IPL Players Auction : ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಗೇಲ್, ಎಬಿಡಿ, ರೈನಾ, ಉತ್ತಪ್ಪ!

ಬೆಂಗಳೂರು: (IPL Players Auction) ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ (Chris Gayle), ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಸೂಪರ್ ಮ್ಯಾನ್ ಎಬಿ ಡಿವಿಲಿಯರ್ಸ್ (AB de Villiers), ಭಾರತದ ಪವರ್ ಹಿಟ್ಟರ್ ಸುರೇಶ್ ರೈನಾ (Suresh Raina), 2007ರ ಟಿ20 ವಿಶ್ವಕಪ್ ಹೀರೊ ಕೊಡಗಿನ ವೀರ ರಾಬಿನ್ ಉತ್ತಪ್ಪ (Robin Uthappa). ಇವು ಐಪಿಎಲ್ ಅಖಾಡದಲ್ಲಿ ಧೂಳೆಬ್ಬಿಸಿದ್ದ ನಾಲ್ಕು ಹೆಸರುಗಳು. ಗೇಲ್, ಎಬಿಡಿ, ರೈನಾ, ಉತ್ತಪ್ಪ., ಈ ನಾಲ್ಕು ಮಂದಿಯೂ ಈಗಾಗ್ಲೇ ಐಪಿಎಲ್’ನಿಂದ ನಿವೃತ್ತಿಯಾಗಿದ್ದಾರೆ. ಆದರೂ ಡಿಸೆಂಬರ್ 23ರಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿರುವ ಐಪಿಎಲ್-2023 ಆಟಗಾರರ ಹರಾಜಿನಲ್ಲಿ ಈ ನಾಲ್ವರು ಕಾಣಿಸಿಕೊಳ್ಳಲಿದ್ದಾರೆ.

ಕ್ರಿಸ್ ಗೇಲ್ ಅವರ ಐಪಿಎಲ್ ಆಟದ ಬಗ್ಗೆ ನಿಮ್ಗೆ ಗೊತ್ತೇ ಇದೆ. ಐಪಿಎಲ್’ನಲ್ಲಿ ಅತೀ ಹೆಚ್ಚು 6 ಶತಕಗಳನ್ನು ಬಾರಿಸಿರುವ ವೆಸ್ಟ್ ಇಂಡೀಸ್’ನ ದೈತ್ಯ ಬ್ಯಾಟ್ಸ್’ಮನ್. 2009ರಿಂದ 2011ರವರೆಗೆ ಐಪಿಎಲ್’ನಲ್ಲಿ ಒಟ್ಟು 142 ಪಂದ್ಯಗಳನ್ನಾಡಿದ್ದ ಕ್ರಿಸ್ ಗೇಲ್ 39.72ರ ಸರಾಸರಿಯಲ್ಲಿ 148.96ರ ಅಮೋಘ ಸ್ಟ್ರೈಕ್’ರೇಟ್’ನೊಂದಿಗೆ 6 ಶತಕ ಹಾಗೂ 31 ಅರ್ಧಶತಕಗಳ ಸಹಿತ 4965 ರನ್ ಗಳಿಸಿದ್ದಾರೆ. ಇನ್ನು ಮಿಸ್ಟರ್ 360 ಖ್ಯಾತಿಯ ಎಬಿ ಡಿ ವಿಲಿಯರ್ಸ್. ಐಪಿಎಲ್ ಅಖಾಡದ ಮತ್ತೊಬ್ಬ ರನ್ ಬೇಟೆಗಾರ. 2008ರಿಂದ 2021ರವರೆಗೆ ಐಪಿಎಲ್’ನಲ್ಲಿ ಆಡಿದ 184 ಪಂದ್ಯಗಳಿಂದ 39.71ರ ಸರಾಸರಿಯಲ್ಲಿ 151.69 ಅಮೋಘ ಸ್ಟ್ರೈಕ್’ರೇಟ್’ನಲ್ಲಿ 3 ಶತಕ ಹಾಗೂ 40 ಅರ್ಧಶತಕಗಳ ಸಹಿತ ಎಬಿಡಿ 5162 ರನ್ ಕಲೆ ಹಾಕಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ನಾಲ್ಕು ಬಾರಿ ಐಪಿಎಲ್ ಚಾಂಪಿಯನ್ ಆಗಲು ಕಾರಣರಾಗಿದ್ದ ಸುರೇಶ್ ರೈನಾ, 2008ರಿಂದ 2021ರವರೆಗೆ ಐಪಿಎಲ್’ನಲ್ಲಿ ಆಡಿದ 205 ಪಂದ್ಯಗಳಿಂದ 32.52ರ ಸರಾಸರಿಯಲ್ಲಿ 136.76ರ ಸ್ಟ್ರೈಕ್’ರೇಟ್’ನೊಂದಿಗೆ 1 ಶತಕ ಹಾಗೂ 39 ಅರ್ಧಶತಕಗಳ ಸಹಿತ 5528 ರನ್ ಗಳಿಸಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ 2014ರಲ್ಲಿ ಚಾಂಪಿಯನ್ ಪಟ್ಟ ಗೆದ್ದುಕೊಟ್ಟಿದ್ದ ರಾಬಿನ್ ಉತ್ತಪ್ಪ, 2008ರಿಂದ ಐಪಿಎಲ್’ನಲ್ಲಿ ಆಡಿದ್ದು 2022ರವರೆಗೆ ಆಡಿದ 205 ಪಂದ್ಯಗಳಿಂದ 27.51ರ ಸರಾಸರಿಯಲ್ಲಿ 130.35ರ ಸ್ಟ್ರೈಕ್’ರೇಟ್’ನೊಂದಿಗೆ 27 ಅರ್ಧಶತಕಗಳ ಸಹಿತ 5528 ರನ್ ಗಳಿಸಿದ್ದಾರೆ.

ಇದನ್ನೂ ಓದಿ : FIFA World Cup Final : ಸ್ಪೆಷಲ್ ಸ್ಕ್ರೀನ್‌ನಲ್ಲಿ ಫಿಫಾ ವಿಶ್ವಕಪ್ ಫೈನಲ್ ಮ್ಯಾಚ್ ವೀಕ್ಷಿಸಿದ ಟೀಮ್ ಇಂಡಿಯಾ ಆಟಗಾರರು

ಇದನ್ನೂ ಓದಿ : Overseas Players in IPL Auction 2023: ಸ್ಯಾಮ್ ಕರನ್ to ಸಿಕಂದರ್ ರಾಜಾ: ಐಪಿಎಲ್ ಹರಾಜು ಪಟ್ಟಿಯಲ್ಲಿರುವ ವಿದೇಶಿ ಆಟಗಾರರ ಕಂಪ್ಲೀಟ್ ಮಾಹಿತಿ

ಇದನ್ನೂ ಓದಿ : BCCI big meeting tomorrow : ನಾಳೆ ಬಿಸಿಸಿಐ ಬಿಗ್ ಮೀಟಿಂಗ್, ಟಿ20 ತಂಡಕ್ಕೆ ಹೊಸ ಕ್ಯಾಪ್ಟನ್ ಕೋಚ್ ಬಗ್ಗೆ ನಾಳೆಯೇ ನಿರ್ಧಾರ

ಐಪಿಎಲ್’ನಿಂದ ನಿವೃತ್ತಿಯಾಗಿರುವ ಈ ನಾಲ್ವರೂ ಆಟಗಾರರು ಡಿಸೆಂಬರ್ 23ರಂದು ನಡೆಯುವ ಆಟಗಾರರ ಹರಾಜಿನಲ್ಲಿ ಜಿಯೋ ಸಿನಿಮಾ ವಾಹಿನಿಯಲ್ಲಿ ಪ್ಯಾನಲಿಸ್ಟ್’ಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಐಪಿಎಲ್ ಹರಾಜು ಪ್ರಕ್ರಿಯೆ ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೋ ಸಿನಿಮಾ ವಾಹಿನಿಯಲ್ಲಿ ನೇರಪ್ರಸಾರಗೊಳ್ಳಲಿದ್ದು, ಐಪಿಎಲ್’ನ ಮಾಜಿ ಸ್ಟಾರ್ ಆಟಗಾರರನ್ನು ತನ್ನ ಪ್ಯಾನೆಲ್’ಗೆ ಸೇರಿಸಿಕೊಳ್ಳುವಲ್ಲಿ ಜಿಯೋ ಸಿನಿಮಾ ವಾಹಿನಿ ಯಶಸ್ವಿಯಾಗಿದೆ.

IPL Players Auction : Gayle, ABD, Raina, Uthappa in IPL Auction

Comments are closed.