5 year boy died: ನೀರಿನ ಸಂಪ್‌ ಗೆ ಬಿದ್ದು ಐದು ವರ್ಷದ ಬಾಲಕ ಸಾವು

ವಿಜಯಪುರ: (5 year boy died) ಇತ್ತೀಚೆಗೆ ದಾವಣಗೆರೆ ಜಿಲ್ಲೆಯಲ್ಲಿ ನೀರು ತುಂಬಿದ ಬಕೆಟ್‌ ಗೆ ಬಿದ್ದು ಹತ್ತು ತಿಂಗಳ ಮಗು ಸಾವನ್ನಪ್ಪಿರುವ ಬೆನ್ನಲ್ಲೆ ಇನ್ನೊಂದು ಘಟನೆ ನಡೆದಿದ್ದು, ವಿಜಯಪುರದ ಮುದ್ದೇಬಿಹಾಳದ ಹೂಡ್ಕೋ ಬಡಾವಣೆಯಲ್ಲಿ ಇಂತಹದೇ ಒಂದು ಘಟನೆ ನಡೆದಿದೆ. ಐದು ವರ್ಷದ ಬಾಲಕನೋರ್ವ ನೀರಿನ ಸಂಪ್‌ ಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಶ್ರೇಯಸ್‌ ಎನ್ನುವಾತ ಮೃತ ಬಾಲಕ.

ಬಾಲಕ ಆಟವಾಡುತ್ತಿದ್ದಾಗ ಆಯಾ ತಪ್ಪಿ ನೀರಿನ ಸಂಪ್‌ ಗೆ ಬಿದ್ದಿದ್ದು, ವಿಷಯ ತಿಳಿದು ಕೂಡಲೆ ಅಗ್ನಿಶಾಮಕದ ಸಿಬ್ಬಂದಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿ ಬಾಲಕನನ್ನು ಹೊರತೆಗೆದಿದ್ದಾರೆ. ಸಂಪ್‌ ನಿಂದ ಹೊರತೆಗೆಯುವ ಮೊದಲೇ ಬಾಲಕ ಮೃತ(5 year boy died)ಪಟ್ಟಿದ್ದಾನೆ.

ಬಾಲಕನ ಮೃತದೇಹ ಹೊರತೆಗೆಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಮುದ್ದೆಬಿಹಾಳ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ಹೆತ್ತವರು ಪುಟ್ಟ ಮಕ್ಕಳ ಚಲನವಲನಗಳ ಮೇಲೆ ನಿಗಾವಹಿಸದೇ ನಿರ್ಲಕ್ಷ್ಯ ತೋರುತ್ತಿರುವುದಕ್ಕೆ ಈ ರೀತಿಯ ಘಟನೆಗಳು ಮರುಕಳಿಸುತ್ತಿವೆ. ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿದ್ದರು ಕೂಡ ಪೋಷಕರು ಎಚ್ಚೆತ್ತುಕೊಳ್ಳದೆ ಇರುವುದು ದುರಂತವೇ ಸರಿ.

ಇದನ್ನೂ ಓದಿ : ವರದಕ್ಷಿಣೆ ಕಿರುಕುಳ ಹಾಗೂ ಕಳ್ಳರು ಕದ್ದ ಬಂಗಾರ ಖರೀದಿ ಆರೋಪ: ಅಟ್ಟಿಕಾ ಗೋಲ್ಡ್‌ ಕಂಪನಿಯ ಮಾಲಿಕ ಬಾಬು ಅರೆಸ್ಟ್‌

ಇದನ್ನೂ ಓದಿ : Man trapped in Cave: 30 ಗಂಟೆಗಳ ಕಾಲ ಗುಹೆಯೊಳಗೆ ಸಿಲುಕಿದ್ದ ಯುವಕನ ರಕ್ಷಣೆ; 15 ಗಂಟೆಗಳ ರಕ್ಷಣಾ ಕಾರ್ಯ ಸಕ್ಸಸ್

ಇದನ್ನೂ ಓದಿ : Veena Kapoor: ಖ್ಯಾತ ಹಿರಿಯ ನಟಿ ವೀಣಾ ಕಪೂರ್ ಸತ್ತಿಲ್ಲ; ಕೇಸ್ ಗೆ ಹೊಸ ಟ್ವಿಸ್ಟ್

ಇದನ್ನೂ ಓದಿ : ಹಾಸ್ಟೆಲ್‌ ಶೌಚಾಲಯದಲ್ಲಿ ಕತ್ತು ಕೊಯ್ದುಕೊಂಡು ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ

(5 year boy died) Another incident took place recently in Davangere district after a ten-month-old child died after falling into a bucket full of water. A five-year-old boy fell into a water sump and died. Shreyas is the dead boy.

Comments are closed.