ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕೃಷಿ ಕಾಯ್ದೆ ಜಾರಿ : ಹೋರಾಟಗಾರರಿಗೆ ಮೂಲ ಉದ್ದೇಶ ಅರ್ಥವಾಗಿದೆಯೇ ?

ಬೆಂಗಳೂರು: ಕೃಷಿ ಕಾಯ್ದೆ ಜಾರಿಗೆ ತಂದ ದಿನದಿಂದಲೂ ಹೋರಾಟಗಳು ನಡೆಯುತ್ತಿವೆ. ಈ ಕೃಷಿ ಕಾಯ್ದೆಯನ್ನು ಮಧ್ಯವರ್ತಿಗಳಿಂದ ರೈತರ ಉತ್ಪನ್ನಕ್ಕೆ ಸರಿಯಾದ ಬೆಲೆ ಸಿಗುತ್ತಿರಲಿಲ್ಲಾ ಇದನ್ನು ಸರಿ ಪಡಿಸಲು ಈ ಕೃಷಿ ಕಾಯ್ದೆಯನ್ನು ಜಾರಿಗೆ ತರಲಾಯಿತು. ಆದರೆ ಇದನ್ನು ಸರಿಯಾಗಿ ಅರಿಯದೇ ಹೋರಾಟ ನಡೆಯುತ್ತಿವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಯಾದಗಿರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ ಅವರು, ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಭಾರತ್ ಬಂದ್ ಕುರಿತು ಪ್ರತಿಕ್ರಿಯಿಸಿದ ಅವರು ರೈತರು ತಮ್ಮ ಅನಿಸಿಕೆಗಳನ್ನು ಹೇಳಲು ಬೀದಿಗಿಳಿದು ಹೋರಾಟ ನಡೆಸುವ ಅಗತ್ಯವಿಲ್ಲ ಎಂದಿದ್ದಾರೆ.

ಇದನ್ನೂ ಓದಿ: GOOD NEWS : ರೈತರಿಗೆ ಸಿಹಿ ಸುದ್ದಿಕೊಟ್ಟ ರಾಜ್ಯ ಸರಕಾರ : ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಕೃಷಿ ಯೋಜನೆ

ಪ್ರಜಾಪ್ರಭುತ್ವದಲ್ಲಿ ಕೆಲವರು ತಮ್ಮ ಅನಿಸಿಕೆಗಳನ್ನು ಹೇಳುವುದಕ್ಕೆ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಕೃಷಿ ಕಾಯ್ದೆ ವಿರೋಧಿಸುವವರು ಅದರ ಮೂಲ ಉದ್ದೇಶವನ್ನು ಅರ್ಥೈಸಿಕೊಂಡಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Arecanut : ಅಡಿಕೆಗೆ ಬಂಪರ್‌ ಬೆಲೆ : 50 ಸಾವಿರ ರೂಪಾಯಿ ದಾಟಿದ ಅಡಿಕೆ

ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕೃಷಿ ಕಾಯ್ದೆಯನ್ನು ಜಾರಿಗೆ ತಂದೆವು. ರೈತರ ಹಿತಕ್ಕಾಗಿಯೇ ಕಾಯ್ದೆ ಜಾರಿ ತರಲಾಯಿತು. ಆದರೆ ಇವರು ಚಳುವಳಿಗಾಗಿ ಚಳುವಳಿ ಮಾಡುತ್ತಿದ್ದಾರೆ ಎಂದು ಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

(Enforcement of Agricultural Act to Avoid Interruption of Intermediaries: Do the Fighters Understand the Original Purpose?)

Comments are closed.