Oscar Fernandes : ಇಂದು ಆಸ್ಕರ್‌ ಫೆರ್ನಾಂಡಿಸ್‌ ಅಂತ್ಯಕ್ರೀಯೆ : ಅಂತಿಮ ದರ್ಶನ ಪಡೆಯಲಿರುವ ರಾಹುಲ್‌ ಗಾಂಧಿ

ಬೆಂಗಳೂರು : ಮಾಜಿ ಕೇಂದ್ರ ಸಚಿವ, ರಾಜ್ಯಸಭಾ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌ ಅವರ ಅಂತ್ಯಕ್ರೀಯೆ ಇಂದು ಬೆಂಗಳೂರಿನಲ್ಲಿ ನಡೆಯಲಿದೆ. ಬೆಂಗಳೂರಿನ ಸೇಂಟ್‌ ಪ್ಯಾಟ್ರಿಕ್‌ ಚರ್ಚ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಕಾಂಗ್ರೆಸ್‌ ಯುವರಾಜ ರಾಹುಲ್‌ ಗಾಂಧಿ ಅಂತಿಮ ದರ್ಶನ ಪಡೆಯಲಿದ್ದಾರೆ.

ವ್ಯಾಯಾಮ ಮಾಡುವ ವೇಳೆಯಲ್ಲಿ ಕುಸಿದು ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದ ರಾಜ್ಯಸಭಾ ಸದಸ್ಯ, ಹಿರಿಯ ಕಾಂಗ್ರೆಸ್‌ ಮುಖಂಡ ಆಸ್ಕರ್‌ ಫರ್ನಾಂಡೀಸ್‌ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ತಲೆಗೆ ಶಸ್ತ್ರ ಚಿಕಿತ್ಸೆ ನಡೆಸಿ ಒಂದು ತಿಂಗಳಿಗೂ ಅಧಿಕ ಕಾಲ ಚಿಕಿತ್ಸೆಯನ್ನು ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಕರ್‌ ಫೆರ್ನಾಂಡೀಸ್‌ ಅವರು ಎರಡು ದಿನಗಳ ಹಿಂದೆ ಇಹಲೋಕ ತ್ಯೆಜಿಸಿದ್ದರು.

ಈಗಾಗಲೇ ಉಡುಪಿ, ಮಂಗಳೂರಿನಲ್ಲಿ ಆಸ್ಕರ್‌ ಫೆರ್ನಾಂಡಿಸ್‌ ಅವರ ಅಂತಿಮ ದರ್ಶನ ಪಡೆಯಲು ಅವಕಾಶವನ್ನು ಕಲ್ಪಿಸಲಾಗಿತ್ತು. ಇದೀಗ ಅವರ ಪಾರ್ಥಿವ ಶರೀರ ಬೆಂಗಳೂರು ತಲುಪಿದ್ದು, ಇಂದು ಬೆಳಗ್ಗೆ 10ಗಂಟೆಯಿಂದ 12 ಗಂಟೆಯ ವರೆಗೆ ನಗರದ ಕೆಪಿಸಿಸಿ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಾಂಗ್ರೆಸ್‌ ಯುವರಾಜ ರಾಹುಲ್‌ ಗಾಂಧಿ ಅವರು ಅಂತಿಮ ದರ್ಶನ ಪಡೆಯಲಿದ್ದಾರೆ.

ವಿವಿಧ ರಾಜ್ಯಗಳ ಕಾಂಗ್ರೆಸ್‌ ಮುಖಂಡರು ಕೂಡ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ. ಅಂತಿಮವಾಗಿ ಸೇಂಟ್‌ ಪ್ಯಾಟ್ರಿಕ್‌ ಚರ್ಚ್‌ನಲ್ಲಿ ಅಂತ್ಯಕ್ರೀಯೆ ನಡೆಯಲಿದ್ದು, ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ : ಕಾಂಗ್ರೆಸ್ ಹಿರಿಯ ಮುಖಂಡ, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಇನ್ನಿಲ್ಲ

ಇದನ್ನೂ ಓದಿ : ಶಾಲಾರಂಭದ ಬೆನ್ನಲ್ಲೇ ಮಡಿಕೇರಿಯಲ್ಲಿ 35 ವಿದ್ಯಾರ್ಥಿನಿರಿಗೆ ಕೊರೊನಾ ಸೋಂಕು

ಇದನ್ನೂ ಓದಿ : ಪೋಟೋದಲ್ಲೇ ಸೋಷಿಯಲ್ ಮೀಡಿಯಾಗೆ ಕಿಚ್ಚು ಹಚ್ಚಿದ ಕಾಲಿವುಡ್ ನಟಿ

(Today’s Oscar Fernandez funeral at St. Patrick’s Church : Rahul Gandhi visit Bangalore )

Comments are closed.