Aruna Miller : ಮೇರಿಲ್ಯಾಂಡ್‌ನ ಲೆಫ್ಟಿನೆಂಟ್‌ ಗವರ್ನರ್‌ ಹುದ್ದೆ ಅಲಂಕರಿಸಿದ ಅರುಣಾ ಮಿಲ್ಲರ್‌ ಯಾರು?

ಅಮೆರಿಕಾದ ಮಧ್ಯಂತರ ಚುನಾವಣೆಯ ಸ್ಪರ್ಧೆಯಲ್ಲಿದ್ದ ಭಾರತೀಯ ಮೂಲದ ಅಮೆರಿಕನ್‌ ಅರುಣಾ ಮಿಲ್ಲರ್‌ (Aruna Miller) ಅವರು ಗೆದ್ದು ಮೇರಿಲ್ಯಾಂಡ್‌ನ ಲೆಫ್ಟಿನೆಂಟ್ ಗವರ್ನರ್ ಹುದ್ದೆಯನ್ನು ಅಲಂಕರಿಸಿದ ಮೊದಲ ವಲಸಿಗರು. ಅಮೆರಿಕಾದ ಮಧ್ಯಂತರ ಚುನಾವಣೆಯ ಕಣದಲ್ಲಿ ಐದು ಭಾರತೀಯ-ಅಮೆರಿಕನ್ನರಿದ್ದರು. ಅಮಿ ಬೇರಾ, ರಾಜಾ ಕೃಷ್ಣಮೂರ್ತಿ, ರೋ ಖನ್ನಾ ಮತ್ತು ಪ್ರಮೀಳಾ ಜಯಪಾಲ್ ಡೆಮಾಕ್ರಟಿಕ್ ಪಕ್ಷದ ನಾಲ್ಕು ಪದಾಧಿಕಾರಿಗಳಾಗಿದ್ದರು. ಅರುಣಾ ಮಿಲ್ಲರ್‌ ಅವರು, ಮೇರಿಲ್ಯಾಂಡ್ ಹೌಸ್‌ನ ಮಾಜಿ ಪ್ರತಿನಿಧಿ, ವೆಸ್ ಮೂರ್ ಅವರೊಂದಿಗೆ ಲೆಫ್ಟಿನೆಂಟ್ ಗವರ್ನರ್ ಹುದ್ದೆಯ ಕಣದಲ್ಲಿದ್ದರು. ಡೆಮಾಕ್ರಟಿಕ್ ಗವರ್ನರ್ ಚುನಾಯಿತರಾಗುವುದರ ಮೂಲಕ ಅರುಣಾ ಮಿಲ್ಲರ್‌ ಅವರು ಮೇರಿಲ್ಯಾಂಡ್‌ನ ಲೆಫ್ಟಿನೆಂಟ್ ಗವರ್ನರ್ ಆಗಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ರಾಜ್ಯಪಾಲರನ್ನು ಅನುಸರಿಸುವ ರಾಜ್ಯದ ಅತ್ಯುನ್ನತ ಅಧಿಕಾರಿಯಾಗಿರುತ್ತಾರೆ. ರಾಜ್ಯಪಾಲರು ರಾಜ್ಯದಿಂದ ಹೊರಗಿರುವಾಗ ಅಥವಾ ಅಸಮರ್ಥರಾದಾಗ ಲೆಫ್ಟಿನೆಂಟ್‌ ಗವರ್ನರ್‌ ಪ್ರಮುಖ ಪಾತ್ರವನ್ನು ವಹಿಸುತ್ತಾರೆ.

ಅರುಣಾ ಮಿಲ್ಲರ್‌ ಯಾರು?

  • ಅಮೇರಿಕಾದ ಮಧ್ಯಂತರ ಚುನಾವಣೆಯಲ್ಲಿ ಗೆಲ್ಲವುದರ ಮೂಲಕ ಮೇರಿಲ್ಯಾಂಡ್‌ನ ಲೆಫ್ಟಿನೆಂಟ್ ಗವರ್ನರ್ ಆಗಿರುವ ಅರುಣಾ ಮಿಲ್ಲರ್‌ ಮೂಲತ: ಭಾರತದವರು.
  • ನವೆಂಬರ್‌ 6, 1964 ರಲ್ಲಿ ಹೈದರಾಬಾದ್‌ನಲ್ಲಿ ಜನಿಸಿದ, 58 ವರ್ಷದ ಅರುಣಾ ಮಿಲ್ಲರ್‌ ಅವರು 7 ನೇ ವಯಸ್ಸಿನಲ್ಲಿ ತಮ್ಮ ಹೆತ್ತವರೊಂದಿಗೆ ಯುಎಸ್‌ಗೆ ವಲಸೆ.
  • 1989 ರಲ್ಲಿ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ಮಿಲ್ಲರ್‌, ಮಿಸೌರಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಿಂದಲೂ ಪದವಿ ಪಡೆದಿದ್ದಾರೆ.
  • ಮಾಂಟ್ಗೊಮೆರಿ ಕೌಂಟಿಯ ಸ್ಥಳೀಯ ಸಾರಿಗೆ ಇಲಾಖೆಯಲ್ಲಿ 25 ವರ್ಷಗಳ ಕಾಲ ಸೇವೆ.
  • 2010 ರಿಂದ 2018 ರವರೆಗೆ, ಮೇರಿಲ್ಯಾಂಡ್ ಹೌಸ್ ಆಫ್ ಡೆಲಿಗೇಟ್ಸ್‌ನಲ್ಲಿ 15 ಜಿಲ್ಲೆಗಳನ್ನು ಪ್ರತಿನಿಧಿಸಿದ್ದರು.
  • ಮೇರಿಲ್ಯಾಂಡ್‌ನ 6 ನೇ ಕಾಂಗ್ರೆಷನಲ್ ಜಿಲ್ಲೆಯಲ್ಲಿ 2018 ರಲ್ಲಿ ಕಾಂಗ್ರೆಸ್‌ಗೆ ಸ್ಪರ್ಧಿಸಿದ್ದರು. ಎಂಟು ಅಭ್ಯರ್ಥಿಗಳ ಕ್ಷೇತ್ರದಲ್ಲಿ ಎರಡನೇ ಸ್ಥಾನ ಪಡೆದರು.
  • ಡೇವ್ ಮಿಲ್ಲರ್ ಅವರನ್ನು ವಿವಾಹವಾದ ಅರುಣಾ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಪ್ರಸ್ತುತ ಅವರ ವಾಸ ಮಾಂಟ್ಗೊಮೆರಿ ಕೌಂಟಿಯಲ್ಲಿ.

ಇದನ್ನೂ ಓದಿ : Instagram ಪರಿಚಯಿಸಿದ ಹೊಸ ವೈಶಿಷ್ಟ್ಯಗಳು ನಿಮಗೆ ಗೊತ್ತಾ; ಈಗ ರೀಲ್ಸ್‌ ಮಾಡುವುದು ಇನ್ನೂ ಸುಲಭ

ಇದನ್ನೂ ಓದಿ :African Swine Fever : ಆಫ್ರಿಕನ್ ಜ್ವರ 85 ಹಂದಿಗಳ ಸಾವು : ಮಂಗಳೂರಲ್ಲಿ ಅಲರ್ಟ್‌

(Who is Aruna Miller? Indian American who become first immigrant to hold the office of lieutenant governor in Maryland)

Comments are closed.