ಬೆಳಕಿನ ಹಬ್ಬದ ಮೇಲೆ ಕೊರೋನಾ ಕರಿನೆರಳು: ಈ ವರ್ಷವೂ ನೋ ಪಟಾಕಿ ಎಂದ ಸಿಎಂ

ನವದೆಹಲಿ: ಕೊರೋನಾ ಅಬ್ಬರದ ನಡುವೆ ಬೆಳಕಿನ ಹಬ್ಬ ದೀಪಾವಳಿ ಈಗಾಗಲೇ ಮಂಕಾಗಿತ್ತು.ಈಗ ಹವಾಮಾಲಿನ್ಯದ ಕಾರಣಕ್ಕೆ ದೀಪಾವಳಿಯ ಮೇಲೆ ಮತ್ತಷ್ಟು ಕಠಿಣ ನಿಯಮ ಹೇರಲು ದೆಹಲಿ ಸರ್ಕಾರ ಸಜ್ಜಾಗಿದ್ದು, ಈ ವರ್ಷವೂ ಪಟಾಕಿ ಸಿಡಿಸುವಂತಿಲ್ಲ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಟ್ವೀಟ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಕೇಜ್ರಿವಾಲ್, ದೆಹಲಿಯ ವಾಯುಮಾಲಿನ್ಯದ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ಈ ನಿಯಮ ರೂಪಿಸಲಾಗಿದೆ. ದೆಹಲಿಯಲ್ಲಿ ಹಿಂದಿನ ವರ್ಷದಂತೆ ಈ ವರ್ಷವೂ ಪಟಾಕಿಗಳ ಶೇಖರಣೆ,ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಲಾಗಿದೆ ಎಂದಿದ್ದಾರೆ.

2020 ರಲ್ಲಿ ಪಟಾಕಿಗಳನ್ನು ವ್ಯಾಪಾರಿಗಳು ಮಾರಾಟಕ್ಕೆ ಸಂಗ್ರಹಿಸಿದ ಬಳಿಕ ವಾಯುಮಾಲಿನ್ಯದ ಕಾರಣ ಮುಂದಿಟ್ಟು ನಿಷೇಧ ಹೇರಲಾಗಿತ್ತು. ಇದರಿಂದ ವ್ಯಾಪಾರಿಗಳು ನಷ್ಟಕ್ಕೊಳಗಾಗಿದ್ದರು. ಹೀಗಾಗಿ ಈ ಬಾರಿ ಮುಂಚಿತವಾಗಿ ಸರ್ಕಾರ ಆದೇಶ ಹೊರಡಿಸಿದ್ದು, ಪಟಾಕಿ ಸಂಗ್ರಹ ಮಾರಾಟದ ಮೇಲೆ ನಿರ್ಬಂಧ ಹೇರಿದೆ.

ದೆಹಲಿಯ ವಾಯುಮಾಲಿನ್ಯ ಅಪಾಯಕಾರಿ ಹಂತದಲ್ಲಿದ್ದು, ಅದರೊಂದಿಗೆ ಕೊರೋನಾ ಭೀತಿ ಕೂಡ ಜೋರಾಗಿದೆ. ಹೀಗಾಗಿ ಈ ನಿರ್ಣಯಕೈಗೊಳ್ಳಲಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಈಗಾಗಲೇ ಪಶ್ಚಿಮಬಂಗಾಳದಲ್ಲೂ ಕಾಳಿಪೂಜೆ ವೇಳೆಯಲ್ಲಿ ಪಟಾಕಿ ಬಳಕೆ ನಿಷೇದಿಸಲಾಗಿದೆ.

ಇದನ್ನೂ ಓದಿ : ಕೊರೊನಾದಿಂದ ಮೃತರಾದವರಿಗೆ ಸಿಗುತ್ತೆ ಮರಣ ಪ್ರಮಾಣ ಪತ್ರ ; ಕೇಂದ್ರದಿಂದ ಜಾರಿಯಾಯ್ತು ಹೊಸ ನಿಯಮ !

ಇದನ್ನೂ ಓದಿ : ನಿಫಾ’ಕ್ಕೂ ಬರಲಿದೆ ‘ಕೋವಿಶೀಲ್ಡ್’ ಮಾದರಿ ಲಸಿಕೆ

ಇದನ್ನೂ ಓದಿ : ಕೋವಿಡ್‌ ಲಸಿಕೆಯನ್ನುಮನೆ ಮನೆಗೆ ತೆರಳಿ ನೀಡಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

( Complete ban on crackers this year too in dehli )

Comments are closed.