Ramya Krishnan : 23 ವರ್ಷಗಳ ನಂತರ ರಜನಿಕಾಂತ್ ಜೊತೆ ರಮ್ಯಾ ಕೃಷ್ಣ ನಟನೆ!!

ಸೂಪರ್ ಸ್ಟಾರ್ ರಜನಿಕಾಂತ್( Super Srar Rajanikanth) ಸುಮಾರು ವರ್ಷಗಳ ನಂತರ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ದಕ್ಷಿಣಭಾರತದ ಹಿರಿಯ ನಟಿ ರಮ್ಯಾ ಕೃಷ್ಣ(Ramya Krishnan) ಕೂಡ ಈ ಸಿನಿಮಾದಲ್ಲಿ ಒಂದು ಮಹತ್ವದ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನುವ ಸುದ್ದಿ ಜೋರಾಗಿ ಹರಿದಾಡುತ್ತಿದೆ. ನೆಲ್ಸನ್ ದಿಲೀಪ್ ಕುಮಾರ್ ಇವರ ಮುಂದಿನ ಚಿತ್ರ ತಲೈವರ್ 169 ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ದಿಲೀಪ್ ಕುಮಾರ್ ಅವರ ಬೀಸ್ಟ್ ಇತ್ತೀಚೆಗೆ ತೆರೆಕಂಡು ಮಿಶ್ರಪ್ರತಿಕ್ರಿಯೆ ಬಂತು. ಈ ಹಿನ್ನೆಲೆಯಲ್ಲಿ ತಲೈವರ್ ಸಿನಿಮಾ ನಿರ್ದೇಶಕರು ಬದಲಾಗುತ್ತಾರೆ ಅನ್ನೋ ಸುದ್ದಿ ಕೂಡ ಹೊರಬಿತ್ತು. ನಮ್ಮ ಸಿನಿಮಾಗಳಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ನಿರ್ದೇಶಕರನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ನಟ ರಜನೀಕಾಂತ್ ಟ್ವೀಟ್ ಮೂಲಕ ಗಾಳಿಸುದ್ದಿಯನ್ನು ಟುಸ್ ಮಾಡಿದರು.

ತಲೈವರ್ ಸಿನಿಮಾ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಈ ಮಧ್ಯೆ ದಕ್ಷಿಣಭಾರತದ ಹಿರಿಯ ನಟಿ ರಮ್ಯಾ ಕೃಷ್ಣ ಕೂಡ ಈ ಸಿನಿಮಾದಲ್ಲಿ ಒಂದು ಮಹತ್ವದ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನುವ ಸುದ್ದಿ ಜೋರಾಗಿ ಹರಿದಾಡುತ್ತಿದೆ. ರಜನಿಕಾಂತ್ ಜೋಡಿಯಾಗಿ ರಮ್ಯಾಕೃಷ್ಣ ಇದೇನು ಮೊದಲು ಬಾರಿ ನಟಿಸುತ್ತಿಲ್ಲ. 1999ರಲ್ಲಿ ತೆರೆಕಂಡ ರಜನಿಕಾಂತ್ ಅವರ ಪಡಿಯಪ್ಪ ಸಿನಿಮಾದಲ್ಲಿ ರಮ್ಯಾ ಕೃಷ್ಣ ನೆಗೆಟೀವ್ ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇಬ್ಬರ ಜೋಡಿಯನ್ನು ಜನ ಮೆಚ್ಚಿದ್ದರು. ಈಗ ಮತ್ತೊಮ್ಮೆ ಈ ಹಿರಿಯ ಜೋಡಿಗಳು ತೆರೆಮೇಲೆ ಬರಲಿದೆಯಂತೆ. ಈ ಸಿನಿಮಾದಲ್ಲೂ ರಮ್ಯಾಕೃಷ್ಣ ಅವರಿಗೆ ಅದ್ಬುತ ಪಾತ್ರ ನೀಡಿದ್ದಾರೆ ದಿಲೀಪ್. ಈಗಾಗಲೇ ರಮ್ಯಾ ಸಿನಿಮಾ ಒಪ್ಪಂದಕ್ಕೆ ಸಹಿಹಾಕಿದ್ದು,ಆಗಸ್ಟ್ ನಿಂದ ತಲೈವರ್ 169 ಸಿನಿಮಾದ ಚಿತ್ರೀಕರಣ ಆರಂಭಗೊಳ್ಳಲಿದೆ.

ಇನ್ನೊಂದು ಮೂಲದ ಪ್ರಕಾರ, ಇದೊಂದು ರೀತಿ ಪಾನ್ ಇಂಡಿಯಾ ಪಾತ್ರವರ್ಗವನ್ನೊ ಒಳಗೊಳ್ಳಲಿದೆಯಂತೆ. ಐಶ್ವರ್ಯ ರೈ ಬಚ್ಚನ್, ಪ್ರಿಯಾಂಕ ಮೋಹನ್ ಕೂಡ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ. ಈ ಬಗ್ಗೆ ಮಾತುಕತೆಗಳು ನಡೆಯುತ್ತಿದ್ದು ಅಧಿಕೃತ ಘೋಷಣೆಯಾಗಬೇಕಿದೆ. ನೆಲ್ಸನ್ ದಿಲೀಪ್ ಕುಮಾರ್ ರಜನಿಕಾಂತ್ ಸಿನಿಮಾ ಪೂರೈಸಿದ ನಂತರ ಅವರ ಮಾಜಿ ಅಳಿಯ ಧನುಷ್ ಅವರ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಈ ಬಗ್ಗೆ ದಿಲೀಪ್ ಸ್ಪಷ್ಟನೆ ನೀಡಿಲ್ಲವಾದರೂ, ಧನುಷ್ ಅವರಿಗೆ ಕಥೆ ಎಳೆಯನ್ನು ಹೇಳಿದ್ದಾರಂತೆ. ಧನುಷ್ ಅದು ಇಷ್ಟವಾಗಿದೆಯಾದರೂ,ತಮ್ಮ ನಿರ್ಧಾರವನ್ನು ಇನ್ನೂ ಪ್ರಕಟಮಾಡಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಪ್ರಸ್ತುತ ಧನುಷ್ ಕೈಯಲ್ಲಿ ಹೆಚ್ಚು ಕಡಿಮೆ ನಾಲ್ಕು ಚಿತ್ರಗಳಿವೆ. ಇದನ್ನು ಪೂರೈಸಿ ದಿಲೀಪ್ ಕುಮಾರ್ ಕಥೆಯತ್ತ ಗಮನ ಹರಿಸಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ : KGF 2  : ವಿಶ್ವದಾದ್ಯಂತ 900 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸಿದ ಕೆಜಿಎಫ್​ -2

ಇದನ್ನೂ ಓದಿ : Ram Gopal Verma : ಬಾಲಿವುಡ್ ಗೆ ಆಗಲೇ ಹಬ್ಬಿದೆ, ಸೌತ್ ಇಂಡಿಯನ್ ಅನ್ನೋ ಕೊರೋನಾ: ರಾಮ್ ಗೋಪಾಲ್ ವರ್ಮಾ

(Ramya Krishnan in Rajanikanth’s new film)

Comments are closed.