Rice Kesri bath: ಅನ್ನದಿಂದ ತಯಾರಿಸಿ ರುಚಿಯಾದ ಕೇಸರಿ ಬಾತ್‌..!

(Rice Kesri bath) ಮದುವೆ ಇತ್ಯಾದಿ ಸಂಭ್ರಮಗಳಲ್ಲಿ ಸಾಮಾನ್ಯವಾಗಿ ಕೇಸರಿಬಾತ್‌ ಅನ್ನು ತಯಾರಿಸುತ್ತೇವೆ. ಇದು ಬಹಳ ರುಚಿ ಹಾಗೂ ಇದನ್ನು ತಯಾರಿಸಲು ನುರಿತ ಜನರಿಂದ ಮಾತ್ರ ಸಾದ್ಯ. ಆದರೆ ಸಣ್ಣ ಪ್ರಮಾಣದಲ್ಲಿ ತಯಾರಿಸುವುದಾದರೆ ಆರಾಮಾಗಿ ಯಾರು ಬೇಕಿದ್ದರೂ ತಯಾರಿಸಬಹುದು. ಇಂದು ನಾನು ನಿಮಗೆ ಅನ್ನದಿಂದ ಹೇಗೆ ಕೇಸರಿ ಬಾತ್‌ ತಯಾರಿಸುವುದು ಎಂಬ ಮಾಹಿತಿ ತಿಳಿಸುತ್ತಿದ್ದೇನೆ. ಇದನ್ನು ಅತೀ ಸುಲಭವಾಗಿ ನೀವೇ ತಯಾರಿಸಿಕೊಳ್ಳಬಹುದು. ಹಾಗಿದ್ದರೆ ಅನ್ನದಿಂದ ಕೇಸರಿಬಾತ್ ತಯಾರಿಸುವ ವಿಧಾನ ಹೇಗೆ ಎಂಬುದನ್ನು ನೋಡೋಣ.

ಬೇಕಾಗುವ ಸಾಮಗ್ರಿಗಳು (Rice Kesri bath):
ಜೀರಾ ರೈಸ್ (ಅಥವಾ ಬಾಸ್ಮತಿ ರೈಸ್) – 250 ಗ್ರಾಂ
ಕೇಸರಿ ದಳ – 3/4 ಗ್ರಾಂ
ಸಕ್ಕರೆ – 375 ಗ್ರಾಂ
ಶುದ್ಧ ತುಪ್ಪ – 250 ಗ್ರಾಂ (ಸ್ವಲ್ಪ ಕಡಿಮೆ ಬಳಸಿದರೂ ಆಗುತ್ತದೆ)
ಲವಂಗ
ಹಾಲು
ನಿಂಬೆರಸ – 4 1/2 ಚಮಚ
ಉಪ್ಪು – 1 ಚಮಚ
ಗೋಡಂಬಿ
ಒಣದ್ರಾಕ್ಷಿ

ಮಾಡುವ ವಿಧಾನ:
ಮೊದಲಿಗೆ ಉದುರಾಗಿ ಅನ್ನ ಮಾಡಿಕೊಳ್ಳಿ. ಅಕ್ಕಿ ಬೇಯಿಸುವಾಗ 1 ಚಮಚ ತುಪ್ಪ ಸೇರಿಸಿ ಬೇಯಿಸಿ. ಅನ್ನದ ಅಗುಳು ಚೆನ್ನಾಗಿ ಬೆಂದಿರಬೇಕು, ಆದರೆ ಅನ್ನ ಮುದ್ದೆಯಾಗಂತೆ ಎಚ್ಚರವಹಿಸಿ. ಬೇಯಿಸಿದ ಅನ್ನದಲ್ಲಿ ಹೆಚ್ಚಿನ ನೀರು ಏನಾದರೂ ಉಳಿದಿದ್ದರೆ ನೀರನ್ನು ತೆಗೆದುಬಿಡಿ. ಅನ್ನವನ್ನು ಒಂದು ಪ್ಲೇಟ್ ನಲ್ಲಿ ಹರಡಿ 5 ನಿಮಿಷ ಆರಲು ಬಿಡಿ. ನಂತರ ಮೂರರಿಂದ ನಾಲ್ಕು ಚಮಚದಷ್ಟು ಹಾಲನ್ನು ಚೆನ್ನಾಗಿ ಕಾಯಿಸಿಕೊಂಡು ಅದರಲ್ಲಿ ಕೇಸರಿ ದಳಗಳನ್ನು ನೆನೆಸಿ 10 ನಿಮಿಷ ಇಡಿ. ಲವಂಗವನ್ನು ನುಣ್ಣಗೆ ಪುಡಿಮಾಡಿಕೊಳ್ಳಿ. ಗೋಡಂಬಿಯನ್ನು ಚೂರುಮಾಡಿಕೊಳ್ಳಿ. ನಿಂಬೆರಸ ಮತ್ತು ಉಪ್ಪನ್ನು ಮಿಕ್ಸ್ ಮಾಡಿಟ್ಟುಕೊಳ್ಳಿ. ಒಂದು ದಪ್ಪ ತಳದ ಪಾತ್ರೆಯಲ್ಲಿ ಅನ್ನ, ಸಕ್ಕರೆ, ತುಪ್ಪ ಇಷ್ಟನ್ನೂ ಹಾಕಿಕೊಂಡು ಸ್ವಲ್ಪ ದೊಡ್ಡ ಉರಿಯಲ್ಲಿ ತಳಹತ್ತದಂತೆ ಕೈಯಾಡಿಸುತ್ತಿರಿ. ಮಿಶ್ರಣ ಕುದಿಯತೊಡಗಿದಾಗ ಹಾಲಿನಲ್ಲಿ ನೆನೆಸಿದ ಕೇಸರಿ, ಉಪ್ಪು, ನಿಂಬೆರಸ ಸೇರಿಸಿ ಬಿಡದೆ ಕೈಯಾಡಿಸಿ. ಮಿಶ್ರಣ ತುಪ್ಪವನ್ನೆಲ್ಲ ಹೀರಿಕೊಳ್ಳತೊಡಗಿದಾಗ ಉರಿಯನ್ನು ಕಡಿಮೆಮಾಡಿ ಮೀಡಿಯಮ್ ಗೆ ತನ್ನಿ. ಈಗ ಕೇಸರಿ ಮಿಶ್ರಣಕ್ಕೆ ದ್ರಾಕ್ಷಿ, ಪುಡಿಮಾಡಿದ ಲವಂಗ ಸೇರಿಸಿ ಕೈಯಾಡಿಸಿ. ಮಿಶ್ರಣ ತುಪ್ಪವನ್ನು ಉಗುಳತೊಡಗಿದಾಗ ಉರಿ ಆಫ್ ಮಾಡಿ ಗೇರುಬೀಜದ ಚೂರುಗಳನ್ನು ಸೇರಿಸಿ ಕೈಯಾಡಿಸಿ, ಮುಚ್ಚಿಡಿ. 10 ನಿಮಿಷ ಸೆಟ್ ಆಗಲು ಬಿಟ್ಟು, ನಂತರ ಬಿಸಿ ಬಿಸಿ ಕೇಸರಿಯನ್ನು ಸವಿದುನೋಡಿ!

ಇದನ್ನೂ ಓದಿ : Masala paddu: ನೀವಿನ್ನೂ ಮಸಾಲ ಪಡ್ಡುವನ್ನು ಟ್ರೈ ಮಾಡಿಲ್ಲ ಎಂದಾದರೆ ಇಂದೇ ಟ್ರೈ ಮಾಡಿ..

ಸೂಚನೆ : ಕೇಸರಿಬಾತ್ ತಯಾರಿಸಲು ಸುವಾಸಿತ ಅಕ್ಕಿಯೇ ಬೇಕು. ‘ಸಣ್ಣಕ್ಕಿ’ ಅಥವಾ ‘ಜೀರಾ ರೈಸ್’ನ್ನು ಬಳಸಿದರೆ ಉತ್ತಮ, ಅದು ಸಿಗದಿದ್ದರೆ ಬಾಸ್ಮತಿ ಅಕ್ಕಿಯನ್ನು ಬಳಸಬಹುದು.

(Kesri bath) Kesari bath is usually prepared during celebrations like marriages. It is very tasty and can only be prepared by skilled people. But if it is prepared in small quantities, anyone can easily prepare it. Today I am telling you how to make saffron bath from rice

Comments are closed.