Fenugreek Gravy:ಪಲ್ಯದ ಬದಲು ಸ್ಫೆಷಲ್‌ ಮೆಂತೆ ಸೊಪ್ಪಿನ ಗ್ರೇವಿ

(Fenugreek Gravy)ಸೊಪ್ಪಿನಿಂದ ಮಾಡುವ ಪಲ್ಯವೆಂದರೆ ಮೂಗು ಮುರಿಯುವವರೆ ಹೆಚ್ಚು, ಇದನ್ನು ತಿನ್ನಲು ಇಷ್ಟ ಪಡುವುದಿಲ್ಲ. ಆದರೆ ಸೊಪ್ಪಿನ ಪಲ್ಯ ತಿನ್ನುವುದರಿಂದ ಉಪಯೋಗಗಳು ಬಹಳಷ್ಟಿದೆ. ಅದರಲ್ಲೂ ಮೆಂತೆ ಸೊಪ್ಪು ಅತಿ ಹೆಚ್ಚು ಔಷಧಿಯ ಗುಣವನ್ನು ಹೊಂದಿದೆ. ಮೆಂತೆ ಸೊಪ್ಪು ತಿನ್ನಲು ಕಹಿ ಆದರು ಇದನ್ನು ನಿತ್ಯ ಆಹಾರದಲ್ಲಿ ಬಳಕೆ ಮಾಡುವುದರಿಂದ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಇದರ ಪಲ್ಯವನ್ನು ತಿನ್ನಲು ಹೆಚ್ಚಿನವರು ಇಷ್ಟ ಪಡುವುದಿಲ್ಲ ಹಾಗಾಗಿ ಮೆಂತೆ ಸೊಪ್ಪಿನ ಪಲ್ಯವನ್ನು ಈಗಿನ ಶೈಲಿಯಲ್ಲಿ ಮಾಡುವ ಗ್ರೇವಿಯ ರೀತಿ ಮಾಡಿದರೆ ಮನೆಯವರೆಲ್ಲರೂ ಚಪ್ಪರಿಸಿಕೊಂಡು ಈ ಪಲ್ಯವನ್ನು ತಿನ್ನುತ್ತಾರೆ. ಮೆಂತೆ ಸೊಪ್ಪಿನ ಗ್ರೇವಿಯನ್ನು ಮಾಡುವ ಬಗ್ಗೆ ತಿಳಿಸಲಾಗಿದೆ.

(Fenugreek Gravy)ಬೇಕಾಗುವ ಸಾಮಗ್ರಿಗಳು:

  • ಈರುಳ್ಳಿ
  • ಹಸಿ ಮೆಣಸಿನಕಾಯಿ
  • ಶುಂಠಿ
  • ಗೊಡಂಬಿ
  • ಗಸಗಸೆ
  • ಬೆಳ್ಳುಳ್ಳಿ
  • ತುಪ್ಪ
  • ಜೀರಿಗೆ
  • ಹಾಲು
  • ಕ್ರೀಮ್ (cooking cream)
  • ಗರಮ್ ಮಸಾಲ
  • ಮೆಂತೆ ಸೊಪ್ಪು
  • ಉಪ್ಪು
  • ಹಸಿರು ಬಟಾಣಿ

ಮಾಡುವ ವಿಧಾನ:

ಮಿಕ್ಸಿ ಜಾರಿನಲ್ಲಿ ಹೆಚ್ಚಿಕೊಂಡ ಒಂದು ಈರುಳ್ಳಿ, ಎರಡು ಹಸಿ ಮೆಣಸಿನಕಾಯಿ,ಅರ್ಧ ಶುಂಠಿ , 10 ರಿಂದ 15ಗೊಡಂಬಿ, ಎರಡು ಚಮಚ ಗಸಗಸೆ, 3 ರಿಂದ 4 ಬೆಳ್ಳುಳ್ಳಿ ಹಾಕಿ ರುಬ್ಬಿಕೊಳ್ಳಬೇಕು.

ಒಂದು ಬಾಣಲೆಯಲ್ಲಿ ಎರಡು ಚಮಚ ತುಪ್ಪವನ್ನು ಕಾಯಿಸಿ ಅದಕ್ಕೆ ಅರ್ಧ ಚಮಚ ಜೀರಿಗೆ ಹಾಕಬೇಕು. ನಂತರ ರುಬ್ಬಿಕೊಂಡ ಮಸಾಲೆ, ಮೆಂತೆ ಸೊಪ್ಪು ಹಾಕಿ ಎರಡು ನಿಮಿಷ ಬೇಯಿಸಬೇಕು ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ನೀರು, ಕಾಲು ಕಪ್ ಕ್ರೀಮ್, ಒಂದು ಕಪ್ ಹಾಲು, ಬೇಯಿಸಿ ಕೊಂಡ ಹಸಿರು ಬಟಾಣಿ, ಗರಂ ಮಸಾಲ ಹಾಕಿ ಬೇಯಿಸಿದರೆ ಮೆಂತೆ ಸೊಪ್ಪಿನ ಪಲ್ಯ ರೆಡಿ.‌

ಇದನ್ನೂ ಓದಿ:Chocolate Desserts:ನೀವು ಚಾಕೊಲೆಟ್ ಪ್ರಿಯರೇ ? ಸುಲಭವಾಗಿ ತಯಾರಿಸಿ ಚಾಕೋಲೆಟ್ ಡೆಸಾರ್ಟ್

ಇದನ್ನೂ ಓದಿ:World Kannada festival : ನವೆಂಬರ್ 19ರಂದು ಅರಬರನಾಡು ದುಬೈನಲ್ಲಿ ‘ವಿಶ್ವ ಕನ್ನಡ ಹಬ್ಬ’

ಪೌಷ್ಟಿಕಾಂಶದ ಆಗರವೆಂದು ಕರೆಸಿಕೊಳ್ಳುವ ಮೆಂತೆ ಸೊಪ್ಪಿನಿಂದ ಹಲವಾರು ಆರೋಗ್ಯದ ಪ್ರಯೋಜನಗಳಿವೆ. ಹೊಟ್ಟೆ ನೋವು,ಅಜೀರ್ಣ, ಗ್ಯಾಸ್‌ ಹಾಗೂ ತ್ವಚೆಯ ಸಮಸ್ಯೆ ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳನ್ನು ನಿವಾರಿಸುವಂತಹ ಶಕ್ತಿ ಮೆಂತೆ ಸೊಪ್ಪಿಗಿದೆ.
ದೇಹದ ನೋವು,ಕಿಡ್ನಿ ಸಮಸ್ಯೆ ಮತ್ತು ಊತವನ್ನು ಕಡಿಮೆ ಮಾಡುತ್ತದೆ. ಜೊತೆಗೆ ದೇಹಕ್ಕೆ ಬೇಕಾಗುವಂತಹ ನಾರಿನ ಅಂಶವನ್ನು ಅಧಿಕ ಪ್ರಮಾಣದಲ್ಲಿ ನೀಡುತ್ತದೆ. ಹಾಗಾಗಿ ಇದರಿಂದ ಮಲಬದ್ಧತೆಯ ಸಮಸ್ಯೆ ಪರಿಹಾರವಾಗುತ್ತದೆ.

How to prepare Fenugreek Gravy

Comments are closed.