Building Collapse : ಬೆಂಗಳೂರಿನ ಲಕ್ಕಸಂದ್ರದಲ್ಲಿ ದುರಂತ : 3 ಅಂತಸ್ತಿನ ಕಟ್ಟಡ ಕುಸಿತ

ಬೆಂಗಳೂರು : ಸರಣಿ ಅಗ್ನಿ ಅವಘಡದ ಬೆನ್ನಲ್ಲೇ ಸಿಲಿಕಾನ್‌ ಸಿಟಿ ಬೆಂಗಳೂರಲ್ಲೀಗ ಮತ್ತೊಂದು ದುರಂತ ಸಂಭವಿಸಿದೆ. ಮೂರು ಅಂತಸ್ಥಿನ ಕಟ್ಟಡವೊಂದು ಕುಸಿತವಾಗಿದೆ. ಘಟನೆ ನಡೆಯುತ್ತಲ್ಲೇ ಎಚ್ಚೆತ್ತುಕೊಂಡಿದ್ದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಚರಣೆಯನ್ನು ನಡೆಸಿ ಇಡೀ ಕಟ್ಟಡವನ್ನೇ ನೆಲಸಮ ಮಾಡುವ ಮೂಲಕ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ.

ಸಿಲಿಕಾನ್‌ ಸಿಟಿ ಬೆಂಗಳೂರಿನ ಲಕ್ಕಸಂದ್ರದ 7ನೇ ಮುಖ್ಯರಸ್ತೆ, 14ನೇ ಕ್ರಾಸ್​ನಲ್ಲಿನ ಈ ಘಟನೆ ನಡೆದಿದೆ. ಸುರೇಶ್‌ ಎಂಬವರಿಗೆ ಸೇರಿದ ಹಳೆಯ ಕಟ್ಟದಲ್ಲಿ 70 ಕ್ಕೂ ಅಧಿಕ ಮೆಟ್ರೋ ಕಾರ್ಮಿಕರು ವಾಸವಾಗಿದ್ದರು ಎನ್ನಲಾಗುತ್ತಿದೆ. ಆದರೆ ಘಟನೆ ನಡೆಯುವ ಸಂದರ್ಭದಲ್ಲಿ ನಾಲ್ಕೈದು ಜನರು ಮಾತ್ರವೇ ಕಟ್ಟಡದಲ್ಲಿದ್ದರು, ದುರಂತ ಸಂಭವಿಸುತ್ತಲೇ ಹೊರಗೆ ಓಡಿ ಬಂದಿದ್ದರಿಂದಾಗಿ ಭಾರೀ ದುರಂತವೊಂದು ತಪ್ಪಿದಂತಾಗಿದೆ. ಇನ್ನು ಕಳೆದ ಎರಡು ದಿನಗಳಿಂದಲೂ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಳ್ಳುತ್ತಲೇ ಇತ್ತು. ಹೀಗಾಗಿ ಕಟ್ಟಡ ಕುಸಿತದ ಭೀತಿಯುಂಟಾಗಿತ್ತು. ಕೂಡಲೇ ಅಗ್ನಿಶಾಮಕ ಹಾಗೂ ಪೊಲೀಸರಿಗೆ ದೂರು ನೀಡಿದ್ದರು.

ಇನ್ನು ಹಳೆಯ ಕಟ್ಟಡವಾಗಿದ್ದರಿಂದಾಗಿ ವಾಸಕ್ಕೆ ಯೋಗ್ಯವಾಗಿರಲಿಲ್ಲ. ಒಂದೊಮ್ಮೆ ರಾತ್ರಿಯ ಹೊತ್ತಲ್ಲಿ ಈ ದುರ್ಘಟನೆ ಸಂಭವಿಸಿದ್ರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಯಿತ್ತು. ಇನ್ನು ಘಟನೆಯಿಂದಾಗಿ ಅಕ್ಕ ಪಕ್ಕದ ಮನೆಗಳಿಗೂ ಹಾನಿಯಾಗಿದೆ. ಕಟ್ಟಡದ ಕುಸಿಯುತ್ತಲೇ ಪಕ್ಕದ ಮನೆಯವರೆಲ್ಲರೂ ಹೊರಗಡೆ ಓಡಿ ಬಂದಿದ್ದಾರೆ ಎನ್ನಲಾಗುತ್ತಿದೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್‌ ಸಿಬ್ಬಂದಿಗಳು ಕಾರ್ಯಾಚರಣೆಯನ್ನು ನಡೆಸಿದ್ದಾರೆ.

ಸಿಲಿಕಾನ್‌ ಸಿಟಿಯಲ್ಲಿ ಸಾಕಷ್ಟು ಹಳೆಯ ಕಟ್ಟಡಗಳಿದ್ದು, ಬಾಡಿಗೆ ಆಸೆಯಿಂದಾಗಿ ಮಾಲೀಕರು ಹಳೆಯ ಕಟ್ಟಡದಲ್ಲಿಯೇ ಜನರಿಗೆ ವಾಸಿಸೋದಕ್ಕೆ ಅವಕಾಶ ನೀಡುತ್ತಿದ್ದಾರೆ. ಈ ಕುರಿತು ಬಿಬಿಎಂಪಿ ಎಚ್ಚೆತ್ತೆಕೊಳ್ಳದೇ ಇದ್ದಲ್ಲಿ ಅಪಾಯ ಎದುರಾಗೋದು ಗ್ಯಾರಂಟಿ.

ಇದನ್ನೂ ಓದಿ : ಮನೆ ಮುಂದೆ ನಿಲ್ಲಿಸಿದ್ದ14 ಕಾರುಗಳ ಗಾಜು ಒಡೆದು ದುಷ್ಕೃತ್ಯ : 5 ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ಅರೆಸ್ಟ್‌

ಇದನ್ನೂ ಓದಿ : ಸವಾರರೇ ಕುಡಿದು ರಸ್ತೆ ಇಳಿಯೋ ಮುನ್ನ ಹುಷಾರ್‌ ! ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆಗೆ ಸಜ್ಜಾದ ಪೊಲೀಸರು

(3 floor building collapses Lakkasandra in Bengaluru )

Comments are closed.