ಎಳ್ಳಿನ ಮಹತ್ವ ನಿಮಗೇನಾದ್ರೂ ಗೊತ್ತಾ ? ಗೊತ್ತಾದ್ರೆ ನಿತ್ಯವೂ ಆಹಾರದಲ್ಲಿ ಎಳ್ಳಿನ ಬಳಕೆ ಮಾಡುತ್ತೀರಿ..!!

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯಂತೆ, ನೋಡೋಕೆ ಚಿಕ್ಕದಾದ ಎಳ್ಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂಧಿದೆ. ಭಾರತೀಯರು ಎಳ್ಳನ್ನು ಎಣ್ಣೆರೂಪದಲ್ಲಿ, ಆಹಾರದಲ್ಲಿ, ಹೋಮ- ಹವನ- ತರ್ಪಣಾದಿ ಕ್ರಿಯೆಗಳಲ್ಲೋ, ಔಷಧದಲ್ಲಿ ಉಪಯೋಗಿಸುತ್ತಾರೆ.

ಎಳ್ಳು ತಿನ್ನುವುದರಿಂದ ಸೌಂದರ್ಯ ಹಾಗೂ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಚಳಿಗಾಲದಲ್ಲಿ ಎಳ್ಳು ತಿನ್ನುವುದರಿಂದ ಶಕ್ತಿ ಹೆಚ್ಚುವುದಲ್ಲದೇ. ತ್ವಚೆಗೆ ಒಳ್ಳೆಯದು. ಎಳ್ಳಿನಲ್ಲಿ ಎರಡು ಪ್ರಕಾರ ಗಳಿವೆ. ಬಿಳಿ ಎಳ್ಳು ಹಾಗೂ ಕಪ್ಪು ಎಳ್ಳು. ಇದನ್ನು ಪ್ರಪಂಚದಾದ್ಯಂತ ಬಳಸಲಾಗುತ್ತದೆ.

ಎಳ್ಳಿನಲ್ಲಿ ಕೊಬ್ಬು, ವಿಟಮಿನ್, ಕಬ್ಬಿಣ, ಕ್ಯಾಲ್ಸಿಯಮ್, ಫೊಸ್ಪರಸ್, ಪ್ರೊಟೀನ್, ಜಿಂಕ್ ಹೀಗೆ ಹಲವಾರು ಘಟಕಗಳು ಕಂಡುಬರುತ್ತವೆ. ಎಳ್ಳಲ್ಲಿರುವ ಕೊಬ್ಬಿನಂಶವು ದೇಹದ ರಕ್ತದೊತ್ತಡವನ್ನು ನಿಯಂತ್ರಿಸು ತ್ತದೆ. ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಕುಗ್ಗಿಸುತ್ತದೆ. ದೇಹದ ಅಧಿಕ ಬೊಜ್ಜು ಹಾಗೂ ಕೊಬ್ಬಿನಂಶವನ್ನು ಕಡಿಮೆಗೊಳಿಸುತ್ತದೆ. ಚರ್ಮ, ಮೂಳೆ, ನರಮಂಡಲ, ಮಾಂಸಖಂಡಗಳನ್ನು ಪೋಷಿಸುತ್ತದೆ.

ಎಳ್ಳಲ್ಲಿ ಸಾಕಷ್ಟು ನಾರಿನಂಶವಿದ್ದು ಮಲಬದ್ಧತೆ, ಮೂಲವ್ಯಾಧಿಗಳಂತ ಹ ಸಮಸ್ಯೆಗಳ ನಿವಾರಣೆಮಾಡುತ್ತದೆ. ಇದರಲ್ಲಿ ’ಫೊಲಿಕ್ಏಸಿಡ್’ ಅಧಿಕವಾಗಿ ಕಂಡುಬರುವ ಕಾರಣ ಇದನ್ನು ಗರ್ಭಧರಿಸುವ ಮುನ್ನ ದಿನನಿತ್ಯ ಒಂದು ಚಮಚ ತಿನ್ನಬಹುದು. ಪ್ರತಿನಿತ್ಯ ಒಂದು ಹೊತ್ತಿನ ಆಹಾರದ ಬದಲಿಗೆ ಎಳ್ಳುಪಾನಕ ಸೇವಿಸಿದರೆ ದೇಹದ ಬೊಜ್ಜು ನಿವಾರಣೆಯಾಗುವುದಲ್ಲದೆ ಸಂಧಿಗಳ ನೋವು, ಸವೆತವನ್ನು ತಡೆಗಟ್ಟಬಹುದು.

ಮಕ್ಕಳು ಪ್ರತಿದಿನ ಎರಡು ಎಳ್ಳುಂಡೆ ಸೇವಿಸಿದರೆ, ಮೂಳೆ, ಹಲ್ಲು ಚೆನ್ನಾಗಿ ಬೆಳೆಯುವುದು. ಏಕಾಗ್ರತೆ, ರೋಗನಿರೋಧಕಶಕ್ತಿ ಹೆಚ್ಚುವುದು. ಶರೀರದ ಬೆಳವಣಿಗೆಯು ಸಹಜವಾಗಿ ಆಗುವುದು. ಎಳ್ಳು ಸೇವನೆಯಿಂದ ಮುಟ್ಟಿನಲ್ಲಿ ಏರುಪೇರು, ಮುಟ್ಟಿನ ನೋವಿನಿಂದ ಪರಿಹಾರ ಸಿಗುವುದು.

ಎಳ್ಳೆಣ್ಣೆಯು ಕೂದಲಿಗೆ ಸಂಪೂರ್ಣ ಪೋಷಣೆಯನ್ನು ಒದಗಿಸುತ್ತದೆ ಎಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಇನ್ನು ಎಳ್ಳಿನಲ್ಲಿ ಸೆಸಮಿನ್ ಎಂಬ ಆಂಟಿ ಆಕ್ಸಿಡೆಂಟ್ ಇದ್ದು, ಇದು ಕ್ಯಾನ್ಸರ್ ಕೋಶಗಳನ್ನು ಬೆಳೆಯದಂತೆ ತಡೆಯುತ್ತದೆ. ಎಳ್ಳು ಸೇವಿಸುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಹೊಟ್ಟೆಯ ಕ್ಯಾನ್ಸರ್, ವಿವಿಧ ಬಗೆಯ ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ. ಎಳ್ಳು ಹಸಿವನ್ನು ಹೆಚ್ಚಿಸುತ್ತದೆ. ಎಳ್ಳು ಪಿತ್ತ, ಕಫ ಸಮಸ್ಯೆಯನ್ನು ತಡೆಗಟ್ಟುತ್ತದೆ.

ಇನ್ನು ಚಳಿಗಾಲದಲ್ಲಿ ಎಳ್ಳನ್ನು ಸೇವಿಸುವುದರಿಂದ ಹಾಗೂ ಎಣ್ಣೆಯನ್ನು ಹಚ್ಚುವುದರಿಂದ ಚರ್ಮದ ಶುಷ್ಕತೆ ಕೊನೆಗೊಳ್ಳುತ್ತದೆ. ಎಳ್ಳಿನ ಸೇವನೆಯಿಂದ ತ್ವಚೆ ಕಾಂತಿ ಪಡೆಯುತ್ತದೆ. ಎಳ್ಳೆಣ್ಣೆಯು ಚರ್ಮದ ಕಾಂತಿ ವೃದ್ಧಿಸುತ್ತದೆ. ದೇಹವನ್ನು ತಂಪಾಗಿರಿಸುತ್ತದೆ. ಚರ್ಮದ ಮೇಲಿನ ಸುಕ್ಕು, ಗಾಯ, ಬಿರುಕು, ಕಲೆಗಳನ್ನು ಹೋಗಲಾಡಿಸಿ ತ್ವಚೆಯನ್ನು ಕೋಮಲಗೊಳಿಸುತ್ತದೆ.

ಒತ್ತಡ, ಖಿನ್ನತೆಯ ಸಮಸ್ಯೆಗಳನ್ನು ಸಹ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಕ್ಕರೆ ಜತೆಗೆ ಎಳ್ಳು ಸೇವಿಸುವುದರಿಂದ ಒಣ ಕೆಮ್ಮಿನಿಂದ ಪರಿಹಾರ ಕಂಡುಕೊಳ್ಳಬಹುದು. ಅಲ್ಲದೇ ಕಿವಿಯಲ್ಲಿ ನೋವು ಇದ್ದರೆ, ಅಂಥವರು ಎಳ್ಳು ಎಣ್ಣೆಯನ್ನು ಬೆಳ್ಳುಳ್ಳಿ ಜತೆಗೆ ಬೆರೆಸಿ ಸ್ವಲ್ಪ ಬಿಸಿ ಮಾಡಿ, ಬಳಕೆ ಮಾಡಬಹುದು.

ಎಳ್ಳಿನ ಸೇವನೆಯ ನಮ್ಮ ಹಲ್ಲುಗಳಿಗೆ ತುಂಬಾ ಪ್ರಯೋಜನಕಾರಿ. ಬೆಳಿಗ್ಗೆ ಹಲ್ಲುಜ್ಜಿದ ನಂತರ ಎಳ್ಳನ್ನು ಅಗಿಯುವುದರಿಂದ ಹಲ್ಲುಗಳು ಬಲಗೊಳ್ಳುತ್ತವೆ. ಬಾಯಿ ಹುಣ್ಣಿನಿಂದ ಪರಿಹಾರ ಪಡೆಯಲು ಬಳಸಲಾಗುತ್ತದೆ. ಎಳ್ಳೆಣ್ಣೆಯಲ್ಲಿ ವಿಟಮಿನ್ ಇ ಹಾಗೂ ಕೀಟಾಣು ವೈರಾಣು ನಾಶಕ , ವಸಡಿನ ರಕ್ತಸ್ರಾವ , ಹಲ್ಲು ನೋವು , ಹಲ್ಲು ಹುಳುಕಾಗುವಿಕೆ, ಬಾಯಿ ಹುಣ್ಣಿನ ಸಮಸ್ಯೆಯನ್ನು ಸುಲಭವಾಗಿ ಹೋಗಲಾಡಿಸಬಹುದು.\

ಇದನ್ನೂ ಓದಿ : Health Tips : ನೀವೂ ದೇಹದ ಅತ್ಯಂತ ಮುಖ್ಯ ಭಾಗವನ್ನೇ ತೊಳೆಯುತ್ತಿಲ್ಲ !

ಇದನ್ನೂ ಓದಿ : ತೂಕ ಇಳಿಸುತ್ತೆ, ಹೊಟ್ಟೆಯ ಕೊಬ್ಬು ಕರಗಿಸುತ್ತೆ ಈ 9 ಟೀ

Comments are closed.