ಮಂಗಳವಾರ, ಏಪ್ರಿಲ್ 29, 2025
HomeCrimeBangalore : ಅಂಬ್ಯುಲೆನ್ಸ್‌- ಲಾರಿ ನಡುವೆ ಭೀಕರ ಅಫಘಾತ : 3 ಸಾವು, 4 ಮಂದಿ...

Bangalore : ಅಂಬ್ಯುಲೆನ್ಸ್‌- ಲಾರಿ ನಡುವೆ ಭೀಕರ ಅಫಘಾತ : 3 ಸಾವು, 4 ಮಂದಿ ಗಂಭೀರ

- Advertisement -

ಬೆಂಗಳೂರು : ಸಿಲಿಕಾನ್‌ ಸಿಟಿಯಲ್ಲಿ ಅಪಘಾತ ಪ್ರಕರಣ ಹೆಚ್ಚುತ್ತಿದೆ. ಇದೀಗ ಲಾರಿ ಹಾಗೂ ಅಂಬ್ಯಲೆನ್ಸ್‌ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ ನಾಲ್ವರ ಸ್ಥಿತಿ ಗಂಭೀರವಾಗಿದೆ.

ಬೆಂಗಳೂರಿನ ಅತ್ತಿಬೆಲೆ ಸಮೀಪದ ನರಳೂರು ಗ್ರಾಮದ ಬಳಿಯಲ್ಲಿ ಈ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಹೊಸೂರಿನ ಕಡೆಗೆ ತೆರಳುತ್ತಿದ್ದ ಅಂಬ್ಯುಲೆನ್ಸ್‌ ಚಾಲಕ ಓವರ್‌ ಟೇಕ್‌ ಮಾಡಿದ್ದಾನೆ. ಈ ವೇಳೆಯಲ್ಲಿ ಲಾರಿಗೆ ಅಂಬ್ಯುಲೆನ್ಸ್‌ ಢಿಕ್ಕಿಯಾಗಿದೆ. ಅಪಘಾತದಲ್ಲಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಪಘಾತದ ತೀವ್ರತೆಗೆ ಅಂಬ್ಯುಲೆನ್ಸ್‌ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಸ್ಥಳಕ್ಕೆ ಅತ್ತಿಬೆಲೆ ಠಾಣೆಯ ಪೊಲೀಸರು ಭೇಟಿ ನೀಡಿದ್ದುಪ್ರಕರಣ ದಾಖಲು ಮಾಡಿಕೊಂಡು ಪರಿಶೀಲನೆ ಯನ್ನು ನಡೆಸುತ್ತಿದ್ದಾರೆ. ಸಿಲಿಕಾನ್‌ ಸಿಟಿ ಬೆಂಗಳೂರಿನ ಕೋರಮಂಗಲದಲ್ಲಿ ಆಡಿ ಕಾರು ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿದ್ರೆ, ನಿನ್ನೆ ಎಲೆಕ್ಟ್ರಾನಿಕ್‌ ಸಿಟಿ ಪ್ಲೈ ಓವರ್‌ ನಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ಟೆಕ್ಕಿಗಳು ಸಾವನ್ನಪ್ಪಿದ್ದಾರೆ. ಕಳೆದೊಂದು ತಿಂಗಳ ಅವಧಿಯಲ್ಲಿಯೇ ಬೆಂಗಳೂರಲ್ಲಿ ಮೂರು ಭೀಕರ ಅಪಘಾತ ಸಂಭವಿಸಿದೆ.

ಇದನ್ನೂ ಓದಿ : ಬೆಂಗಳೂರಲ್ಲಿ ಐಶಾರಾಮಿ ಕಾರು ಅಪಘಾತ : ಶಾಸಕರ ಪುತ್ರ, ಸೊಸೆ ಸೇರಿ 7 ಮಂದಿ ದುರ್ಮರಣ

ಇದನ್ನೂ ಓದಿ : ಮನೆ ಕಳ್ಳತನ ಮಾಡೋಕೆ ವಿಮಾನದಲ್ಲಿ ಬರ್ತಿದ್ದ! ಹೈಟೆಕ್‌ ಕಳ್ಳರು ಅಂದರ್‌ ಆಗಿದ್ದು ಹೇಗೆ ಗೊತ್ತಾ

ಇದನ್ನೂ ಓದಿ : ಡ್ರಗ್ಸ್‌ ದಂಧೆಯಲ್ಲಿ ಸೋನಿಯಾ ಹಾಗೂಸ್ನೇಹಿತ ಅರೆಸ್ಟ್‌ : ಅಷ್ಟಕ್ಕೂ ಯಾರಿವಳು ಮಾದಕ ಸುಂದರಿ

( Ambulance and Lorry Accident 3 death, 4 injured Admited Hospital in Bangalore )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular