Coconut Milk Tea Recipe:ಎಂದಾದರೂ ಟ್ರೈ ಮಾಡಿದ್ರಾ ತೆಂಗಿನಕಾಯಿ ಹಾಲಿನ ಚಹಾ

(Coconut Milk Tea Recipe)ತೆಂಗಿನ ಕಾಯಿ ದಿನನಿತ್ಯದ ಆಹಾರ ತಯಾರಿಕೆಯಲ್ಲಿ ಅತಿ ಹೆಚ್ಚು ಬಳಕೆ ಆಗುತ್ತದೆ. ತೆಂಗಿನ ಕಾಯಿಯನ್ನು ಅಡುಗೆಯಲ್ಲಿ ಬಳಕೆ ಮಾಡುವುದರಿಂದ ಹಲವು ಆರೋಗ್ಯದ ಪ್ರಯೋಜನವನ್ನು ನಮ್ಮ ದೇಹಕ್ಕೆ ಒದಗಿಸುತ್ತದೆ. ತೆಂಗಿನ ಕಾಯಿ ಹಾಲಿನ ತಂಬೂಳಿ, ಸಾರು ಹೀಗೆ ಹಲವು ರುಚಿಯಾದ ಅಡುಗೆ ಮಾಡುತ್ತಾರೆ. ಇದನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯ ಕಾಪಾಡುತ್ತದೆ. ಹಾಗಾಗಿ ಕಾಯಿ ಹಾಲಿನ ಚಹಾ ಪ್ರತಿನಿತ್ಯ ಕುಡಿಯುವುದರಿಂದ ಆರೋಗ್ಯಕ್ಕೆ ಉತ್ತಮ. ಕಾಯಿ ಹಾಲಿನ ಚಹಾ ಹೇಗೆ ತಯಾರಿಸಿಕೊಳ್ಳುವುದು ಎಂಬ ಮಾಹಿತಿಯ ಕುರಿತು ತಿಳಿಯೋಣ.

Coconut Milk Tea Recipeಬೇಕಾಗುವ ಸಾಮಾಗ್ರಿಗಳು
ಕಾಯಿ ಹಾಲು
ಶುಂಠಿ
ಏಲಕ್ಕಿ
ಟೀ ಪುಡಿ
ಸಕ್ಕರೆ

ಮಾಡುವ ವಿಧಾನ

ಮೊದಲಿಗೆ ಕಾಯಿಯನ್ನು ತುರಿದು ಬೌಲ್ ನಲ್ಲಿ ಹಾಕಿ ಇಟ್ಟು ಕೊಳ್ಳಬೇಕು. ಬೌಲ್‌ ನ ಮೇಲೆ ಶುಭ್ರವಾದ ಬಟ್ಟೆ ಹಾಕಿ ಅದರ ಮೇಲೆ ತುರಿಕೊಂಡ ಕಾಯಿ ಹಾಕಿ ಚೆನ್ನಾಗಿ ಹಿಂಡಿಕೊಂಡು ಕಾಯಿ ಹಾಲು ತೆಗೆದುಕೊಳ್ಳಬೇಕು. ಅಥವಾ ಮಿಕ್ಸಿ ಜಾರಿಗೆ ಒಂದು ಕಪ್‌ ಕಾಯಿ ತುರಿ ಹಾಕಿ, ಕುದಿಸಿ ತಣಿಸಿಕೊಂಡ ಅರ್ಧ ಕಪ್‌ ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು. ನಂತರ ಪಾತ್ರೆಯ ಮೇಲೆ ಶುಭ್ರವಾದ ಬಟ್ಟೆ ಹಾಕಿ ರುಬ್ಬಿಕೊಂಡ ಕಾಯನ್ನು ಅದರ ಮೇಲೆ ಹಾಕಿಕೊಂಡು ಹಿಂಡಿದರೆ ಹೆಚ್ಚಿಗೆ ಹಾಲು ಬರುತ್ತದೆ.

ಪಾತ್ರೆಯಲ್ಲಿ ಒಂದು ಕಪ್‌ ನೀರು ಹಾಕಿ ಅದಕ್ಕೆ ಒಂದು ಚಮಚ ಟೀ ಪುಡಿ, ಎರಡು ಚಮಚ ಸಕ್ಕರೆ, ಒಂದು ತುಂಡು ಶುಂಠಿ,ನಾಲ್ಕು ಏಲಕ್ಕಿ ಹಾಕಿ ಚೆನ್ನಾಗಿ ಕುದಿಸಿಕೊಂಡು ಚಹಾದ ಡಿಕಾಕ್ಷನ್‌ ತಯಾರಿಸಿಕೊಳ್ಳಬೇಕು. ಲೋಟದಲ್ಲಿ ಅರ್ಧಬಾಗದಷ್ಟು ಡಿಕಾಕ್ಷನ್‌ ಸೊಸಿಕೊಂಡು ಇನ್ನು ಅರ್ಧ ಭಾಗದಷ್ಟು ಕಾಯಿ ಹಾಲು ಹಾಕಿದರೆ ಕಾಯಿ ಹಾಲಿನ ಚಹಾ ರುಚಿಯಾಗಿ ಸವಿಯಲು ರೆಡಿ. ಜೊತೆಗೆ ಇದರಲ್ಲಿ ಬಳಸಿದ ನೈಸರ್ಗಿಕ ಅಂಶ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ.

ಕಾಯಿ ಹಾಲು
ಕಾಯಿ ಹಾಲು ಬಹಳ ರುಚಿ ಅಷ್ಟೇ ಅಲ್ಲದೆ ಇದರಿಂದ ಹಲವು ಆರೋಗ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಇದನ್ನು ಸೇವನೆ ಮಾಡುವುದರಿಂದ ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುತ್ತದೆ. ಇದರಲ್ಲಿ ಅತಿ ಹೆಚ್ಚು ಪೌಷ್ಟಿಕಾಂಶ ಇರುವುದರಿಂದ ತೂಕ ಇಳಿಸಲು ಸಹಕಾರಿ ಆಗಿದೆ. ಜೊತೆಗೆ ಆರೋಗ್ಯಕರ ಚರ್ಮ ಮತ್ತು ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ:PunarPuli Juice Health Tips:ಪುನರ್‌ ಪುಳಿ ಜ್ಯೂಸ್ ಕುಡಿದ್ರೆ ತಲೆನೋವು ಹತ್ತಿರಕ್ಕೂ ಸುಳಿಯುವುದಿಲ್ಲ

ಇದನ್ನೂ ಓದಿ:Date churna Benefits:ಖರ್ಜೂರದ ಚೂರ್ಣ ಹೆಚ್ಚಿಸುತ್ತೆ ನಿಮ್ಮ ರೋಗನಿರೋಧಕ ಶಕ್ತಿ

ಶುಂಠಿ
ಶುಂಠಿಯನ್ನು ಅಗೆದು ಅದರ ರಸ ನುಂಗುವುದರಿಂದ ಕೆಮ್ಮು ಕಡಿಮೆ ಆಗುತ್ತದೆ. ಚಹಾದಲ್ಲಿ ಒಂದು ತುಂಡು ಶುಂಠಿ ಹಾಕಿ ಕುದಿಸಿ ಕುಡಿಯುವುದರಿಂದ ಶೀತ ಮತ್ತು ಕೆಮ್ಮು ಕಡಿಮೆ ಆಗುತ್ತದೆ. ಒಣ ಶುಂಠಿ ಪುಡಿಯನ್ನು ಗರ್ಭಿಣಿ ಮಹಿಳೆಯರಿಗೆ ಕೊಡುವುದರಿಂದ ವಾಕರಿಕೆ ನಿವಾರಣೆ ಆಗುತ್ತದೆ. ಶುಂಠಿಯನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ.

Coconut Milk Tea Recipe Have you ever tried coconut milk tea?

Comments are closed.