ಬೆಂಗಳೂರು : bomb threat message : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾಲೀಕತ್ವದ ಬೆಂಗಳೂರಿನ ರಾಜ ರಾಜೇಶ್ವರಿ ನಗರದಲ್ಲಿರುವ ನ್ಯಾಶನಲ್ ಹಿಲ್ ವ್ಯೂವ್ ಪಬ್ಲಿಕ್ ಶಾಲೆಗೆ ಬಾಂಬ್ ಬೆದರಿಕೆ ಸಂದೇಶವೊಂದು ಬಂದಿದೆ. ದುಷ್ಕರ್ಮಿಗಳು ಈ ಸಂಬಂಧ ನ್ಯಾಶನಲ್ ಹಿಲ್ ವ್ಯೂವ್ ಪಬ್ಲಿಕ್ ಶಾಲೆಯ ಇ ಮೇಲ್ ವಿಳಾಸಕ್ಕೆ ಪತ್ರ ಬರೆದಿದ್ದು ಬಾಂಬ್ ಇಟ್ಟಿರುವುದಾಗಿ ಹೇಳಿದ್ದಾರೆ. ಬಾಂಬ್ ಬೆದರಿಕೆ ಇ ಮೇಲ್ ಸ್ವೀಕರಿಸಿದ ಬಳಿಕ ಖಾಸಗಿ ಶಾಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ನಿನ್ನೆ ಸಂಜೆ ಸುಮಾರಿಗೆ ಈ ಬಾಂಬ್ ಬೆದರಿಕೆ ಇ ಮೇಲ್ನ್ನು ಕಳುಹಿಸಲಾಗಿದೆ. ಆದರೆ ನಿನ್ನೆ ಭಾನುವಾರ ಶಾಲೆಗೆ ರಜಾ ಇದ್ದಿದ್ದರಿಂದ ಶಾಲಾ ಸಿಬ್ಬಂದಿ ಇಂದು ಕರ್ತವ್ಯದ ಹಾಜರಾದ ಬಳಿಕ ಶಾಲೆಯ ಇ ಮೇಲ್ ಪರಿಶೀಲನೆ ಮಾಡುತ್ತಿದ್ದ ವೇಳೆ ಈ ಬೆದರಿಕೆ ಕರೆ ಬೆಳಕಿಗೆ ಬಂದಿದೆ. ಶಾಲೆಯ ಯುನಿಟ್ 3ಕ್ಕೆ ಈ ಇಮೇಲ್ ಬಂದಿದೆ. ಇದರಿಂದ ಗಾಬರಿಗೊಂಡ ಶಾಲಾ ಸಿಬ್ಬಂದಿ ಯುನಿಟ್ 1 ಹಾಗೂ ಯುನಿಟ್ 2ನಲ್ಲಿರುವ ಮಕ್ಕಳನ್ನು ಬೇರೆ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ.
ಕೂಡಲೇ ಶಾಲಾ ಸಿಬ್ಬಂದಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ರಾಜ ರಾಜೇಶ್ವರಿ ನಗರ ಠಾಣಾ ಪೊಲೀಸರು ಶ್ವಾನ ದಳ , ಬಾಂಬ್ ನಿಷ್ಕ್ರಿಯ ದಳಗಳ ಸಮೇತ ತನಿಖೆಯನ್ನು ನಡೆಸಿದ್ದಾರೆ. ಸ್ಥಳಕ್ಕೆ ಡಿ.ಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಶಿವಕುಮಾರ್ ಕೂಡ ಆಗಮಿಸಿದ ಘಟನೆ ಬಗ್ಗೆ ಇಂಚಿಂಚೂ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಇತ್ತ ಪೋಷಕರು ಕೂಡ ಶಾಲೆಯತ್ತ ಧಾವಿಸಿದ್ದು ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ನ್ಯಾಶನಲ್ ಹಿಲ್ ವ್ಯೂವ್ ಪಬ್ಲಿಕ್ ಶಾಲೆಗೆ ಬಾಂಬ್ ಬೆದರಿಕೆ ಕರೆ ಬಂದಿರುವ ಬಗ್ಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಕರೆ ಬಂದಿರುವ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಪೊಲೀಸರು ಅಲರ್ಟ್ ಆಗಿದ್ದು ಸೂಕ್ತ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಇದನ್ನು ಓದಿ : Sri Lankan PM Ranil Wickremesinghe : ಶ್ರೀಲಂಕಾ ಹಂಗಾಮಿ ಅಧ್ಯಕ್ಷರಾಗಿ ರನಿಲ್ ವಿಕ್ರಮ ಸಿಂಘೆ ನೇಮಕ
ಇದನ್ನೂ ಓದಿ ; woman kills husband : ಜೀನ್ಸ್ ಪ್ಯಾಂಟ್ ಧರಿಸಿದ್ದನ್ನು ವಿರೋಧಿಸಿದ್ದಕ್ಕೆ ಪತಿಯನ್ನೇ ಕೊಂದ ಪತ್ನಿ
A bomb threat message was sent to a private school owned by DK Shivakumar