿಯಾಗಿದೆ.

ಇದನ್ನೂ ಓದಿ :Mango Rice: ಮಾವಿನಕಾಯಿ ಚಿತ್ರಾನ್ನ ಮಾಡುವುದು ಹೇಗೆ ಗೊತ್ತೇ? ಈ ಸೀಸನ್ನಲ್ಲಿ ನೀವೂ ಮಾಡಿ ನೋಡಿ

  • ಹೃದಯದ ಆರೋಗ್ಯ ಕಾಪಾಡಲು :
    ಸೋರೆಕಾಯಿಯಲ್ಲಿ ಉಪ್ಪು, ಪೋಟ್ಯಾಶಿಯಂ, ಮುಖ್ಯವಾದ ಖನಿಜಗಳು ಮತ್ತು ಇತರೆ ಅಂಶಗಳು ಅಧಿಕ ರಕ್ತದೊತ್ತಡದಂತಹ ಹೃದಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಕೊಲೆಸ್ಟ್ರಾಲ್‌ ಪ್ರಮಾಣವನ್ನು ತಗ್ಗಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿಭಾಯಿಸುತ್ತದೆ. ಇದು ರಕ್ತವು ಸುಲಭವಾಗಿ ಹೃದಯದಿಂದ ದೇಹದ ಇತರೆ ಭಾಗಗಳಿಗೆ ಸಾಗಿಸಲು ಸಹಾಯ ಮಾಡುತ್ತದೆ.
  • ಮಲಬದ್ಧತೆ ದೂರಮಾಡಲು:
    ಸೋರೆಕಾಯಿಯು ಬೇಸಿಗೆ ಸ್ನೇಹಿ ತರಕಾರಿಯಾಗಿದೆ. ಇದರಲ್ಲಿಯ ಅಧಿಕ ನೀರಿನಾಂಶವು ಮಲಬದ್ಧತೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಸೋರೆಕಾಯಿಯಲ್ಲಿ ನೀರಿನ ಅಂಶದ ಜೊತೆಗೆ ಆಹಾರದ ಫೈಬರ್‌ ಗಳಿದ್ದು ಜೀರ್ಣಕ್ರಿಯೆ ಸುಧಾರಿಸಿ ಎಸಿಡಿಟಿ ಮತ್ತು ಗ್ಯಾಸ್‌ ಕಡಿಮೆ ಮಾಡುತ್ತದೆ.
  • ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ:
    ಸೋರೆಕಾಯಿ ಬೇಸಿಗೆಗೆ ಉತ್ತಮ ತರಕಾರಿ. ನೀರಿನ ಅಂಶ ಅಧಿಕವಾಗಿರುವ ಈ ತರಕಾರಿಯಿಂದ ಬಹಳ ಪ್ರಯೋಜನಗಳಿವೆ. ಇದನ್ನು ಜ್ಯೂಸ್‌, ಪಲ್ಯ ಅಥವಾ ಸೂಪ್‌ ಮುಂತಾದವುಗಳನ್ನು ಮಾಡಿ ಸೇವಿಸಬಹುದು. ಈ ತರಕಾರಿಯು ಜೀರ್ಣಕ್ರಿಯೆ ವೃದ್ಧಿಸುತ್ತದೆ ಮತ್ತು ಇದರಲ್ಲಿಯ ನಾರಿನಾಂಶವು ಎಸಿಡಿಟಿಯನ್ನು ಕಡಿಮೆ ಮಾಡುತ್ತದೆ. ಸೋರೆಕಾಯಿ ಮನಸ್ಸು ಮತ್ತು ದೇಹಕ್ಕೆ ವಿಶ್ರಾಂತಿಯನ್ನು ಒದಗಿಸುತ್ತದೆ. ಜೊತೆಗೆ ಒತ್ತಡ ನಿವಾರಕ ಮತ್ತು ರೋಗನಿರೋಧಕ ಗುಣವನ್ನು ಹೊಂದಿದೆ.

ಇದನ್ನೂ ಓದಿ :Chikoo Benefits : ಚಿಕ್ಕೂ ಹಣ್ಣಿನ ಈ ಎಲ್ಲಾ ಆರೋಗ್ಯ ಪ್ರಯೋಜನಗಳನ್ನ ತಿಳಿದರೆ ನೀವು ತಿನ್ನದೇ ಇರಲು ಸಾಧ್ಯಾನೇ ಇಲ್ಲ!

(Bottle Gourd Benefits weight loss to constipation add this superfood to your diet)

RELATED ARTICLES

Most Popular