Onion Beauty Tips:ಕೂದಲು ಉದುರುವ ಸಮಸ್ಯೆಗೆ ಈರುಳ್ಳಿಯಲ್ಲಿದೆ ಪರಿಹಾರ

(Onion Beauty Tips)ಈರುಳ್ಳಿಯಲ್ಲಿ ಹಲವು ಜೀವಸತ್ವ, ಖನಿಜ ಮತ್ತು ಸೋಡಿಯಂ, ಪೊಟ್ಯಾಶಿಯಂ, ಪೋಲೇಟ್ ಗಳು, ವಿಟಮಿನ್‌ ಎ, ಸಿ ಮತ್ತು ಇ ,ಕ್ಯಾಲ್ಸಿಯಂ, ಎಗ್ನೀಸಿಯಮ್‌ , ರಂಜಕ ಅನೇಕ ಪೋಷಕಾಂಶಗಳನ್ನು ಒಳಗೊಂಡಿರುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಕೂದಲು ಉದುರುವ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ. ಇದರಿಂದ ತಯಾರಿಸಿದ ದ್ರವವನ್ನು ತಲೆ ಕೂದಲಿನ ಬುಡಕ್ಕೆ ಹಚ್ಚಿದರೆ ಕೂದಲು ಉದುರುವುದನ್ನು ಕಡಿಮೆ ಮಾಡಿ ಕೂದಲು ಸಮೃದ್ಧವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಇದರ ಮಾಹಿತಿ ಈ ಕೆಳಗೆ ತಿಳಿಸಲಾಗಿದೆ.

(Onion Beauty Tips)ಬೇಕಾಗುವ ಸಾಮಾಗ್ರಿಗಳು:

  • ಈರುಳ್ಳಿ ರಸ
  • ಮೆಂತ್ಯೆಕಾಳು
  • ಲವಂಗ
  • ವಿಟಮಿನ್‌ ಇ ಕ್ಯಾಪ್ಸೂಲ್‌

ಮಾಡುವ ವಿಧಾನ:

ತುಂಡರಿಸಿದ ಈರುಳ್ಳಿಯನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಈರುಳ್ಳಿಯಿಂದ ರಸವನ್ನು ತೆಗೆದುಕೊಂಡು ಒಂದು ಬಟ್ಟಲಲ್ಲಿ ಇಟ್ಟುಕೊಳ್ಳಬೇಕು. ರಾತ್ರಿ ವೇಳೆಯಲ್ಲಿ ಒಂದು ಬೌಲ್ ನಲ್ಲಿ ಈರುಳ್ಳಿ ರಸ, ಮೆಂತೆಕಾಳು, ಲವಂಗ, ವಿಟಮಿನ್‌ ಇ ಕ್ಯಾಪ್ಸೂಲ್‌ ಬೇರೆಸಿಕೊಂಡು ನೆನಸಿಡಬೇಕು. ನಂತರ ಹತ್ತಿಯನ್ನು ತೆಗೆದುಕೊಂಡು ನೆನಸಿಟ್ಟ ಮಿಶ್ರಣಕ್ಕೆ ಅದ್ದಿಕೊಂಡು ಕೂದಲಿನ ಬುಡಕ್ಕೆ ಹಚ್ಚಿ ಸ್ವಲ್ಪ ಸಮಯ ಬಿಡಬೇಕು ನಂತರ ತಲೆ ಸ್ನಾನ ಮಾಡಿದರೆ ಕೂದಲು ಉದುರುವು ಕಡಿಮೆ ಆಗುತ್ತದೆ.

ಈರುಳ್ಳಿ ಅಡುಗೆಯಲ್ಲಿ ಎಷ್ಟು ಬಳಕೆ ಆಗುತ್ತದೋ ಅಷ್ಟೇ ಆರೋಗ್ಯಕ್ಕೆ ಉತ್ತಮವಾಗಿದೆ. ಆಹಾರವನ್ನು ಸೇವಿಸಿದಾಗ ಜೀರ್ಣಕ್ರಿಯೆಗೆ ಸಹಾಯ ಮಾಡುವುದಲ್ಲದೇ, ಅಜೀರ್ಣ ಮತ್ತು ಮಲ ಬದ್ಧತೆಯನ್ನು ದೂರ ಮಾಡುತ್ತದೆ. ಈರುಳ್ಳಿಯನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್‌ ಅಂಶವನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ದೇಹದಲ್ಲಿರುವ ಬೊಜ್ಜನ್ನು ಕಡಿಮೆ ಮಾಡಿ , ದೇಹದ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಈರುಳ್ಳಿಯನ್ನು ತಿನ್ನುವುದರಿಂದ ಹಲವಾರು ಆರೋಗ್ಯದ ಸಮಸ್ಯೆಯನ್ನು ಬಗೆಹರಿಸುವುದಲ್ಲದೆ ಇದರಿಂದ ತಯಾರಿಸಿದ ಔಷಧೀಯನ್ನು ಕೂದಲಿಗೆ ಹಚ್ಚಿದರೆ ಕೂದಲಿನ ಸಮಸ್ಯೆಯನ್ನು ಬಗೆಹರಿಸುತ್ತದೆ. ಈರುಳ್ಳಿಯಲ್ಲಿ ಕ್ಯಾಲೋರಿ ಅಂಶಗಳ ಜೊತೆಗೆ ಕರಗುವ ನಾರಿನಾಂಶ ಇರುವುದರಿಂದ ಇದನ್ನು ಹಸಿಯಾಗಿ ತಿಂದರೂ ಕೂಡ ಹಲವು ಆರೋಗ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ:Cucumber Juice Reduce BellyFat:ಹೊಟ್ಟೆಯ ಬೊಜ್ಜು ಕರಗಿಸಲು ಕುಡಿಯಿರಿ ಸೌತೆಕಾಯಿ ಜ್ಯೂಸ್

ಇದನ್ನೂ ಓದಿ:Beautiful Nails :ಸುಂದರವಾದ ಉಗುರು ಪಡೆಯಲು ಇಲ್ಲಿದೆ ಟಿಪ್ಸ್

ಮೆಂತ್ಯೆಕಾಳನ್ನು ನೀರಿನಲ್ಲಿ ನೆನಸಿ ಕುಡಿಯುವುದರಿಂದ ಹಲವು ಆರೋಗ್ಯದ ಸಮಸ್ಯೆಗಳನ್ನು ಬಗೆಹರಿಸಲು ಸಹಕಾರಿಯಾಗಿದೆ. ಅಷ್ಟೇ ಅಲ್ಲದೆ ಕೂದಲು ಸಂರಕ್ಷಣೆಯನ್ನು ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.ಇದರಿಂದ ತಯಾರಿಸಿದ ಪೇಸ್ಟ್‌ ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವ ಸಮಸ್ಯೆ ಮತ್ತು ತಲೆಹೊಟ್ಟು ಕಡಿಮೆ ಮಾಡುತ್ತದೆ.

ಲವಂಗದಲ್ಲಿ ವಿಟಮಿನ್‌ ಸಿ ಅಂಶ ಇರುವುದರಿಂದ ಬಿಳಿ ರಕ್ತಕಣ ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಖಾಯಿಲೆಗಳವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯ ಶಕ್ತಿಯನ್ನು ಹೆಚ್ಚಿಸುತ್ತದೆ. ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ.

Onion is the solution for hair loss

Comments are closed.