Virat Kohli world record : ಟಿ20 ವಿಶ್ವಕಪ್‌ನಲ್ಲಿ ವಿರಾಟ್ “ರನ್ ಕಿಂಗ್”, ಲಂಕಾ ದಿಗ್ಗಜನ ವಿಶ್ವದಾಖಲೆ ಪುಡಿಗಟ್ಟಿದ ಕೊಹ್ಲಿ

ಅಡಿಲೇಡ್ : (Virat Kohli world record) ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ (T20 World Cup) ಇತಿಹಾಸದಲ್ಲಿ ಅತೀ ಹೆಚ್ಚು ರನ್’ಗಳ ವಿಶ್ವದಾಖಲೆ(Virat Kohli world record) ಬರೆದಿದ್ದಾರೆ (Most runs in ICC T20 world cup history).


ತಮ್ಮ ನೆಚ್ಚಿನ ಅಡಿಲೇಡ್ ಓವಲ್ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧದ (India Vs Bangladesh) ಸೂಪರ್-12 ಪಂದ್ಯದಲ್ಲಿ ಕೊಹ್ಲಿ ಈ ದಾಖಲೆ(Virat Kohli world record) ನಿರ್ಮಿಸಿದ್ದಾರೆ.
ಬಾಂಗ್ಲಾದೇಶ ವಿರುದ್ಧ 16 ರನ್ ಗಳಿಸಿದ್ದಾಗ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತೀ ಹೆಚ್ಚು ರನ್ ಗಳಿಸಿದ್ದ ಶ್ರೀಲಂಕಾ ದಿಗ್ಗಡ ಮಹೇಲ ಜಯವರ್ಧನೆ ಅವರ ವಿಶ್ವದಾಖಲೆಯನ್ನು ಪುಡಿಗಟ್ಟಿದರು. ಜಯವರ್ಧನೆ ಟಿ20 ವಿಶ್ವಕಪ್’ನಲ್ಲಿ ಆಡಿದ 31 ಇನ್ನಿಂಗ್ಸ್’ಗಳಲ್ಲಿ 6 ಅರ್ಧಶತಕಗಳ ಸಹಿತ 1016 ರನ್ ಗಳಿಸಿದ್ದರು. ಜಯವರ್ಧನೆ 31 ಇನ್ನಿಂಗ್ಸ್’ಗಳಲ್ಲಿ 1000+ ರನ್ ಗಳಿಸಿದ್ರೆ, ವಿರಾಟ್ ಕೊಹ್ಲಿ ಕೇವಲ 23 ಇನ್ನಿಂಗ್ಸ್’ಗಳಲ್ಲಿ ಈ ಸಾಧನೆ ಮಾಡಿದ್ದು, 13 ಅರ್ಧಶತಗಳ ಸಹಿತ 1065 ರನ್ ಕಲೆ ಹಾಕಿದ್ದಾರೆ.

ಇದನ್ನೂ ಓದಿ : KL Rahul back in form: ಟೀಕಾಕಾರರಿಗೆ ಅಬ್ಬರದ ಅರ್ಧಶತಕದೊಂದಿಗೆ ಉತ್ತರಿಸಿದ ರಾಹುಲ್, ವರ್ಕೌಟ್ ಆಯ್ತು ಕೊಹ್ಲಿ ಟಿಪ್ಸ್

ಇದನ್ನೂ ಓದಿ : Kohli with KL Rahul : ಫಾರ್ಮ್ ಕಳೆದುಕೊಂಡ ಕೆ.ಎಲ್ ರಾಹುಲ್ ನೆರವಿಗೆ ಧಾವಿಸಿದ ವಿರಾಟ್ ಕೊಹ್ಲಿ

ಇದನ್ನೂ ಓದಿ : Dewald Brevis : 57 ಎಸೆತಗಳಲ್ಲಿ 162 ರನ್ ಚಚ್ಚಿದ ಮರಿ ಎಬಿಡಿ, ಡಿವಿಲಿಯರ್ಸ್ ಫುಲ್ ಖುಷ್

ಟಿ20 ವಿಶ್ವಕಪ್: ಅತೀ ಹೆಚ್ಚು ರನ್ (ಟಾಪ್-5)

  1. ವಿರಾಟ್ ಕೊಹ್ಲಿ (ಭಾರತ): 1065 ರನ್, 23 ಇನ್ನಿಂಗ್ಸ್, 13 ಅರ್ಧಶತಕ
  2. ಮಹೇಲ ಜಯವರ್ಧನೆ (ಶ್ರೀಲಂಕಾ): 1016 ರನ್, 31 ಇನ್ನಿಂಗ್ಸ್, 6 ಅರ್ಧಶತಕ
  3. ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್): 965 ರನ್, 31 ಇನ್ನಿಂಗ್ಸ್, 7 ಅರ್ಧಶತಕ
  4. ರೋಹಿತ್ ಶರ್ಮಾ (ಭಾರತ): 921 ರನ್, 34 ಇನ್ನಿಂಗ್ಸ್, 9 ಅರ್ಧಶತಕ
  5. ತಿಲಕರತ್ನೆ ದಿಲ್ಷಾನ್ (ಶ್ರೀಲಂಕಾ): 897 ರನ್, 34 ಇನ್ನಿಂಗ್ಸ್, 6 ಅರ್ಧಶತಕ

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್’ನಲ್ಲಿ ಅಮೋಘ ಆಟ ಪ್ರದರ್ಶಿಸುತ್ತಿರುವ ವಿರಾಟ್ ಕೊಹ್ಲಿ, ಟೂರ್ನಿಯಲ್ಲಿ 3ನೇ ಅರ್ಧಶತಕ ಬಾರಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧ ಕೇವಲ 37 ಎಸೆತಗಳಲ್ಲಿ ಅರ್ಧಶತಕದ ಗಡಿ ತಲುಪಿದ ಕಿಂಗ್ ಕೊಹ್ಲಿ, ಅಂತಿಮವಾಗಿ 44 ಎಸೆತಗಳಲ್ಲಿ 64 ರನ್ ಗಳಿಸಿ ಅಜೇಯರಾಗುಳಿದರು.
ಪಾಕಿಸ್ತಾನ ವಿರುದ್ಧ ಸ್ಫೋಟಕ ಅಜೇಯ 82 ರನ್ ಗಳಿಸಿದ್ದ ವಿರಾಟ್, ನೆದರ್ಲೆಂಡ್ಸ್ ವಿರುದ್ಧ ಅಜೇಯ 62 ರನ್ ಬಾರಿಸಿದ್ದರು. ದಕ್ಷಿಣ ಆಫ್ರಿಕಾ ವರುದ್ಧ 12 ರನ್ನಿಗೆ ಔಟಾಗಿದ್ದ ಕೊಹ್ಲಿ, ಈಗ ಮತ್ತೆ ಬಾಂಗ್ಲಾದೇಶ ವಿರುದ್ಧ ಮತ್ತೊಂದು ಅರ್ಧಶತಕದೊಂದಿಗೆ ಅಬ್ಬರಿಸಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ (50 ರನ್, 32 ಎಸೆತ, 3 ಬೌಂಡರಿ, 4 ಸಿಕ್ಸರ್) ಅವರ ಅರ್ಧಶತಕಗಳ ಬಲದಿಂದ ಬಾಂಗ್ಲಾದೇಶ ವಿರುದ್ಧ ಭಾರತ ನಿಗದಿತ 20 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 184 ರನ್ ಕಲೆ ಹಾಕಿತು.

(Virat Kohli world record) Team India’s run machine Virat Kohli has written the world record of most runs in ICC T20 world cup history.

Comments are closed.