Panneer Butter Masala Recipe:ರೆಸ್ಟೋರೆಂಟ್ ಸ್ಟೈಲ್ ನಲ್ಲಿ ಪನ್ನೀರ್ ಬಟರ್ ಮಸಾಲೆ ರೆಸಿಪಿ

(Panneer Butter Masala Recipe)ರೆಸ್ಟೋರೆಂಟ್ ನಲ್ಲಿ ಸಿಗುವ ಪನ್ನೀರ್ ಬಟರ್ ಮಸಾಲೆ ತಿನ್ನುವ ಆಸೆ ಎಲ್ಲರಿಗೂ ಇರುತ್ತೆ. ಆದರೆ ರುಚಿಕರವಾದ ಪನ್ನಿರ್ ಬಟರ್ ಮಸಾಲೆಯನ್ನು ಮನೆಯಲ್ಲಿಯೇ ತಯಾರಿಸಬಹುದು. ರೆಸ್ಟೋರೆಂಟ್ ಸ್ಟೈಲ್ ಪನ್ನೀರ್ ಬಟರ್ ಮಸಾಲೆಯನ್ನು ಮಾಡುವ ಸುಲಭ ಉಪಾಯ ಇಲ್ಲಿದೆ.

ಪನ್ನೀರ್ ಬಟರ್ ಮಸಾಲೆ : ಬೇಕಾಗುವ ಸಾಮಾಗ್ರಿಗಳು:

  • ಪನ್ನಿರ್‌
  • ಎಣ್ಣೆ
  • ಬಟರ್(ಬೆಣ್ಣೆ)
  • ಟೊಮೇಟೊ
  • ಈರುಳ್ಳಿ
  • ಕೆಂಪು ಮೆಣಸು
  • ಗೊಡಂಬಿ
  • ಕಸೂರಿ ಮೇತಿ
  • ಕೊತ್ತಂಬರಿ ಸೊಪ್ಪು
  • ಕಾರದ ಪುಡಿ
  • ಅರಿಶಿಣ
  • ಉಪ್ಪು
  • ಗರಂ ಮಸಾಲೆ

Panneer Butter Masala Recipe ಮಾಡುವ ವಿಧಾನ:

ಒಂದು ಬಾಣಲೆಗೆ ಎಣ್ಣೆ ಹಾಕಿಕೊಂಡು ಕಾದ ನಂತರ ಈರುಳ್ಳಿ, ಟೊಮೇಟೊ, ಕೆಂಪು ಮೆಣಸು,ಗೊಡಂಬಿಯನ್ನು ಹಾಕಿ ಹುರಿದುಕೊಳ್ಳಬೇಕು.ಹುರಿದುಕೊಂಡ ಪದಾರ್ಥ ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಂಡು ಬಟ್ಟಲಿನಲ್ಲಿ ಹಾಕಿ ಇಟ್ಟುಕೊಳ್ಳಬೇಕು. ನಂತರ ಬಾಣಲೆಯಲ್ಲಿ ಬೆಣ್ಣೆ, ಕಸೂರಿ ಮೇತಿ, ಕೊತ್ತಂಬರಿ ಸೊಪ್ಪು, ಕಾರದ ಪುಡಿ, ಅರಿಶಿಣ, ಉಪ್ಪು, ಗರಂ ಮಸಾಲ ಹಾಕಿ ಕಲಸಿಕೊಂಡು ರುಬ್ಬಿಕೊಂಡ ಮಸಾಲೆಯನ್ನು ಹಾಕಿ ಬೇಯಿಸಬೇಕು ನಂತರ ಸ್ವಲ್ಪ ಕ್ರೀಮ್‌ ಮತ್ತು ನೀರನ್ನು ಹಾಕಿಕೊಂಡು ಬೇಯಿಸಬೇಕು ಅನಂತರ ಪನ್ನಿರ್‌ ಹಾಕಿಕೊಂಡು ಬೇಯಿಸಿದರೆ ರುಚಿರುಚಿಯಾಗಿ ರೆಸ್ಟೋರೆಂಟ್‌ ಸ್ಟೈಲ್ ನಲ್ಲಿ ಪನ್ನೀರ್‌ ಬಟರ್‌ ಮಸಾಲೆ ರೆಡಿ. ಇದನ್ನು ಚಪಾತಿ ಮತ್ತು ಪುರಿಯೊಂದಿಗೆ ತಿಂದರೆ ರುಚಿಯಾಗಿರುತ್ತದೆ.

ಇದನ್ನೂ ಓದಿ:kaju katli :ದುಬಾರಿ ಬೆಲೆಯ ಕಾಜು ಕಟ್ಲಿ ಮನೆಯಲ್ಲೇ ತಯಾರಿಸಿಕೊಳ್ಳಿ

ಸಾಗು

ಬೇಕಾಗುವ ಸಾಮಾಗ್ರಿಗಳು:

  • ಎಣ್ಣೆ
  • ಚಕ್ಕೆ
  • ಕೊತ್ತಂಬರಿ ಬೀಜ
  • ಹಸಿ ಮೆಣಸು
  • ಶುಂಠಿ
  • ಈರುಳ್ಳಿ
  • ಟೊಮೇಟೊ
  • ಪುಟಾಣಿ
  • ಕಾಯಿತುರಿ
  • ಕೊತ್ತಂಬರಿ ಸೊಪ್ಪು
  • ಜಿರಿಗೆ
  • ಅರಿಶಿಣ
  • ಈರುಳ್ಳಿ
  • ಬಟಾಣಿ
  • ಉಪ್ಪು
  • ಕ್ಯಾರೆಟ್‌
  • ಬಿನ್ಸ್‌
  • ಆಲೂಗಡ್ಡೆ

ಮಾಡುವ ವಿಧಾನ:
ಒಂದು ಬಾಣಲೆಯಲ್ಲಿ ಎಣ್ಣೆ, ಚಕ್ಕೆ,ಕೊತ್ತಂಬರಿ ಬೀಜ,ಹಸಿ ಮೆಣಸು,ಶುಂಠಿ,ಈರುಳ್ಳಿ,ಟೊಮೇಟೊ,ಪುಟಾಣಿ, ಕಾಯಿತುರಿ ಹಾಕಿಕೊಂಡು ಹತ್ತು ನಿಮಿಷ ಹುರಿದುಕೊಳ್ಳಬೇಕು. ಹುರಿದುಕೊಂಡ ಪದಾರ್ಥವನ್ನು ಮಿಕ್ಸಿ ಜಾರಿಯಲ್ಲಿ ಹಾಕಿ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿ ಇಟ್ಟುಕೊಳ್ಳಬೇಕು.ನಂತರ ಬಾಣಲೆಗೆ ಎಣ್ಣೆಯನ್ನು ಹಾಕಿ ಜಿರಿಗೆ,ಅರಿಶಿಣ, ಹೆಚ್ಚಿಟ್ಟುಕೊಂಡ ಈರುಳ್ಳಿ, ನೆನಸಿಟ್ಟುಕೊಂಡ ಬಟಾಣಿ, ಟೊಮೇಟೊ,ಉಪ್ಪು ,ರುಬ್ಬಿಕೊಂಡ ಮಸಾಲೆಯನ್ನು ಹಾಕಿಕೊಂಡು ಕಾಯಿಸಬೇಕು . ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿಕೊಂಡು ಮುಂಚಿತವಾಗಿ ಬೇಯಿಸಿಕೊಂಡ ಕ್ಯಾರೆಟ್‌, ಬಿನ್ಸ್‌ , ಆಲೂಗಡ್ಡೆಯನ್ನು ಹಾಕಿ ಹತ್ತು ನಿಮಿಷಗಳ ಕಾಯಿಸಿಕೊಂಡರೆ ಪುರಿ ಜೊತೆ ಸವಿಯಲು ಸಾಗು ರೆಡಿ.

ಇದನ್ನೂ ಓದಿ:Fenugreek Gravy:ಪಲ್ಯದ ಬದಲು ಸ್ಫೆಷಲ್‌ ಮೆಂತೆ ಸೊಪ್ಪಿನ ಗ್ರೇವಿ

How to prepare Restaurant Style Panneer Butter Masala Recipe

Comments are closed.