Peas Paratha: ಚಳಿಗಾಲದ ಬೆಳಗ್ಗಿನ ತಿಂಡಿಗೆ ಮಾಡಿ ಬಿಸಿ ಬಿಸಿ ಬಟಾಣಿ ಪರಾಠ

ಚಳಿಗಾಲ (Winter Season) ಪ್ರಾರಂಭವಾಗಿದೆ. ಚಳಿ ನಿಧಾನವಾಗಿ ಹೆಚ್ಚುತ್ತಿದೆ. ಬೆಳಗ್ಗಿನ ತಂಪಾದ ವಾತಾವರಣಕ್ಕೆ (Chilled Weather) ಬಿಸಿ ಬಿಸಿ ತಿಂಡಿ ಬೇಕು ಎಂದು ಅನಿಸುತ್ತದೆ. ಮಕ್ಕಳಿಗೂ ಟಿಫಿನ್‌ ಬಾಕ್ಸ್‌ಗೆ ಹೊಸ ರುಚಿ ಬೇಕು. ಚಳಿಗಾಲದಲ್ಲಿ ದೊರೆಯುವ ಹಸಿ ಬಟಾಣಿಗಳನ್ನು ( Green Peas) ನೋಡಿದರೆ ಏನನ್ನಾದರೂ ಮಾಡಿ ತಿನ್ನುವ ಆಸೆಯಾಗುತ್ತದೆ. ಚಾಟ್ಸ್‌, ಪಲ್ಯ, ಸಾಗು, ಫುಲಾವ್‌, ಸಮೋಸಾ ಹೀಗೆ ಎಲ್ಲದಕ್ಕೂ ಬಟಾಣಿ ಬೇಕೆ ಬೇಕು. ಬಟಾಣಿಗಳಿಂದ ತಯಾರಿಸುವ ಬಿಸಿ ಬಿಸಿ ಪರಾಠವನ್ನು (Peas Paratha) ಎಂದಾದರೂ ಟ್ರೈ ಮಾಡಿದ್ದೀರಾ? ಆರೋಗ್ಯಕ್ಕೂ ಉತ್ತಮವಾದ ಮತ್ತು ಅಷ್ಟೇ ರುಚಿಯಾದ ಬಟಾಣಿಯ ಪರಾಠವನ್ನು ಯಾವುದೇ ಚಟ್ನಿ, ಪಲ್ಯದ ಜೊತೆಗೆ ಸೇವಿಸಿಬಹುದು.

ಎಲ್ಲರಿಗೂ ಇಷ್ಟವಾಗುವ ಬಟಾಣಿಯ ಪರಾಠವನ್ನು ಹೀಗೆ ತಯಾರಿಸಿ:

ಬಟಾಣಿಯ ಪರಾಠ ತಯಾರಿಸಲು ಏನೇನು ಬೇಕು?
ಗೋಧಿ ಹಿಟ್ಟು
ಒಂದು ಕಪ್‌ ಹಸಿ ಬಟಾಣಿ
1–2 ಹಸಿ ಮೆಣಸಿನ ಕಾಯಿ
ಅರ್ಧ ಚಮಚ ಜೀರಿಗೆ, ಕೊತ್ತಂಬರಿ ಪುಡಿ, ಗರಮ್‌ ಮಸಾಲಾ
ಅರ್ಧ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್‌
ಸಣ್ಣಗೆ ಹೆಚ್ಚಿದ ಒಂದು ಈರುಳ್ಳಿ
ರುಚಿಗೆ ತಕ್ಕಷ್ಟು ಉಪ್ಪು
ಬೇಯಿಸಲು ಬೆಣ್ಣೆ ಅಥವಾ ತುಪ್ಪ

ಬಟಾಣಿ ಪರಾಠ ತಯಾರಿಸುವ ವಿಧಾನ :
ಒಂದು ಬಾಣಲೆಯಲ್ಲಿ ನೀರನ್ನು ಕಾಯಿಸಿ, ಅದಕ್ಕೆ ಉಪ್ಪು, ಹಸಿ ಬಟಾಣಿ ಮತ್ತು ಸ್ವಲ್ಪ ಸಕ್ಕರೆ ಸೇರಿಸಿ. ಸಕ್ಕರೆ ಸೇರಿಸುವುದರಿಂದ ಬಟಾಣಿಯ ಹಸಿರು ಬಣ್ಣ ಹಾಗೆ ಇರುತ್ತದೆ. 5 ನಿಮಿಷ ಕುದಿಸಿ. ನೀರನ್ನು ಸೋಸಿಕೊಳ್ಳಿ. ಗೋಧಿ ಹಿಟ್ಟಿಗೆ ಉಪ್ಪು ಮತ್ತು ನೀರು ಸೇರಿಸಿ ಚಪಾತಿ ಹಿಟ್ಟು ತಯಾರಿಸಿ. ಬೇಯಿಸಿದ ಬಟಾಣಿಗೆ ಹಸಿಮೆಣಸಿನ ಕಾಯಿ, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌, ಜೀರಿಗೆ, ಕೊತ್ತೊಂಬರಿ ಪುಡಿ, ಗರಮ್‌ ಮಸಾಲಾ, ಈರುಳ್ಳಿ, ಕೊತ್ತುಂಬರಿ ಸೊಪ್ಪುಸ ಎಲ್ಲವನ್ನು ಸೇರಿಸಿ. ಸ್ಮಾಶರ್‌ನ ಸಹಾಯದಿಂದ ಸ್ಮಾಶ್‌ ಮಾಡಿ. ಈ ಸ್ಟಫಿಂಗ್‌ ಅನ್ನು ಚಪಾತಿಯ ಹಿಟ್ಟಿನ ಒಂದು ಚಿಕ್ಕ ಉಂಡೆ ಮಾಡಿ ಅದರಲ್ಲಿ ಸೇರಿಸಿ. ನಿಧಾನವಾಗಿ ಲಟ್ಟಿಸಿ. ತುಪ್ಪ ಅಥವಾ ಬೆಣ್ಣೆ ಸವರಿಸಿ ಎರಡೂ ಬದಿಯಲ್ಲಿ ಚೆನ್ನಾಗಿ ಬೇಯಿಸಿ. ಬಿಸಿ ಬಿಸಿ ರುಚಿಯಾದ ಬಟಾಣಿ ಪರಾಠ ಸವಿಯಲು ಸಿದ್ಧ.

ಇದನ್ನೂ ಓದಿ :Nutrition Food : ಮಕ್ಕಳಲ್ಲಿ ಪೌಷ್ಠಿಕತೆ ಹೆಚ್ಚಿಸುತ್ತೆ ಈ ಮಣ್ಣಿ

ಇದನ್ನೂ ಓದಿ :Winter Care : ಚಳಿಗಾಲದಲ್ಲಿ ನಿಮ್ಮ ಮಕ್ಕಳಿಗೆ ಇವುಗಳನ್ನು ಕೊಡಿ; ರೋಗನಿರೋಧಕ ಶಕ್ತಿ ಹೆಚ್ಚಿಸಿ

(Peas Paratha, How to make tasty paratha this winter)

Comments are closed.