Breakfast Recipes : ಬೆಳಗ್ಗಿನ ತಿಂಡಿಗೆ ಮಾಡಿ ಸಿಂಪಲ್‌ ರಾಗಿ ದೋಸೆ

ರಾಗಿ (Finger Millet) ಸಿರಿಧಾನ್ಯಗಳಲ್ಲಿ ಒಂದು. ದಕ್ಷಿಣ ಭಾರತದ ಊಟದಲ್ಲಿ (South Indian Meals) ರಾಗಿಯನ್ನು ಹೆಚ್ಚಾಗಿ ಬಳಸುತ್ತಾರೆ. ರಾಗಿ ಹಿಟ್ಟಿನಿಂದ ಮುದ್ದೆ, ರೊಟ್ಟಿ, ದೋಸೆ ಹೀಗೆ ಅನೇಕ ತಿಂಡಿಗಳನ್ನು ತಯಾರಿಸುತ್ತಾರೆ. ರಾಗಿ ಡಯಾಬಿಟಿಸ್‌ ಇದ್ದವರಿಗೆ ಬಹಳ ಉತ್ತಮ. ಮಕ್ಕಳಿಗೂ ರಾಗಿ ಮಾಲ್ಟ್‌ ಅಚ್ಚು ಮೆಚ್ಚು. ರಾಗಿಯ ಇನಸ್ಟಂಟ್‌ ದೋಸಾ ಮಾಡುವುದು ಬಹಳ ಸುಲಭ. ಇದಕ್ಕೆ ರಾಗಿ ಹಿಟ್ಟು, ಅಕ್ಕಿ ಹಿಟ್ಟು, ಮೊಸರು ಮತ್ತು ನೀರು ಇದ್ದರೆ ಸಾಕು. ಗರಿಗರಿಯಾದ ದೋಸೆ (Breakfast Recipes) ತಯಾರಿಸಬಹುದು. ಪೋಷಕಾಂಶಭರಿತ ರಾಗಿ ದೋಸೆ ತಯಾರಿಸವು ವಿಧಾನ ಇಲ್ಲಿದೆ.

ದಿನದ ಅತ್ಯಂತ ಮಹತ್ವದ ಊಟವೆಂದರೆ ಬೆಳಗ್ಗಿನ ಉಪಹಾರ ಎಂದು ಎಲ್ಲರಿಗೂ ತಿಳಿದೇ ಇದೆ. ಪರಿಣಾಮವಾಗಿ, ಪೌಷ್ಠಿಕಾಂಶವುಳ್ಳ ಉಪಹಾರವನ್ನು ತಿನ್ನಲು ಸಲಹೆ ನೀಡಲಾಗುತ್ತದೆ, ಅದು ದಿನಪೂರ್ತಿ ನಿಮ್ಮನ್ನು ಶಕ್ತಿಯುತವಾಗಿ ಮತ್ತು ತೃಪ್ತಿಯಿಂದ ಇರುವಂತೆ ಮಾಡುತ್ತದೆ.


ಇದನ್ನೂ ಓದಿ :Benefits of Papaya : ಉತ್ತಮ ಆರೋಗ್ಯಕ್ಕೆ ರಾಮಬಾಣ ಪಪ್ಪಾಯ ಹಣ್ಣು

ರಾಗಿ ದೋಸೆ ಮಾಡುವುದು ಹೇಗೆ?

ಬೇಕಾಗುವ ಪದಾರ್ಥಗಳು:
ಒಂದು ಕಪ್‌ ರಾಗಿ ಹಿಟ್ಟು
ಒಂದು ಚಮಚ ಅಕ್ಕಿ ಹಿಟ್ಟು
ಅರ್ಧ ಕಪ್ಪ ಮೊಸರು
ಉಪ್ಪು
ಬೆಣ್ಣೆ ಅಥವಾ ತುಪ್ಪ

ಮಾಡುವ ವಿಧಾನ:
ರಾಗಿ ಹಿಟ್ಟು, ಅಕ್ಕಿ ಹಿಟ್ಟು ಮತ್ತು ಮೊಸರು ಈ ಎಲ್ಲಾ ಪದಾರ್ಥಗಳನ್ನು ಒಂದು ಪಾತ್ರೆಗೆ ಹಾಕಿ ಮಿಕ್ಸ್‌ ಮಾಡಿ. ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ. ಅದು ದೋಸೆ ಹಿಟ್ಟಿನ ರೀತಿಯಲ್ಲೆ ಇರಲಿ. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ತವಾ ಬಿಸಿಯಾದ ನಂತರ ದೋಸೆ ಹಾಕಿ, ಮೇಲಿನಿಂದ ಬೆಣ್ಣೆ ಅಥವಾ ತುಪ್ಪ ಸವರಿ ಗರಿಗರಿಯಾಗಿ ಬೇಯಿಸಿ.

ಸಿರಿಧಾನ್ಯ ರಾಗಿಯಿಂದ ತಯಾರಿಸಿದ ದೋಸೆ, ಬೆಳಗ್ಗಿನ ರುಚಿಯಾದ ಉಪಹಾರದ ಜೊತೆಗೆ ನಿಮಗೆ ಸಾಕಷ್ಟು ಪೋಷಕಾಂಶಗಳನ್ನು ನೀಡುತ್ತದೆ.

ಇದನ್ನೂ ಓದಿ : Music Therapy : ಸಂಗೀತದಿಂದ ಸ್ವಾಸ್ಥ್ಯ : ಸಾಮಾನ್ಯ ಮಾನಸಿಕ ಆರೋಗ್ಯ ಸುಧಾರಣೆಗೆ ಇದು ಬಹಳ ಮುಖ್ಯ

(Breakfast Recipes do you know how to make ragi instant dosa)

Comments are closed.