Auto Traffic Ban: ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಡಿ.29 ರಂದು ಆಟೋ ಚಾಲಕರಿಂದ ಮುಷ್ಕರ

ಬೆಂಗಳೂರು: (Auto Traffic Ban) ರಾಜಧಾನಿ ಬೆಂಗಳೂರಿನಲ್ಲಿ ವಿವಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಟೋ ಚಾಲಕರು ರಾಜ್ಯ ಸಾರಿಗೆ ಇಲಾಖೆ ವಿರುದ್ದ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಡಿ.29 ರಂದು ಬೆಂಗಳೂರಿನಲ್ಲಿ ಆಟೋ ಸಂಚಾರ ಬಂದ್‌ ಆಗಲಿದೆ.

ರ್ಯಾಪಿಡೋ ಬೈಕ್ ಟ್ಯಾಕ್ಸಿ ಆ್ಯಪ್ ಬ್ಯಾನ್, ಬೌನ್ಸ್ ಎಲೆಕ್ಟ್ರಿಕ್ ಬೈಕ್​ಗೆ ನೀಡಿರುವ ಅನುಮತಿ ವಾಪಸ್ ಪಡೆಯುವಂತೆ ಒತ್ತಾಯಿಸಿ ಆಟೋ ಚಾಲಕರು ರಾಜ್ಯ ಸಾರಿಗೆ ಇಲಾಖೆಯ ವಿರುದ್ಧ ಸಿಡಿದೆದ್ದಿದ್ದಾರೆ. ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್​ನಿಂದ ಬೃಹತ್ ಆಟೋ ರ‍್ಯಾಲಿ ಮೂಲಕ ವಿಧಾನಸೌಧಕ್ಕೆ ತೆರಳಿ ಮುತ್ತಿಗೆ ಹಾಕಲು ನಿರ್ಧರಿಸಿದ್ದು, ಈ ಆಟೋ ಮುಷ್ಕರಕ್ಕೆ ಈಗಾಗಲೇ 21 ಆಟೋ ಸಂಘಟನೆಗಳು ಸಾಥ್ ನೀಡಿವೆ. ಅಲ್ಲದೆ ಬೆಂಗಳೂರಿನ ಎರಡು ಲಕ್ಷಕ್ಕೂ ಹೆಚ್ಚಿನ ಆಟೋ ಚಾಲಕರು ಮುಷ್ಕರಕ್ಕೆ ಈಗಾಗಲೇ ಬೆಂಬಲ ನೀಡಿದ್ದು, ಡಿ. 29 ರಂದು ಬೆಂಗಳುರಿನಲ್ಲಿ ಆಟೋ ಸಂಚಾರ ಸಂಪೂರ್ಣವಾಗಿ ಬಂದ್‌ (Auto Traffic Ban) ಆಗಲಿದೆ.

ಆಟೋ ಚಾಲಕರ ಪ್ರಮುಖ ಬೇಡಿಕೆಗಳು ಇಂತಿವೆ;

*ರ್ಯಾಪಿಡೋ ಬೈಕ್‌ ಟ್ಯಾಕ್ಸಿ ಬ್ಯಾನ್‌ ಮಾಡಬೇಕು.
ದಿನೇ ದಿನೇ ರ್ಯಾಪಿಡೋ ಬೈಕ್‌ ಟ್ಯಾಕ್ಸಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಇದರಿಂದಾಗಿ ಆಟೋ ಚಾಲಕರು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ. ಯಾವುದೇ ಅನುಮತಿ ಇಲ್ಲದೇ ಇದ್ದರೂ ಕೂಡ ರ್ಯಾಪಿಡೋ ವಾಹನಗಳು ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡುತ್ತಿವೆ.

*ಬೌನ್ಸ್‌ ಎಲೆಕ್ಟ್ರಿಕ್‌ ಬೈಕ್‌ ಗೆ ಸಾರಿಗೆ ಇಲಾಖೆ ನೀಡಿರುವ ಅನುಮತಿಯನ್ನು ವಾಪಾಸ್‌ ಪಡೆಯಬೇಕು.
ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರ ಎಲೆಕ್ಟ್ರಿಕ್ ಬೈಕ್​ಗಳಿಗೆ ಅನುಮತಿ ನೀಡಿದೆ. ಮೊದಲ ಹಂತದಲ್ಲಿ 100 ಇ- ಬೈಕ್​ಗಳನ್ನ ರಸ್ತೆಗಿಳಿಸಲು ನಿರ್ಧರಿಸಿದ್ದ ಬೌನ್ಸ್ ಕಂಪನಿ, ಈಗ ಹಂತ ಹಂತವಾಗಿ 1000 ಇ- ಬೈಕ್​ಗಳನ್ನ ರಸ್ತೆಗಿಳಿಸಲು ನಿರ್ಧಾರ ತೆಗೆದುಕೊಂಡಿದೆ. ಕೊರೋನಾ ಸಮಯದಲ್ಲಿ ಸ್ಥಗಿತಗೊಂಡಿದ್ದ ಸೇವೆಯನ್ನು ಪುನಃ ಪ್ರಾರಂಭಿಸಲು ಬೌನ್ಸ್‌ ಕಂಪನಿ ಅನುಮತಿ ಕೇಳಿ ಅರ್ಜಿ ಸಲ್ಲಿಸಿದೆ. ಇದರಿಂದಾಗಿ ಆಟೋ ಚಾಲಕರ ದುಡಿಮೆಗೆ ದೊಡ್ಡ ಹೊಡೆತ ಬಿದ್ದಂತಾಗಿದೆ.

ಇದನ್ನೂ ಓದಿ : Bangalore Suicide case: ಮಕ್ಕಳಿಗೆ ಮದುವೆ ಆಗಿಲ್ಲ ಎಂಬ ಚಿಂತೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಈ ಎಲ್ಲಾ ಕಾರಣಗಳಿಂದ ಆಟೋ ಚಾಲಕರು ಡಿ.29 ರಂದು ಮುಷ್ಕರ ನಡೆಸಲು ಸಿದ್ದರಾಗಿದ್ದು, ಈಗಾಗಲೇ ಎರಡು ಲಕ್ಷದ ಹತ್ತು ಸಾವಿರ ಆಟೋ ಚಾಲಕರ ಬೆಂಬಲ ಸಿಕ್ಕಿದೆ.

(Auto Traffic Ban) Auto drivers have called for a strike against the state transport department demanding the fulfillment of various demands in the capital Bangalore. In this background, auto traffic will be banned in Bangalore on December 29.

Comments are closed.