Protein Dosa:ತೂಕ ಇಳಿಸಲು ಆರೋಗ್ಯಕರ ಟೇಸ್ಟಿ ಪ್ರೋಟಿನ್‌ ದೋಸೆ

(Protein Dosa)ಪ್ರೋಟಿನ್‌ ಅಂಶ ಇರುವಂತಹ ಆಹಾರವನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಹಲವು ಪ್ರಯೋಜನವಿದೆ. ದೇಹದ ಮಾಂಸಖಂಡಗಳ ಬೆಳವಣಿಗೆ, ಮೂಳೆಗಳ ಸದೃಢತೆ, ಬುದ್ಧಿ ಶಕ್ತಿ ಚುರುಕು ಗೊಳಿಸುವುದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರೋಟಿನ್‌ ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ಪ್ರೋಟಿನ್‌ ಅಂಶ ಇರುವ ಆಹಾರವನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಉತ್ತಮ ಪಲಿತಾಂಶವನ್ನು ನೀಡುತ್ತದೆ. ಪ್ರೋಟಿನ್‌ ಅಂಶ ಇರುವ ಧಾನ್ಯಗಳಿಂದ ಮಾಡಿದ ಆಹಾರವನ್ನು ಸೇವನೆ ಮಾಡುವುದರಿಂದ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದಷ್ಟೇ ಅಲ್ಲದೆ ತೂಕ ಕಡಿಮೆ ಮಾಡಿಕೊಳ್ಳಬಹುದು. ಹಾಗಿದ್ದರೆ ಆರೋಗ್ಯಕರವಾದ ಪ್ರೋಟಿನ್‌ ದೋಸೆ ಮಾಡುವುದು ಹೇಗೆ ಎನ್ನುವುದರ ಕುರಿತು ಮಾಹಿತಿ ಈ ಕೆಳಗಿನಂತಿವೆ.

(Protein Dosa)ಬೇಕಾಗುವ ಸಾಮಾಗ್ರಿಗಳು:

  • ಉದ್ದಿನ ಬೇಳೆ
  • ತೊಗರಿ ಬೇಳೆ
  • ಹೆಸರು ಬೇಳೆ
  • ಕಡ್ಲೆ ಬೇಳೆ
  • ಹೆಸರುಕಾಳು
  • ಅಕ್ಕಿ
  • ಕೆಂಪು ಮೆಣಸು
  • ಉಪ್ಪು
  • ಸಕ್ಕರೆ

ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಎರಡು ಚಮಚ ಉದ್ದಿನ ಬೇಳೆ, ಎರಡು ಚಮಚ ತೊಗರಿ ಬೇಳೆ,ಎರಡು ಚಮಚ ಹೆಸರು ಬೇಳೆ, ಎರಡು ಚಮಚ ಕಡ್ಲೆ ಬೇಳೆ, ಎರಡು ಚಮಚ ಹೆಸರುಕಾಳು, 3ರಿಂದ4 ಕಪ್‌ ಅಕ್ಕಿ ,ನಾಲ್ಕು ಕೆಂಪು ಮೆಣಸನ್ನು ಹಾಕಿಕೊಂಡು ಅದಕ್ಕೆ ನೀರನ್ನು ಬೆರೆಸಿ 5 ಗಂಟೆಗಳ ಕಾಲ ನೆನಸಿಡಬೇಕು. ನಂತರ ನೆನಸಿಟ್ಟ ಪದಾರ್ಥವನ್ನು ರುಬ್ಬಿ ದೋಸೆಹಿಟ್ಟು ತಯಾರಿಸಿಕೊಂಡು ಒಂದು ಚಮಚ ಉಪ್ಪು ಮತ್ತು ಸಕ್ಕರೆಯನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ಅನಂತರ ದೋಸೆ ಮಾಡಿಕೊಂಡು ಅದರ ಮೇಲೆ ಹೆಚ್ಚಿಕೊಂಡ ಈರುಳ್ಳಿ ಮತ್ತು ತುರಿದ ಕ್ಯಾರೆಟ್‌ ಹಾಕಿಕೊಂಡರೆ ತಿನ್ನಲು ಇನ್ನು ರುಚಿಕರವಾಗಿರುತ್ತದೆ. ಈ ದೋಸೆ ಮಾಡಲು ಬಳಸಿರುವ ಪದಾರ್ಥಗಳಲ್ಲಿ ಪ್ರೋಟಿನ್‌ ಹೆರಳವಾಗಿ ಇರುವುದರಿಂದ ಆರೋಗ್ಯಕ್ಕೆ ಉತ್ತಮ.

ಇದನ್ನೂ ಓದಿ:Onion Beauty Tips:ಕೂದಲು ಉದುರುವ ಸಮಸ್ಯೆಗೆ ಈರುಳ್ಳಿಯಲ್ಲಿದೆ ಪರಿಹಾರ

ಇದನ್ನೂ ಓದಿ:kaju katli :ದುಬಾರಿ ಬೆಲೆಯ ಕಾಜು ಕಟ್ಲಿ ಮನೆಯಲ್ಲೇ ತಯಾರಿಸಿಕೊಳ್ಳಿ

ಉದ್ದಿನ ಬೇಳೆಯಲ್ಲಿ ದೇಹಕ್ಕೆ ಬೇಕಾದ ಪ್ರೋಟಿನ್‌,ಕಾರ್ಬೋಹೈಡ್ರೆಟ್‌, ಫ್ಯಾಟ್‌ ಅಂಶಗಳು ಹೆರಳವಾಗಿ ಇರುವುದರಿಂದ ಬಹು ಆರೋಗ್ಯದ ಗುಣವನ್ನು ಹೊಂದಿದೆ. ಅಷ್ಟೇ ಅಲ್ಲದೆ ಮಾಂಸದಲ್ಲಿ ಇರುವ ಪೋಷಕಾಂಶ ಅಂಶಗಳು ಉದ್ದಿನ ಬೇಳೆಯಲ್ಲಿ ಇದೆ. ಹಾಗಾಗಿ ಸಸ್ಯಹಾರಿಗಳು ಇದನ್ನು ಸೇವಿಸುವುದರಿಂದ ಅಷ್ಟೇ ಪ್ರಮಾಣದ ಪೋಷಕಾಂಶವನ್ನು ಪಡೆಯಬಹುದು. ತೊಗರಿ ಬೇಳೆಯಲ್ಲಿ ಫೋಲಿಕ್‌ ಆಮ್ಲ,ಕಬ್ಬಿಣ, ಪ್ರೋಟಿನ್‌, ಕ್ಯಾಲ್ಸಿಯಂ, ಮೆಗ್ನೀಸಿಯಮ್‌, ರಂಜಕ ಮತ್ತು ಪೊಟ್ಯಾಸಿಯಂ ಅಂಶಗಳು ಇರುವುದರಿಂದ ಹಲವು ಆರೋಗ್ಯದ ಸಮಸ್ಯೆಯನ್ನು ಗುಣಪಡಿಸುತ್ತದೆ.ಮತ್ತು ತೂಕವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ. ಹೆಸರು ಬೇಳೆಯಲ್ಲಿರುವ ವಿವಿಧ ಖನಿಜಗಳು ಮತ್ತು ಪೋಷಕಾಂಶಗಳು ಇರುವುದರಿಂದ ಆರೋಗ್ಯಕರವಾಗಿ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ.

Healthy tasty protein dosa for weight loss: how to prepare protein dosa

Comments are closed.