Nokia C31 : ಬಜೆಟ್‌–ಫ್ರೆಂಡ್ಲಿ ಫೋನ್‌ ಪರಿಚಯಿಸಿದ ನೋಕಿಯಾ: C31 ಸ್ಮಾರ್ಟ್‌ಫೋನ್‌ನ ಬೆಲೆ ಮತ್ತು ವೈಶಿಷ್ಟ್ಯತೆಗಳು

ಸ್ಮಾರ್ಟ್‌ಫೋನ್‌ (Smartphone) ಗಳ ಲೋಕದಲ್ಲಿ ತನ್ನದೇ ಆದ ಸ್ಥಾನ ಗಳಿಸಿರುವ ನೋಕಿಯಾ (Nokia), ಈಗ ಭಾರತದಲ್ಲಿ ಬಜೆಟ್‌–ಫ್ರೆಂಡ್ಲಿ C ಸರಣಿಯ ಸ್ಮಾರ್ಟ್‌ಫೋನ್‌ C31 (Nokia C31) ಅನ್ನು ಪರಿಚಯಿಸಿದೆ. ಈ ಫೋನ್‌ ಎರಡು ರೂಪಾಂತರಗಳಲ್ಲಿ 3GB RAM ಮತ್ತು 32GB ಸಂಗ್ರಹಣೆ ಅಥವಾ 4GB RAM ಮತ್ತು 64GB ಸಂಗ್ರಹಣೆಯಲ್ಲಿ ದೊರೆಯಲಿದೆ. ಇದು ದೊಡ್ಡದಾದ 6.7 ಇಂಚಿನ HD+ ಡಿಸ್ಪ್ಲೇ, ಮೂರು ದಿನಗಳ ಬ್ಯಾಟರಿ ಲೈಫ್‌ ಮತ್ತು ಆಂಡ್ರಾಯ್ಡ್‌ 12 OS ನೊಂದಿಗೆ ಬರಲಿದೆ.

ನೋಕಿಯಾ C31 ವೈಶಿಷ್ಟ್ಯತೆಗಳು :

ನೋಕಿಯಾ C31 ಸ್ಮಾರ್ಟ್‌ಫೋನ್ 6.7-ಇಂಚಿನ HD+ ಡಿಸ್ಪ್ಲೇ ಮತ್ತು 1600×720 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರಲಿದೆ. ಮುಂಭಾಗದ ಕ್ಯಾಮೆರಾವು ಸೆಲ್ಫಿಗಾಗಿ 5 ಮೆಗಾಪಿಕ್ಸೆಲ್‌ದ್ದಾಗಿದೆ ಮತ್ತು ಹಿಂಭಾಗದ ಕ್ಯಾಮೆರಾವು ಟ್ರಿಪಲ್ ಲೆನ್ಸ್ ಸೆಟಪ್ ಅನ್ನು ಹೊಂದಿದೆ. ಇದರ ಮುಖ್ಯ ಕ್ಯಾಮೆರಾವು 13-ಮೆಗಾಪಿಕ್ಸೆಲ್‌ನದಾಗಿದೆ. ಈ ಫೋನ್‌ 2-ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಒಳಗೊಂಡಿದೆ.

ನೋಕಿಯಾ C31 ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಪ್ರೊಸೆಸರ್‌ನಿಂದ ಚಾಲಿತವಾಗಲಿದೆ. ಜೊತೆಗೆ 3GB ಅಥವಾ 4GB RAM ಅನ್ನು ಹೊಂದಿದೆ. ಇದರಲ್ಲಿ ದೊಡ್ಡದಾದ 5050 mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದು ಮೂರು ದಿನಗಳ ಬ್ಯಾಟರಿ ಲೈಫ್‌ ನೀಡಲಿದೆ.

‌ಇದು ಬಾಳಿಕೆಯ ಸ್ಮಾರ್ಟ್‌ಫೋನ್‌ ಆಗಿದೆ. ಏಕೆಂದರೆ IP52 ಇನ್‌ಗ್ರಿಸ್‌ ಪ್ರೊಟೆಕ್ಷನ್‌ನೊಂದಿಗೆ ಬರಲಿದೆ ಎಂದು ನೋಕಿಯಾ ಹೇಳಿಕೊಂಡಿದೆ. ಇದು ಹೆಚ್ಚುವರಿಯಾಗಿ, ಫೋನ್‌ನ ಹಿಂಭಾಗದಲ್ಲಿ ಅಳವಡಿಸಲಾಗಿರುವ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಬಯೋಮೆಟ್ರಿಕ್‌ಗಳಿಗಾಗಿ ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ :

ನೋಕಿಯಾ C31 ಸ್ಮಾರ್ಟ್‌ಫೋನ್‌ ಎರಡು ರೂಪಾಂತರಗಳಲ್ಲಿ ಬರಲಿದೆ. 3 GB RAM ಮತ್ತು 32 GB ಸಂಗ್ರಹಣೆಯ ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆಯು 9,900 ರೂ. ಗಳಾಗಿದೆ. ಇದರ ಇನ್ನೊಂದು ರೂಪಾಂತರವಾದ 4GB RAM ಮತ್ತು 64GB ಸ್ಮಾರ್ಟ್‌ಫೋನ್‌ಗೆ 10,999 ರೂ.ಗಳಾಗಿದೆ. ಈ ಸ್ಮಾರ್ಟ್‌ಫೋನ್‌ ಅನ್ನು ನೋಕಿಯಾದ ಅಧಿಕೃತ ವೆಬ್‌ಸೈಟ್‌ Nokia.com ಮತ್ತು ರಿಟೇಲ್‌ ಅಂಗಡಿಗಳಲ್ಲಿ ಖರೀದಿಸಬಹುದಾಗಿದೆ. ಇದು ಮೂರು ಬಣ್ಣಗಳ ಸಿಯಾನ್‌, ಚಾರ್ಕೋಲ್‌ ಮತ್ತು ಮಿಂಟ್‌ ಆಯ್ಕೆಗಳೊಂದಿಗೆ ಬರಲಿದೆ.

ಇದನ್ನೂ ಓದಿ : Realme 10 Pro Plus 5G ಇಂದಿನಿಂದ ಭಾರತದಲ್ಲಿ ಮಾರಾಟ ಪ್ರಾರಂಭ; ಬೆಲೆ, ಲಭ್ಯತೆ ಮತ್ತು ವೈಶಿಷ್ಟ್ಯಗಳು

ಇದನ್ನೂ ಓದಿ : Twitter Accounts : ಖಾತೆಗಳ ಪರಿಶೀಲನೆಗಾಗಿ 3 ಬಣ್ಣಗಳನ್ನು ಪ್ರಾರಂಭಿಸಿದ ಎಲಾನ್‌ ಮಸ್ಕ್‌: ಇನ್ನು ಈ ಬಣ್ಣಗಳಲ್ಲಿ ಖಾತೆಗಳನ್ನು ಪರಿಶೀಲಿಸಲಿದೆ ಟ್ವಿಟರ್‌..

(Nokia C31 Nokia launches budget-friendly phones in India. Know the price and specifications)

Comments are closed.