Kitchen Tips : ಈ ಟಿಪ್ಸ್‌ ಪಾಲಿಸಿ ಹಣ್ಣು ಮತ್ತು ತರಕಾರಿಗಳನ್ನು ಹಾಳಗದಂತೆ ಬಹಳ ಸಮಯದವರೆಗೆ ಶೇಖರಿಸಿಟ್ಟುಕೊಳ್ಳಿ!!

ಬಹಳ ಬೇಗನೆ ಕೆಟ್ಟುಹೋಗುವ ತರಕಾರಿ, ಹಣ್ಣುಗಳು (Fruits And Vegetables) ಮತ್ತು ಇತರೆ ಉತ್ಪನ್ನಗಳನ್ನು ಬಹಳ ದಿನಗಳವರೆಗೆ ಶೇಖರಿಸಿಡುವುದು ಒಂದು ಸವಾಲೇ ಸರಿ (Kitchen Tips). ಯಾವುದೇ ಸಂದರ್ಭದಲ್ಲಿ, ಸರಿಯಾಗಿ ಸಂರಕ್ಷಿಸದಿದ್ದರೆ ಮಾರಕಟ್ಟೆಯಿಂದ ಕೊಂಡು ತಂದತಹ ತಾಜಾ (Fresh) ವಸ್ತುಗಳು ಬಹು ಬೇಗನೆ ಕೆಡುತ್ತವೆ. ಇದರಿಂದ ಸಮಯ ಮತ್ತು ಹಣದ ನಷ್ಟವೂ ಆಗುತ್ತದೆ. ಹಾಳಾಗುವ ತರಕಾರಿಗಳು, ಹಣ್ಣುಗಳು ಮತ್ತು ಇತರೆ ಆಹಾರಗಳ ಸೇವನೆಯು ಅನೇಕ ಸಮಸ್ಯೆಗೆ ಕಾರಣವಾಗಬಹುದು.

ಹಣ್ಣು ತರಕಾರಿಗಳನ್ನು ಸಂಗ್ರಹಿಸಿಡಲು ಮತ್ತು ಅದರ ತಾಜಾತನವನ್ನು ಕಾಪಾಡಲು ಇಲ್ಲಿ ಕೆಲವು ಟಿಪ್ಸ್‌ ಹೇಳಿದ್ದೇವೆ. ಈ ಟಿಪ್ಸ್‌ಗಳು ನಿಮ್ಮ ಸಮಯ ಮತ್ತು ಹಣ ಎರಡನ್ನೂ ಉಳಿಸುವುದು.

  1. ನಿಮ್ಮ ಫ್ರಿಜ್‌ ಅನ್ನು ಯಾವಾಗಲೂ ಸ್ವಚ್ಛವಾಗಿರಿಸಿ :
    ನಿಮ್ಮ ಆಹಾರಗಳು ಫ್ರಿಜ್‌ನಲ್ಲಿ ಹೆಚ್ಚು ಕಾಲ ಉಳಿಯಬೇಕೆಂದು ನೀವು ಬಯಸಿದರೆ, ಅದು ಸ್ವಚ್ಛವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸ್ವಚ್ಛವಾಗಿರದ ಮಾಲ್ಡ್‌ ಅಥವಾ ಕಂಟೇನರ್‌ಗಳು ತಾಜಾ ಆಹಾರಗಳನ್ನು ಬಹಳ ಬೇಗನೆ ಕಲುಷಿತಗೊಳಿಸುತ್ತವೆ. ಅವುಗಳು ಫ್ರಿಜ್‌ ನಲ್ಲಿರುವ ಉಳಿದ ಆಹಾರ ಪದಾರ್ಥಗಳನ್ನು ವೇಗವಾಗಿ ಹಾಳು ಮಾಡಲು ಕಾರಣವಾಗುತ್ತವೆ. ಅದಕ್ಕಾಗಿ ಆಹಾರ ಪದಾರ್ಥಗಳನ್ನು ಸ್ವಚ್ಛ ಏರ್‌ಟೈಟ್‌ ಕಂಟೇನರ್‌ಗಳಲ್ಲಿ ಸಂಗ್ರಹಿಸಿಡುವುದರಿಂದ ಕೀಟಾಣುಗಳು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ.
  2. ಹಣ್ಣು ಮತ್ತು ತರಕಾರಿಗಳನ್ನು ಕತ್ತರಿಸದೆಯೇ ಸಂಗ್ರಹಿಸಿ :
    ನಿಮಗೆ ಬೇಕಾದಾಗ ಹಣ್ಣು ಮತ್ತು ತರಕಾರಿಗಳನ್ನು ಕತ್ತರಿಸುವುದರ ಮೂಲಕ ಅದರಲ್ಲಿಯ ಪೋಷಕಾಂಶದ ಮೌಲ್ಯಗಳನ್ನು ಕಾಪಾಡಿಕೊಳ್ಳಬಹುದು. ಕತ್ತರಿಸಿ ಶೇಖರಿಸಿಡುವುದರಿಂದ ಅವುಗಳು ಬೇಗನೆ ಕೆಡುತ್ತವೆ ಮತ್ತು ಅದರಲ್ಲಿಯ ಪೋಷಕಾಂಶಗಳು ನಷ್ಟವಾಗುತ್ತದೆ. ತಾಜಾ ಆಹಾರಗಳನ್ನು ಗಾಳಿಗೆ ಒಡ್ಡುವುದರಿಂದ ಅವು ಹೆಚ್ಚು ವೇಗವಾಗಿ ಕ್ಷೀಣಿಸುತ್ತದೆ.
  3. ಹಾಳಾಗುವ ವಸ್ತುಗಳನ್ನು ಶಾಖದಿಂದ ದೂರವಿಡಿ:
    ವಿಪರೀತ ತಾಪಮಾನಕ್ಕೆ ಒಡ್ಡಿದಾಗ, ಹಣ್ಣು ಮತ್ತು ತರಕಾರಿಗಳು ಪಕ್ವವಾಗುವ ವೇಗವು ಹೆಚ್ಚಾಗುತ್ತದೆ. ಸ್ಟೌವ್‌, ಗ್ಯಾಸ್‌ ಸ್ಟೌವ್‌ಟಾಪ್‌ಗಳು, ಟೋಸ್ಟರ್‌ಗಳು ಮತ್ತು ಇತರ ಗೃಹೋಪಯೋಗಿ ಉಪಕರಣಗಳು ಸೇರಿದಂತೆ ಶಾಖ–ಉತ್ಪಾದಿಸುವ ಉಪಕರಣಗಳಿಂದ ತಾಜಾ ತರಕಾರಿ ಮತ್ತು ಹಣ್ಣುಗಳನ್ನು ದೂರವಿಡಿ.
  4. ಶೇಖರಿಸುವ ಮೊದಲು ಚೆನ್ನಾಗಿ ತೊಳೆದು ಒಣಗಿಸಿ :
    ವಿವಿಧ ಹಣ್ಣು ಮತ್ತು ತರಕಾರಿಗಳನ್ನು ವಿನೇಗರ್‌ ನೀರಿನ ದ್ರಾವಣದಲ್ಲಿ ತೊಳೆಯುವುದರಿಂದ ಬಹಳ ಸಮಯದವರೆಗೆ ಕೆಡದಂತೆ ಕಾಪಾಡಿಕೊಳ್ಳಬಹುದು. ಮೂರು ಕಪ್‌ ನೀರಿಗೆ, ಒಂದು ಭಾಗ ವಿನೇಗರ್‌ ಸೇರಿಸಿ ಚೆನ್ನಾಗಿ ಬೆರೆಸಿ. ಅದರಲ್ಲಿ ಹಣ್ಣು ಮತ್ತು ತರಕಾರಿಗಳನ್ನು ತೊಳೆಯುವ ಮೊದಲು ಅದರಲ್ಲಿ ನೆನೆಸಿ. ನಂತರ ನೀರಿನಿಂದ ತೊಳೆಯಿರಿ ನಂತರ ನೀರಿನ ಪಸೆ ಆರಿದ ಮೇಲೆ ಶೇಖರಿಸಿ.

ಇದನ್ನೂ ಓದಿ : Muskmelon : ಕರಬೂಜ ಹಣ್ಣು! ಬೇಸಿಗೆಗೆ ತಂಪು ನೀಡುವ ಮ್ಯಾಜಿಕ್‌ ಹಣ್ಣು !!

ಇದನ್ನೂ ಓದಿ : Kitchen Tips: ಈ ವಿಧಾನದ ಮೂಲಕ ನೀವು ಅತ್ಯಂತ ಸುಲಭವಾಗಿ ಬಿಡಿಸಬಹುದು ದಾಳಿಂಬೆ ಸಿಪ್ಪೆ

(Kitchen Tips Store your Fruits and Vegetable for a longer time)

Comments are closed.