ವರದಕ್ಷಿಣೆ ಕಿರುಕುಳ ಹಾಗೂ ಕಳ್ಳರು ಕದ್ದ ಬಂಗಾರ ಖರೀದಿ ಆರೋಪ: ಅಟ್ಟಿಕಾ ಗೋಲ್ಡ್‌ ಕಂಪನಿಯ ಮಾಲಿಕ ಬಾಬು ಅರೆಸ್ಟ್‌

ಬೆಂಗಳೂರು: (Attica babu arrested) ಹೆಂಡತಿಯ ಮೇಲೆ ಹಲ್ಲೆ ನಡೆಸಿದ ಆರೋಪ ಹಾಗೂ ಕಳ್ಳರು ಕದ್ದ ಬಂಗಾರವನ್ನು ಖರೀದಿ ಮಾಡುತ್ತಿರುವ ಆರೋಪದ ಮೇಲೆ ಅಟ್ಟಿಕಾ ಗೋಲ್ಡ್‌ ಕಂಪನಿಯ ಮಾಲೀಕ ಬಾಬು ಅವರನ್ನು ಆಂಧ್ರಪ್ರದೇಶದ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಅನಂತಪುರ ಬಳಿಯ ಯಲ್ಲೂರಿನ ಶೇಕ್‌ ಮಿನಾಜ್‌ ಅವರನ್ನು ಬಾಬು(Attica babu arrested) ಅವರು ಮದುವೆಯಾಗಿದ್ದರು. ಇದೀಗ ಮಿನಾಜ್‌ ಅವರು ಬಾಬು ಅವರು ಮದುವೆ ಆಗಿ ನನಗೆ ಮೋಸ ಮಾಡಿದ್ದಾರೆ. ಡಿಸೆಂಬರ್ 12ರಂದು ಯಲ್ಲೂರಿಗೆ ಬಂದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿ ಮನೆಯಲ್ಲಿ ಇದ್ದ ವಸ್ತುಗಳನ್ನು ದ್ವಂಸ ಮಾಡಿದ್ದಾರೆ. ಕೊಲೆಗೂ ಕೂಡ ಯತ್ನ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಆಂಧ್ರ ಪೊಲೀಸರು ಐಪಿಸಿ ಸೆಕ್ಷನ್‌ 448, 342, 307, 386, 427, 498A, 506 ಮತ್ತು ವರದಕ್ಷಿಣೆ ಕಿರುಕುಳ ಆರೋಪದಡಿ ಕೇಸ್ ದಾಖಲಿಸಿ ಬಾಬು ಅವರನ್ನು ಬಂಧಿಸಿದ್ದಾರೆ.

ಅಲ್ಲದೇ ಕಳ್ಳರು ಕದ್ದಂತಹ ಬಂಗಾರವನ್ನು ಖರೀದಿ ಮಾಡುತ್ತಿದ್ದರು ಎನ್ನುವ ಆರೋಪದ ಮೇಲೆ ಆಂಧ್ರ ಪೊಲೀಸರು ಬಾಬು ಅವರನ್ನು ಹಲವು ಬಾರಿ ಬಂಧಿಸಿದ್ದಾರೆ. ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಬೆಂಗಳೂರಿಗೆ ಆಗಮಿಸಿ ಬೆಂಗಳೂರಿನ ಹೈಗ್ರೌಂಡ್‌ ಠಾಣಾ ವ್ಯಾಪ್ತಿಯಲ್ಲಿರುವ ಬಾಬು ಅವರ ನಿವಾಸದಲ್ಲಿ ಸಿಸಿಬಿ ಪೊಲೀಸರ ಸಹಾಯದಿಂದ ಆಂಧ್ರ ಪ್ರದೇಶ ಪೊಲೀಸರು ಇಂದು ಬೆಳಿಗ್ಗೆ ಬಂಧಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : Health insurance: ಬಿಎಂಟಿಸಿ ನೌಕರರಿಗೆ ಸಿಹಿ ಸುದ್ದಿ: 5 ಲಕ್ಷ ರೂ. ಆರೋಗ್ಯ ವಿಮೆ ಘೋಷಣೆ

ಇದನ್ನೂ ಓದಿ : Namma clinic: ಆರೋಗ್ಯ ಕ್ರಾಂತಿಗೆ ಕರ್ನಾಟಕ ಸಜ್ಜು: ಒಂದೇ ದಿನ 114 ನಮ್ಮ ಕ್ಲಿನಿಕ್‌ ಆರಂಭ

ಇದನ್ನೂ ಓದಿ : Man trapped in Cave: 30 ಗಂಟೆಗಳ ಕಾಲ ಗುಹೆಯೊಳಗೆ ಸಿಲುಕಿದ್ದ ಯುವಕನ ರಕ್ಷಣೆ; 15 ಗಂಟೆಗಳ ರಕ್ಷಣಾ ಕಾರ್ಯ ಸಕ್ಸಸ್

Andhra Pradesh police arrested Babu, the owner of Attica Gold Company, in Bangalore on the charge of assaulting his wife and buying gold stolen by thieves.

Comments are closed.