Gooseberry Benefits: ಹುಳಿ–ಸಿಹಿ ರುಚಿ ಹೊಂದಿರುವ ನೆಲ್ಲಿಕಾಯಿಯನ್ನು ಮಧುಮೇಹಿಗಳು ತಿನ್ನಬಹುದಾ…

ಭಾರತೀಯರಿಗೆ ನೆಲ್ಲಿಕಾಯಿ (Gooseberry) ಚಿರಪರಿಚಿತ. ನೆಲ್ಲಿಕಾಯಿ, ಆಮ್ಲಾ (Amla) ಎಂದೆಲ್ಲಾ ಕೆರೆಯುವ ಇದು, ಮೂಲತಃ ಏಷ್ಯಾ (Asia) ದ ಸ್ಥಳೀಯ ಮರವಾಗಿದೆ (Tree). ಹುಳಿ–ಸ್ವಲ್ಪ ಸಿಹಿ ರುಚಿ ಹೊಂದಿರುವ ನೆಲ್ಲಿಕಾಯಿ ಅನೇಕ ಅದ್ಭುತ ಆರೋಗ್ಯ ಪ್ರಯೋಜನಗಳನ್ನು (Gooseberry Benefits) ಹೊಂದಿದೆ. ಜೀರ್ಣಕ್ರಿಯೆಗೆ ಸಹಾಯ ಮಾಡುವುದರ ಜೊತೆಗೆ ಯಕೃತ್ತಿನ ಆರೋಗ್ಯವನ್ನು ಕಾಪಾಡುತ್ತದೆ. ಆಹಾರ ತಜ್ಞರು ಹೇಳುವುದೇನೆಂದರೆ ಈ ಕಾಲದಲ್ಲಿ ಸಿಗುವ ನೆಲ್ಲಿಕಾಯಿಯ ಲಾಭ ಪಡೆದುಕೊಳ್ಳಿ ಎಂದು. ಇದರಿಂದ ಉಪ್ಪಿನಕಾಯಿ, ಚಟ್ನಿ, ಉಪ್ಪು ನೆಲ್ಲಿಕಾಯಿ, ನೆಲ್ಲಿಕಾಯಿ ಜಾಮ್ ಮುಂತಾದವುಗಳನ್ನು ತಯಾರಿಸುತ್ತಾರೆ.

ನೆಲ್ಲಿಕಾಯಿಯ ಅನೇಕ ಆರೋಗ್ಯ ಪ್ರಯೋಜನಗಳನ್ನು ನಮಗೆ ನೀಡುತ್ತದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಅದಕ್ಕಾಗಿಯೇ ಆಯುರ್ವೇದದ ಚೂರ್ಣಗಳಲ್ಲಿ ಇದನ್ನು ಬಳಸುತ್ತಾರೆ. ಅತಿ ಹೆಚ್ಚು ವಿಟಮಿನ್‌ ಸಿ ಅಂಶ ಹೊಂದಿರುವ ಹಣ್ಣುಗಳ ಪಟ್ಟಿಯಲ್ಲಿ ಇದು ಸೇರಿಕೊಂಡಿದೆ. ವಿಟಮಿನ್‌ ಸಿ ಕೊರತೆ ಇರುವವರಿಗೆ ನೆಲ್ಲಿಕಾಯಿಯನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ.

ಮಧುಮೇಹಿಗಳೂ ನೆಲ್ಲಿಕಾಯಿ ಸೇವಿಸಬಹುದೇ?
ಮಧುಮೇಹಿಗಳಿಗೆ ನೆಲ್ಲಿಕಾಯಿ ಬಹಳ ಸೂಕ್ತವಾಗಿದೆ ಎಂದು ತಜ್ಞರು ಹೇಳುತ್ತಾರೆ. ಇದರಲ್ಲಿರುವ ಕರಗುವ ನಾರಿನಾಂಶವು ಕಾರ್ಬೋಹೈಡ್ರೇಟ್‌ಗಳ ಜೀರ್ಣಕ್ರಿಯೆ ದರವನ್ನು ನಿಧಾನಗೊಳಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟ ಹಠಾತ್‌ ಏರುವುದನ್ನು ತಡೆಯುತ್ತದೆ. ಮೂತ್ರಪಿಂಡಗಳು ಸರಾಗವಾಗಿ ಕಾರ್ಯನಿರ್ವಹಿಸಿಲು ಸಹಾಯ ಮಾಡುತ್ತದೆ. ನೆಲ್ಲಿಕಾಯಿಯಯು ಆಂಟಿಒಕ್ಸಿಡೆಂಟ್‌ನಿಂದ ಸಮೃದ್ಧವಾಗಿದೆ. ಇದು ಒಕ್ಸಿಡೇಟಿವ್‌ ಒತ್ತಡ (ಸ್ಟ್ರೆಸ್‌) ವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ನೆಲ್ಲಿಕಾಯಿ ಮಧುಮೇಹಿಗಳಿಗೆ ಉಪಯುಕ್ತವಾಗಿದೆ.

ನೆಲ್ಲಿಕಾಯಿಯನ್ನು ಅನೇಕ ರೀತಿಯಲ್ಲಿ ಸೇವಿಸಬಹುದು. ನೆಲ್ಲಿಕಾಯಿಯ ಉಪ್ಪಿನಕಾಯಿ, ತೊಕ್ಕು, ತಂಬುಳಿ, ಜಾಮ್‌ ಮುಂತಾದವುಗಳನ್ನು ತಯಾರಿಸುತ್ತಾರೆ. ತಾಜಾ ನೆಲ್ಲಿಕಾಯಿಯನ್ನು ಉಪ್ಪಿನ ಜೊತೆಯಲ್ಲೂ ಸೇವಿಸಬಹುದು. ಇಲ್ಲವೇ ಸಣ್ಣದಾಗಿ ಕತ್ತರಿಸಿ, ಮೇಲಿನಿಂದ ಉಪ್ಪು ಸವರಿ, ಬಿಸಿಲಿನಲ್ಲಿ ಒಣಗಿಸಿ, ಬಹಳ ದಿನಗಳವರೆಗೆ ಶೇಖರಿಸಿಟ್ಟುಕೊಳ್ಳಬಹುದು. ಇಷ್ಟೇ ಅಲ್ಲದೇ ನೆಲ್ಲಿಕಾಯಿ ಕೂದಲಿನ ಆರೋಗ್ಯಕ್ಕೂ ಉತ್ತಮವಾಗಿದೆ. ಇದು ಬಾಲನೆರೆಯನ್ನು ತಡೆಯುತ್ತದೆ. ಅದಕ್ಕಾಗಿ ಈ ಕಾಲದಲ್ಲಿ ದೊರೆಯುವ ನೆಲ್ಲಿಕಾಯಿಯ ಸಂಪೂರ್ಣ ಲಾಭ ಪಡೆದುಕೊಳ್ಳಿ.

ಇದನ್ನೂ ಓದಿ : Fruits For Digestion : ಜೀರ್ಣ ಶಕ್ತಿ ಹೆಚ್ಚಿಸುವ 5 ಅದ್ಭುತ ಹಣ್ಣುಗಳು

ಇದನ್ನೂ ಓದಿ : Interesting Facts About Guava: ಪೇರಳೆ ಹಣ್ಣಿನ ಕುರಿತಾಗಿ ಇಲ್ಲಿದೆ ಒಂದಿಷ್ಟು ಕುತೂಹಲಕಾರಿ ಸಂಗತಿ

(Gooseberry Benefits eat this seasonal superfood and also this is helpful to diabetics)

Comments are closed.