ಭಾನುವಾರ, ಏಪ್ರಿಲ್ 27, 2025
HomekarnatakaNamma metro : ಮೆಟ್ರೋದಿಂದ ಕಡಿಮೆಯಾಯ್ತು ಬೆಂಗಳೂರು ನಗರದ ವಾಯುಮಾಲಿನ್ಯ

Namma metro : ಮೆಟ್ರೋದಿಂದ ಕಡಿಮೆಯಾಯ್ತು ಬೆಂಗಳೂರು ನಗರದ ವಾಯುಮಾಲಿನ್ಯ

- Advertisement -

ಬೆಂಗಳೂರು : ಟ್ರಾಫಿಕ್ ಗೆ ಹೆಸರಾದ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆರಂಭವಾದ ನಮ್ಮ ಮೆಟ್ರೋ (Namma metro) ಈಗ ರಾಜಧಾನಿಯ ಮಂದಿಯ ಜೀವನಾಡಿಯಾಗಿದೆ. ಈ ಮಧ್ಯೆ ಈಗ ಮೆಟ್ರೋ (Bangalore City air pollution reduced by After Namma metro) ನಗರದ ಮಾಲಿನ್ಯ (air pollution) ಪ್ರಮಾಣವನ್ನು ಕಡಿಮೆ ಮಾಡಲು ಕೂಡ ಮೆಟ್ರೋ ನೆರವಾಗಿದೆ ಎಂಬ ಮಹತ್ವದ ಅಂಶ ಅಧ್ಯಯನ ದಿಂದ ದೃಡಪಟ್ಟಿದೆ.

ಬೆಂಗಳೂರು ವಿಶ್ವ ವಿದ್ಯಾಲಯದ ಪರಿಸರ ಅಧ್ಯಯನ ವಿಭಾಗವೂ 2017 ಮತ್ತು 2021 ರ ಅವಧಿಯಲ್ಲಿ ಎರಡನೇ ಹಂತದ ಮೆಟ್ರೋ ಸಂಚರಿಸುವ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟವನ್ನು ಅಧ್ಯಯನ ನಡೆಸಿದೆ. ಇದರಿಂದಾಗಿ ಮೆಟ್ರೋ ಪರಿಸರದ ಮಾಲಿನ್ಯ ಪ್ರಭಾವವನ್ನು ಕಡಿಮೆ ಮಾಡಲು ನೆರವಾಗಿದೆ ಎಂಬ ಅಂಶ ಬಹಿರಂಗಗೊಂಡಿದೆ. ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನವಿಭಾಗದ ಪ್ರಾಧ್ಯಾಪಕಿ ಮತ್ತು ಪ್ರಧಾನ ತನಿಖಾಧಿಕಾರಿ ಡಾ.ನಂದಿನಿ ಎನ್ ಅವರ ಮಾರ್ಗದರ್ಶನದಲ್ಲಿ ಅಧ್ಯಯನ ನಡೆದಿದೆ. ಈ ಅಧ್ಯಯನ ದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವಲ್ಲಿ ಮೆಟ್ರೋ (Namma metro) ಕೊಡುಗೆ ನೀಡಿದೆ ಎಂಬ ಅಂಶ ಸಾಬೀತಾಗಿದೆ.

ಮೈಸೂರು ರಸ್ತೆ ಟರ್ಮಿನಲ್‌ನಿಂದ ಕೆಂಗೇರಿ, ಪುಟ್ಟೇನಹಳ್ಳಿ ಕ್ರಾಸ್ ನಿಂದ ಅಂಜನಾಪುರ ಟೌನ್ ಶಿಪ್, ಗೊಟ್ಟಿಗೆರೆಯಿಂದ ನಾಗವಾರ, ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರ, ಕೃಷ್ಣರಾಜಪುರಂ, ಬೈಯ್ಯಪ್ಪನಹಳ್ಳಿ ವೈಟ್ ಫಿಲ್ಡ್ ಮತ್ತು ಹೆಸರಘಟ್ಟ ಕ್ರಾಸ್ ನಿಂದ ಬಿಐಇಸಿಯ ಗಾಳಿಯ ಗುಣಮಟ್ಟ ಅಳೆಯಲಾಗಿದೆ. ಕೇಂದ್ರ ವಾಯುಮಾಲಿನ್ಯ ನಿಯಂತ್ರಣ ಮಂಡಳಿಯು ವಸತಿ, ಗ್ರಾಮೀಣ ಹಾಗೂ ಇತರ ಪ್ರದೇಶಗಳಿಗೆ ಸೂಚಿಸಿರುವ 60qg/m3 ಮಿತಿಯೊಳಗಿನ ಕ್ವಾಲಿಟಿ ಗಾಳಿಯೂ ಅಧ್ಯಯನ ನಡೆಸಿರುವ ಪ್ರದೇಶದಲ್ಲಿ ಪತ್ತೆಯಾಗಿದೆ.

2017 ರಲ್ಲಿ‌ ಬೆಂಗಳೂರಿನಲ್ಲಿ 100qg/m3 ನಿಗದಿತ ಮಿತಿಗಳನ್ನು ಮೀರಿದೆ ಎಂದು ವರದಿಯಾಗಿತ್ತು. ಅದರ ಬಳಿಕ ಮೆಟ್ರೋ ಸಕ್ರಿಯವಾಗಿ ಆರಂಭಗೊಂಡಿದ್ದು, 2018 ರಿಂದ ಕ್ರಮೇಣ ವಾಯುಮಾಲಿನ್ಯದ ಪ್ರಮಾಣ ಕುಗ್ಗಿದೆ. Cpbc ಬಿಡುಗಡೆಗೊಳಿಸಿರುವ ವರದಿಯಂತೇ, 2018 ರಿಂದ 2021 ರವರೆಗೆ ಎಲ್ಲಾ ಮಾನಿಟರ್ ಕೇಂದ್ರಗಳಲ್ಲಿ pm10 ಸಾಂದ್ರತೆಯು 100qp/, m3.ಮಿತಿಯೊಳಗೆ ಇದೆ ಎಂದು ಗಾಳಿಯ ಗುಣಮಟ್ಟದ ಮೇಲ್ವಿಚಾರಣಾ ದಾಖಲೆಗಳು ಸೂಚಿಸಿದೆ.

ಇನ್ನು ಜನರನ್ನು ಸ್ವಂತ ವಾಹನಕ್ಕಿಂತ ಸಾಮೂಹಿಕ ವಾಹನ ಬಳಸಲು ಉತ್ತೇಜಿಸುವಂತೆ ಮಾಡಲು ಆರಂಭಗೊಂಡ ಮೆಟ್ರೋ ಈಗ ಬೆಂಗಳೂರಿನ ಪೂರಕಸಾರಿಗೆ ವಿಧಾನವೆಂದು ಮಾನ್ಯತೆ ಪಡೆದಿದೆ. ದಾಖಲೆಗಳ ಪ್ರಕಾರ ಮೆಟ್ರೋ ರೈಲು ಸಂಚಾರ (Namma metro ) ಹಾಗೂ ಜನರ ಓಡಾಟದಿಂದ ವರ್ಷಕ್ಕೆ ಒಟ್ಟು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯ ಪ್ರಮಾಣ ಕಡಿತವಾಗುತ್ತ ಬಂದಿದೆ ಎಂಬ ಸಂಗತಿ ಬಯಲಾಗಿದೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಇನ್ನೂ ಲಸಿಕೆ ಪಡೆದಿಲ್ಲ ಲಕ್ಷಾಂತರ ಜನರು: ಲಸಿಕೆ ಪಡೆಯದವರ ಪತ್ತೆಗೆ ಪೊಲೀಸರ ಮೊರೆ ಹೋದ ಬಿಬಿಎಂಪಿ

ಇದನ್ನೂ ಓದಿ : ಬಿಎಂಟಿಸಿ ಬಸ್ ನಲ್ಲಿ ಬೆಂಕಿ ಪ್ರಕರಣ : ತನಿಖೆಯಲ್ಲಿ ಬಯಲಾಯ್ತು ಅಸಲಿ ಕಾರಣ

(Bangalore City air pollution reduced by After Namma metro)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular