ಬೆಳ್ತಂಗಡಿ : ಮನೆಯಲ್ಲಿ ಮಲಗಿದ್ದ ಮೂವರು ಮಕ್ಕಳಿಗೆ ಹಾವು ಕಡಿತ, ಜೀವ ಉಳಿಸಿದ ನಾಟಿವೈದ್ಯ

Belthangady Snake Bite : ಬೆಳ್ತಂಗಡಿ : ಮನೆಯಲ್ಲಿ ಮಲಗಿದ್ದ ಮೂವರು ಮಕ್ಕಳಿಗೆ ಹಾವು ಕಡಿದಿತ್ತು. ಆಸ್ಪತ್ರೆಗೆ ಕರೆದೊಯ್ಯಲು ಹೊಂಡಾಗುಂಡಿ ರಸ್ತೆಗಳು ಸಮಸ್ಯೆ ಆಗಿತ್ತು. ಆಪತ್ಕಾಲದಲ್ಲಿ ನಾಟಿ ವೈದ್ಯರು ಮೂವರು ಮಕ್ಕಳ ಜೀವ ಉಳಿಸಿದ್ದು, ಸರಕಾರ, ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಬಹುದೊಡ್ಡ ಸಮಸ್ಯೆಯೆಂದರೆ ಸಮರ್ಪಕ ರಸ್ತೆ. ಎಷ್ಟೇ ಅಪಘಾತಗಳು ಸಂಭವಿಸಿದರೂ ಸಹ ಇಲ್ಲಿನ ಜನಪ್ರತಿನಿಧಿಗಳು ರಸ್ತೆ ಸರಿಪಡಿಸುವತ್ತ ಗಮನವೇ ಹರಿಸುತ್ತಿಲ್ಲ. ಈ ವಿಚಾರವನ್ನು ಇಲ್ಲಿ ಪ್ರಸ್ತಾಪಿಸಲು ಕಾರಣ ಕೂಡ ಇದೆ. ಹಾವು ಕಚ್ಚಿದ್ದರೂ ಸಹ ಗುಂಡಿ ರಸ್ತೆಯಿಂದಾಗಿ ಆಸ್ಪತ್ರೆಗೆ ಹೋಗಲಾರದ ಘಟನೆಯೊಂದು ಬೆಳ್ತಂಗಡಿ ತಾಲೂಕಿನ ತಣ್ಣಿರುಪಂತ ಸಮೀಪದ ಕುದ್ರಡ್ಕ ಎಂಬಲ್ಲಿ ಸಂಭವಿಸಿದೆ.
ಮನೆಯಲ್ಲಿ ರಾತ್ರಿ ಮಲಗಿದ್ದ ಮೂವರು ಮಕ್ಕಳಿಗೆ ಹಾವು ಕಡಿದಿತ್ತು. ಅತ್ಯಂತ ವಿಷಪೂರಿತ ಕನ್ನಡಿ ಹಾವು ದಕ್ಷತ್, ವಿಶ್ಮಿತಾ ಹಾಗೂ ಅನ್ವಿತಾ ಎಂಬ ಮಕ್ಕಳಿಗೆ ಕಚ್ಚಿತ್ತು. ಆದರೆ ಗುರುವಾಯನಕೆರೆ ಯಿಂದ ಉಪ್ಪಿನಂಗಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಗುಂಡಿಯಾಗಿದೆ. ಹೀಗಾಗಿ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸುವುದಕ್ಕೆ ಸಾಧ್ಯವಾಗ್ತಾ ಇರಲಿಲ್ಲ.
ರಸ್ತೆ ಸಮಸ್ಯೆಯ ಕುರಿತು ಎಚ್ಚೆತ್ತುಕೊಂಡ ಪೋಷಕರು ಕೂಡಲೇ ಆಸ್ಪತ್ರೆಯ ಬದಲು ನಾಟಿ ವೈದ್ಯರ ಮನೆಯತ್ತ ವಾಹನವನ್ನು ತಿರುಗಿಸಿದ್ದಾರೆ. ನಾಟಿ ವೈದ್ಯ ಸೂರಪ್ಪ ಪೂಜಾರಿ ಅವರ ಬಳಿ ಮಕ್ಕಳನ್ನು ಕರೆದೊಯ್ದಿದ್ದಾರೆ. ಕೂಡಲೇ ನಾಟಿ ವೈದ್ಯ ಸೂರಪ್ಪ ಪೂಜಾರಿ ಮಕ್ಕಳ ದೇಹದಿಂದ ವಿಷ ತೆಗೆಯುವ ಮೂಲಕ ಮೂವರು ಮಕ್ಕಳನ್ನು ಪ್ರಾಣಾಪಾಯದಿಂದ ಕಾಪಾಡಿದ್ದಾರೆ.
Belthangady Snake Bite : Three children sleeping at home Snake Bite herbalist saved their lives



