ಧರ್ಮಸ್ಥಳ : ಅನಾಥ ಶವ ಹೂತಿರುವ 13 ಜಾಗ ಮಹಜರು, ಮುಂದೇನಾಗುತ್ತೆ ಪ್ರಕರಣ ?

Dharmasthala : ಮಂಗಳೂರು : ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಕ್ತಿಯಲ್ಲಿ ನಡೆದಿದೆ ಎನ್ನಲಾದ ಮೃತದೇಹಗಳ ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ಜೋರಾಗಿದೆ.
ನಿನ್ನೆ ಸುಮಾರು 13 ಮೃತದೇಹಗಳನ್ನು ಹೂತಿರುವ ಜಾತದಲ್ಲಿ ಮಹಜರು ಕಾರ್ಯ ನಡೆಸಲಾಗಿದೆ. ದೂರುದಾರ ಜುಲೈ 27 ರಂದು ಬೆಳಗ್ಗೆ ಬೆಳ್ತಂಗಡಿಯ ಎಸ್ಐಟಿ ಕಚೇರಿಗೆ ಹಾಜರಾಗಿದ್ದ.
ನಂತರ ಬಿಗಿ ಪೊಲೀಸ್ ಭದ್ರತೆಯಲ್ಲಿ ದೂರುದಾರನನ್ನು ಕರೆದುಕೊಂಡು ಪೊಲೀಸರು ಧರ್ಮಸ್ಥಳದ ನೇತ್ರಾವತಿ ಸ್ನಾನ, ನೇತ್ರಾವತಿ ನದಿ ಅಕ್ಕಪಟ್ಟದಲ್ಲಿಯೇ ಸುಮಾರು 8 ಜಾಗಗಳನ್ನು ಅನಾಥ ಶವ ಹೂತಿರುವ ತೋರಿಸಿದ್ದಾನೆ.
ಬೆಳಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಶವಗಳ ಹೂತಿರುವ ಜಾಗದ ಮಹಜರು ಕಾರ್ಯ ನಡೆಸಲಾಗಿದೆ. ಜುಲೈ 28ರಂದು ಕೂಡ ಮತ್ತೆ ಎಸ್‌ಐಟಿ ಅಧಿಕಾರಿಗಳು ಮಹಜರು ಕಾರ್ಯವನ್ನು ಮುಂದುವರಿಸುವ ಸಾಧ್ಯತೆಯಿದೆ. ದೂರುದಾರ ಇಂದೂ ಕೂಡ ಧರ್ಮಸ್ಥಳಕ್ಕೆ ಆಗಮಿಸುವ ಸಾಧ್ಯತೆಯಿದೆ.
Also Read : ಸರ್ಕಾರಿ ನೌಕರರಿಗೆ ಸಿಹಿಸುದ್ದಿ ! ಇನ್ಮುಂದೆ ಹಿರಿಯರ ಪೋಷಕರ ಆರೈಕೆಗೆ 30 ದಿನ ರಜೆ
13 ಕಡೆ ಅನಾಥ ಶವ ಹೂತಿರುವ ಜಾಗ ಪತ್ತೆ
ಅನಾಮಿಕ ವ್ಯಕ್ತಿಯೊಬ್ಬರು ನೀಡಿದ ಮಾಹಿತಿಯ ಆಧಾರದ ಮೇಲೆ, ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ಹಲವಾರು ಶವಗಳನ್ನು ಹೂತಿರುವ ಸ್ಥಳಗಳನ್ನು SIT ಗುರುತಿಸಿದೆ.
ನೇತ್ರಾವತಿ ನದಿಯ 1 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸುಮಾರು 8 ಹೆಣದ ಗುಂಡಿಗಳನ್ನು ಗುರುತಿಸಲಾಗಿದೆ. ಸುಮಾರು 450ಕ್ಕೂ ಅಧಿಕ ಅಸಹಜ ಸಾವುಗಳ ಕುರಿತು ಶಂಕೆ ವ್ಯಕ್ತಪಡಿಸಲಾಗಿದ್ದು, ಈ ಹಳೆಯ ಪ್ರಕರಣಗಳ ಮರುತನಿಖೆ ನಡೆಯುತ್ತಿದೆ.
ದೂರುದಾರನಿಗೆ ಬಿಗಿ ಭದ್ರತೆ
ದೂರುದಾರ ಒಟ್ಟು 13 ಜಾಗಗಳನ್ನು ತೋರಿಸಿದ್ದಾನೆ. ಲಭ್ಯವಾದ ಮಾಹಿತಿಯ ಪ್ರಕಾರ, 450ಕ್ಕೂ ಅಧಿಕ ಜಾಗಗಳನ್ನು ಆತ ತೋರಿಸಬೇಕಾಗಿದೆ. ದೂರುದಾರನ ಗುರುತನ್ನು ಮರೆ ಮಾಚುವ ಕಾರ್ಯವನ್ನು ಮಾಡಲಾಘಿದೆ.
ದೂರುದಾರನಿಗೆ ಬುಲೆಟ್ ಪ್ರೂಫ್ ಜಾಕೆಟ್ ಅಳವಡಿಸಲಾಗಿದ್ದು, ಆತನನ್ನು ಪೊಲೀಸರು ಬಿಗಿ ಭದ್ರತೆಯಲ್ಲಿ ಧರ್ಮಸ್ಥಳಕ್ಕೆ ಕರೆ ತಂದಿದ್ದರು. ಮುಖಕ್ಕೆ ಕೂಡ ಕವಚ ಹಾಕಲಾಗಿತ್ತು.
Also Read : ಗೃಹಲಕ್ಷ್ಮೀ ಸಂಘದಿಂದ 5000 ರೂ. : ಗೃಹಿಣಿಯರಿಗೆ ಏನಿದು ಗುಡ್‌ನ್ಯೂಸ್
ಶವ ಅಗೆಯುವ ಕುರಿತು ಮುಂದಿನ ಕ್ರಮವೇನು?
SIT ತಂಡವು ಗುರುತಿಸಲಾದ ಸ್ಥಳಗಳಲ್ಲಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದೆ. ಪ್ರಮುಖವಾಗಿ:
ಸ್ಥಳ ಮಹಜರು (Spot Mahazar): ಅನಾಮಿಕ ದೂರುದಾರನನ್ನು (ಮಾಹಿತಿದಾರ) ಸ್ಥಳಕ್ಕೆ ಕರೆತಂದು, ಆತ ನೀಡಿದ ಮಾಹಿತಿ ಆಧಾರದ ಮೇಲೆ ಶವಗಳನ್ನು ಹೂತಿರುವ ಜಾಗಗಳನ್ನು ಗುರುತಿಸಿ ಮಹಜರು ನಡೆಸಲಾಗಿದೆ.
ಶವಗಳ ಉತ್ಖನನ (Exhumation): ಗುರುತಿಸಲಾದ ಸ್ಥಳಗಳಲ್ಲಿ ಶವಗಳನ್ನು ಹೊರತೆಗೆಯಲು ಕಾನೂನುಬದ್ಧ ಪ್ರಕ್ರಿಯೆಗಳನ್ನು ಅನುಸರಿಸಲಾಗುವುದು. ಇದು ನ್ಯಾಯಾಲಯದ ಅನುಮತಿಯೊಂದಿಗೆ ನಡೆಯುವ ಸಾಧ್ಯತೆಯಿದೆ.
FSL ಪರೀಕ್ಷೆ (Forensic Science Laboratory Test): ಹೊರತೆಗೆದ ಶವಗಳ ಅವಶೇಷಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ, ಅವುಗಳ ಗುರುತು, ಸಾವಿಗೆ ಕಾರಣ, ಮತ್ತು ಯಾವುದೇ ಅನುಮಾನಾಸ್ಪದ ಅಂಶಗಳಿದ್ದರೆ ಪತ್ತೆ ಹಚ್ಚಲಾಗುವುದು.
ಪ್ರಮುಖ ವ್ಯಕ್ತಿಗಳ ವಿಚಾರಣೆ: ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅನಾಮಿಕ ವ್ಯಕ್ತಿಯನ್ನು ಸತತವಾಗಿ ವಿಚಾರಣೆ ನಡೆಸಲಾಗುತ್ತಿದೆ.
ಜಿತೇಂದ್ರ ಕುಮಾರ್ ಎಂಬ ಹೆಸರು ಸಹ ಕೇಳಿಬಂದಿದ್ದು, SIT ಹಲವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಕಂದಾಯ ಇಲಾಖೆ, ಸರ್ವೆ ಇಲಾಖೆ ಅಧಿಕಾರಿಗಳು ಕೂಡ ತನಿಖೆಗೆ ಸಹಕಾರ ನೀಡುತ್ತಿದ್ದಾರೆ.
Dharmasthala ಪ್ರಕರಣ ಏನಾಗುತ್ತೆ ?
ಈ ಪ್ರಕರಣವು ಪ್ರಸ್ತುತ SIT ತನಿಖೆಯ ಮಹತ್ವದ ಹಂತದಲ್ಲಿದೆ. ತನಿಖೆಯ ಆಧಾರದ ಮೇಲೆ ಮುಂದಿನ ಬೆಳವಣಿಗೆಗಳು ನಿರ್ಧಾರವಾಗುತ್ತವೆ.
SIT ತನಿಖೆಯು ಶವಗಳ ಉತ್ಖನನ ಮತ್ತು FSL ವರದಿಗಳ ಮೂಲಕ ಸಾವಿನ ಕಾರಣಗಳು ಮತ್ತು ಯಾವುದೇ ಅಪರಾಧ ಕೃತ್ಯಗಳಿದ್ದರೆ ಅವುಗಳನ್ನು ಪತ್ತೆಹಚ್ಚುವ ಗುರಿ ಹೊಂದಿದೆ.
ನ್ಯಾಯಾಲಯದ ಪ್ರಕ್ರಿಯೆ: ತನಿಖೆಯಲ್ಲಿ ಯಾವುದೇ ಸಾಕ್ಷಿಗಳು ಅಥವಾ ಪುರಾವೆಗಳು ಲಭ್ಯವಾದರೆ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಮತ್ತು ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಲಿದೆ.
ಈ ಪ್ರಕರಣವು ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಸಾರ್ವಜನಿಕ ಆಸಕ್ತಿಯನ್ನು ಕೆರಳಿಸಿದೆ. SIT ತನಿಖೆಯ ಫಲಿತಾಂಶದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
ನ್ಯಾಯಾಲಯವು ಈಗಾಗಲೇ ಧರ್ಮಸ್ಥಳದ ಕುರಿತು ಮಾನಹಾನಿಕರ ಆರೋಪಗಳನ್ನು ಹೊಂದಿರುವ 8,842 ಆನ್‌ಲೈನ್ ಲಿಂಕ್‌ಗಳನ್ನು ಡಿಲೀಟ್ ಮಾಡಲು ಆದೇಶಿಸಿದೆ. ಇದು ತನಿಖೆಯ ನಿಖರತೆ ಮತ್ತು ಪಾರದರ್ಶಕತೆಗೆ ಒತ್ತು ನೀಡುತ್ತದೆ.
ಎಸ್‌ಐಟಿ ತನಿಖೆ ತೀವ್ರಗೊಂಡಿದ್ದು, ಶವಗಳನ್ನು ಹೂತಿರುವ ಜಾಗಗಳನ್ನು ಪರಿಶೀಲಿಸುವ ಹಾಗೂ ಅಲ್ಲಿಂದ ಮಾಹಿತಿ ಕಲೆಹಾಕುವ ಕೆಲಸ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ FSL ವರದಿಗಳು ಮತ್ತು ಹೆಚ್ಚಿನ ವಿಚಾರಣೆಗಳಿಂದ ಪ್ರಕರಣದ ಇನ್ನಷ್ಟು ರಹಸ್ಯಗಳು ಬಯಲಾಗುವ ನಿರೀಕ್ಷೆಯಿದೆ.
Dharmasthala : 13 Burial Sites of Unclaimed Bodies Identified, What’s Next for the Case ?



