Potato Samosas : ಮನೆಯಲ್ಲೇ ಮಾಡಿ ಬೇಕರಿ ಶೈಲಿಯ ಆಲೂ ಸಮೋಸ

Potato samosas : ಸಮೋಸಾ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಸಾಲೆಯುಕ್ತ ಆಲೂಗಡ್ಡೆ ಮತ್ತು ಸರಳವಾದ ಹಿಟ್ಟಿನಿಂದ ಮಾಡಿದ ಡೀಪ್ ಫ್ರೈಡ್ ಸ್ನ್ಯಾಕ್ ರೆಸಿಪಿ ಹಲವರ ಫೇವರಿಟ್‌. ತರಕಾರಿಗಳ ಮಿಶ್ರಣ ಹೊಂದಿರುವ, ಖಾರವಾದ ಈ ಸ್ನ್ಯಾಕ್ಸ್‌ ಅನ್ನು ದಹಿ ಚಟ್ನಿ, ಇಮ್ಲಿ ಚಟ್ನಿ ಮತ್ತು ಹಸಿರು ಚಟ್ನಿಯೊಂದಿಗೆ ಸೇವಿಸಬಹುದಾಗಿದೆ. ಮಧ್ಯಕಾಲೀನ ಕಾಲದಲ್ಲಿ ಅಥವಾ ಅದಕ್ಕಿಂತ ಮುಂಚೆಯೇ ಹುಟ್ಟಿಕೊಂಡ ಈ ಪ್ರಸಿದ್ಧ ತಿನಿಸು ಹಳೆಯ ಮೂಲವನ್ನೂ ಹೊಂದಿದೆ. ಸಂಜೆಯ ಸಮಯದಲ್ಲಿ ಟಿ ಜೊತೆಗೆ ಏನಾದರು ಒಂದು ಸ್ನ್ಯಾಕ್ಸ್‌, ಅಂಗಡಿ ತಿಂಡಿಗಳು , ಫಾಸ್ಟ್‌ ಫುಡ್‌ ಹಾಗೂ ಇತರ ತಿಂಡಿಗಳನ್ನು ತಿನ್ನುತ್ತೇವೆ .ಅದರ ಬದಲಾಗಿ ಮನೆಯಲ್ಲಿಯೇ ಸುಲಭವಾಗಿ ಹಾಗೂ ಆರೋಗ್ಯಕರವಾದ, ಹೋಟೆಲ್‌ ಸ್ಟೈಲ್‌ ನಲ್ಲೇ ಸಮೋಸಾವನ್ನು ನೀವೆ ತಯಾರಿಸಬಹುದು. ಹಾಗಿದ್ದರೆ ಗರಿಗರಿಯಾದ ಆಲೂ ಸಮೋಸ(Potato samosas)ವನ್ನು ಮಾಡುವುದು ಹೇಗೆ ಎಂದು ತಿಳಿಯೋಣ ಬನ್ನಿ

ಗರಿಗರಿಯಾದ ಆಲೂ ಸಮೋಸ (Potato samosas)ವನ್ನು ಮಾಡಲು ಬೇಕಾಗುವ ಪದಾರ್ಥಗಳು ;
ಗೋಧಿಹಿಟ್ಟು 1 ಬಟ್ಟಲು
ಓಂ ಕಾಳು ಕಾಲು ಚಮಚ
ಉಪ್ಪು ರುಚಿಗೆ ತಕ್ಕಷ್ಟು
ತುಪ್ಪ 4 ಚಮಚ
ಎಣ್ಣೆ ಅಗತ್ಯಕ್ಕೆ ತಕ್ಕಷ್ಟು

ಇದನ್ನೂ ಓದಿ : Chocolate Desserts:ನೀವು ಚಾಕೊಲೆಟ್ ಪ್ರಿಯರೇ ? ಸುಲಭವಾಗಿ ತಯಾರಿಸಿ ಚಾಕೋಲೆಟ್ ಡೆಸಾರ್ಟ್

ಹೂರಣಕ್ಕೆ ಬೇಕಾಗುವ ಪದಾರ್ಥಗಳು
ಬೇಯಿಸಿಕೊಂಡ ಬಟಾಣಿ ಅರ್ಧ ಬಟ್ಟಲು
ಸಾಸಿವೆ- ಸ್ವಲ್ಪ
ಶುಂಠಿ-ಸ್ವಲ್ಪ
ಹಸಿಮೆಣಸಿನ ಕಾಯಿ 1-2
ಈರುಳ್ಳಿ ಸಣ್ಣಗೆ ಹೆಚ್ಚಿದ್ದು 1 ಬಟ್ಟಲು
ಆಲೂಗಡ್ಡೆ- ಬೇಯಿಸಿದ್ದು 2
ಅಚ್ಚ ಖಾರದ ಪುಡಿ 1 ಚಮಚ
ನಿಂಬೆ ರಸ ಸ್ವಲ್ಪ
ಗರಂ ಮಸಾಲೆ ಪುಡಿ ಅರ್ಧ ಚಮಚ
ಕರಿಬೇವು- ಸ್ವಲ್ಪ

ಇದನ್ನೂ ಓದಿ : Date Seed Coffee : ಖರ್ಜೂರ ಬೀಜದ ಕಾಫಿ : ಒಮ್ಮೆ ಕುಡಿದ್ರೆ ಮತ್ತೆ ಬೇಕನಿಸುತ್ತೆ

ಇದನ್ನೂ ಓದಿ : Hariyali Egg Curry : ಒಮ್ಮೆ ಟ್ರೈ ಮಾಡಿ ರುಚಿಯಾದ ಹರಿಯಾಲಿ ಎಗ್ ಕರಿ

ಮಾಡುವ ವಿಧಾನ ;
ಒಂದು ಬಟ್ಟಲಲ್ಲಿ ಗೋದಿ ಹಿಟ್ಟನ್ನು ಹಾಕಿ . ಗೋಧಿಹಿಟ್ಟಿಗೆ ಓಂಕಾಳು, ಉಪ್ಪು, ಮೂರು ಚಮಚ ತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಅಗತ್ಯವಿದ್ದಷ್ಟು ನೀರನ್ನು ಹಾಕಿ ಚಪಾತಿ ಹಿಟ್ಟಿಗಿಂತಲೂ ಸ್ವಲ್ಪ ಗಟ್ಟಿಯಾಗಿ ನಾದಿಟ್ಟುಕೊಳ್ಳಿ. ಮತ್ತೊಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ. ಅದಕ್ಕೆ ಸಾಸಿವೆಕಾಳು, ಕರಿಬೇವು, ಹಸಿ ಮೆಣಸಿನಕಾಯಿ ಮತ್ತು ಸಣ್ಣಗೆ ಕತ್ತರಿಸಿಕೊಂಡ ಶುಂಠಿಯನ್ನು ಹಾಕಿ ಸ್ವಲ್ಪಹೊತ್ತು ಕರಿಯಿರಿ. ನಂತರ ಇದಕ್ಕೆ ಬೇಯಿಸಿ ಚೆನ್ನಾಗಿ ಹಿಸುಕಿಕೊಂಡ ಆಲೂಗಡ್ಡೆ, ಖಾರದ ಪುಡಿ, ಉಪ್ಪು, ಗರಂ ಮಸಾಲೆ, ಬಟಾಣಿ, ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಒಲೆಯಿಂದ ಕೆಳಗಿಸಿ ತಣ್ಣಗಾದ ಬಳಿಕ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಶ್ರಣ ಮಾಡಿ.
ಬಳಿಕ ಚೆನ್ನಾಗಿ ನಾದಿದ ಹಿಟ್ಟನ್ನು ಲಟ್ಟಿಸಿ ತ್ರಿಕೋನಾಕಾರ ಬರುವಂತೆ ಮಡಿಸಿ. ಅದರೊಳಗೆ ಹೂರಣ ತುಂಬಿಸಿ ಎಲ್ಲಾ ಕಡೆಯಿಂದಲೂ ಬಂದ್ ಮಾಡಿ. ಇನ್ನೊಂದು ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿಯಾಗಲು ಇಡಿ . ಎಣ್ಣೆ ಬಿಸಿಯಾದ ನಂತರ ಹೂರಣ ತುಂಬಿಸಿದ ಸಮೋಸಾವನ್ನು ಮಧ್ಯಮ ಉರಿಯಲ್ಲಿ ಕರಿಯಿರಿ. ರುಚಿಯಾದ ಗರಿಗರಿಯಾದ ಸಮೋಸಾ ತಿನ್ನಲು ರೆಡಿ .

ಸೂಚನೆ : ಮೈದಾ ಬದಲು ಗೋಧಿಹಿಟ್ಟು ಬಳಸಿದರೆ ಉತ್ತಮ ಹಾಗೂ ಆರೋಗ್ಯಕ್ಕೂ ಒಳ್ಳೆಯದು.

Homemade bakery style Potato samosas

Comments are closed.