ವಾಹನ ಸವಾರರಿಗೆ ಬಿಗ್ ಶಾಕ್ : ಟ್ರಾಫಿಕ್ ದಂಡ ಬಾಕಿ ಉಳಿಸಿಕೊಂಡ್ರೆ ವಾಹನವೇ ಸೀಜ್..!

ಬೆಂಗಳೂರು : ವಾಹನ ಸವಾರರಿಗೆ ಬೆಂಗಳೂರು ನಗರ ಪೊಲೀಸರು ಶಾಕ್ ನೀಡಿದ್ದಾರೆ. ಟ್ರಾಫಿಕ್ ರೂಲ್ಸ್ ಉಲ್ಲಂಘಿಸುವ ದ್ವಿಚಕ್ರ ವಾಹನ ಮಾಲೀಕರ ವಿರುದ್ದ ಕಠಿಣ ಕ್ರಮವನ್ನು ಪೊಲೀಸರು ಮುಂದಾಗಿದ್ದು, ಕೈಗೊಂಡಿದ್ದಾರೆ. ದಂಡ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿರುವ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗಿದ್ದಾರೆ.

2017ರಿಂದ 2020ರವರೆಗೆ ಬೆಂಗಳೂರು ನಗರವೊಂದರಲ್ಲಿಯೇ ದ್ವಿಚಕ್ರ ವಾಹನಗಳ ಕೇಸ್ ಉಲ್ಲಂಘನೆಯಿಂದ ನೂರಾರು ಕೋಟಿ  ಹಣವನ್ನು ಸವಾರರು ಪಾವತಿ ಮಾಡಬೇಕಾಗಿದೆ. ಪೊಲೀಸರು ಎಚ್ಚರಿಕೆಯನ್ನು ನೀಡಿದ್ದರೂ ಕೂಡ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೇ ಕಾರಣಕ್ಕೆ ಪೊಲೀಸರು ಇದೀಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.

ಸಂಚಾರಿ ನಿಯಮ ಉಲ್ಲಂಘನೆಯನ್ನು ಮಾಡಿ ದಂಡ ಪಾವತಿ ಮಾಡದೇ ಇರುವವರಿಗೆ ಪೊಲೀಸರು ಈಗಾಗಲೇ ಮಾಹಿತಿಯನ್ನು ರವಾನಿಸಿದ್ದಾರೆ. ದಂಡ ಪಾವತಿ ಮಾಡದೇ ಇದ್ರೆ ನಿಮ್ಮ ವಾಹನವನ್ನೇ ಮುಟ್ಟುಗೋಲು ಹಾಕಿಕೊಳ್ಳುವುದಾಗಿಯೂ ಠಾಣೆಯಿಂದ ಸೂಚನೆ ನೀಡಲಾಗಿದೆ.

ಟ್ರಾಫಿಕ್ ದಂಡ ಪಾವತಿಸದೇ ದ್ವಿಚಕ್ರ ವಾಹನಗಳನ್ನು ರಸ್ತೆಗಿಳಿಸೋ ಮುನ್ನ ಯಾವುದಕ್ಕೂ ಎಚ್ಚರವಾಗಿರೋದು ಒಳಿತು.

Comments are closed.