Cyrus Mistry : ಟಾಟಾ ಗ್ರೂಪ್ ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ದುರ್ಮರಣ

ಮುಂಬೈ : Cyrus Mistry ದೇಶದ ಪ್ರತಿಷ್ಠಿತ ಸಂಸ್ಥೆ  ಟಾಟಾ ಗ್ರೂಪ್​ನ ಮಾಜಿ ಅಧ್ಯಕ್ಷ ಸೈರಸ್​ ಮಿಸ್ತ್ರಿ ಅಪಘಾತದಲ್ಲಿ  ದುರ್ಮರಣಕ್ಕೀಡಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಮುಂಬೈನಿಂದ ಪಾಲ್ಘರ್​ಗೆ ತೆರಳುತ್ತಿದ್ದಾಗ ಮುಂಬೈ-ಅಹಮದಾಬಾದ್​ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು ಉದ್ಯಮಿ ಸೈರಸ್​ ಕೊನೆಯುಸಿರೆಳೆದಿದ್ದಾರೆ.

ಸೈರಸ್ ಮಿಸ್ತ್ರಿ ಮತ್ತು ಮೂವರು ಭಾನುವಾರ ಮರ್ಸಿಡಿಸ್ ಕಾರಿನಲ್ಲಿ ಅಹಮದಾಬಾದ್ ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದರು. ಆದ್ರೆ ಮಧ್ಯಾಹ್ನ 3.15ರ ಸಮಾರಿಗೆ ಸೂರ್ಯ ನದಿಯ ಸೇತುವೆ ಮೇಲಿನ ರಸ್ತೆ ವಿಭಜಕಕ್ಕೆ ಕಾರು ವೇಗವಾಗಿ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ವೇಗವಾಗಿ ಚಲಿಸುತ್ತಿದ್ದ ಕಾರು ರಾಂಗ್ ಸೈಡ್ ನಿಂದ ಮತ್ತೊಂದು ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸಿದೆ ಆದ್ರೆ ಕಾರಿನ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೇಗವಾಗಿ ಚಲಿಸುತ್ತಿದ್ದ ಕಾರು ರಾಂಗ್ ಸೈಡ್ ನಿಂದ ಮತ್ತೊಂದು ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸಿದೆ ಆದ್ರೆ ಕಾರಿನ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಪಘಾತದಲ್ಲಿ 55 ವರ್ಷದ ಸ್ತ್ರೀರೋಗತಜ್ಞೆ ಅನಾಹಿತಾ ಪಾಂಡೋಲೆ  ಮತ್ತು ಅವರ ಪತಿ ಡೇರಿಯಸ್ ಪಾಂಡೋಲೆ ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ. ಗಾಯಗೊಂಡಿರುವ ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಸೈರಸ್ ಮಿಸ್ತ್ರಿ ಮತ್ತು ಅನಾಹಿತಾ ಪಾಂಡೋಲೆ ಅವರ ಮಾವ ಜಹಾಂಗೀರ್ ಪಾಂಡೋಲೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮುಂಬೈನಿಂದ 120 ಕಿಮೀ ದೂರದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಕಾರನ್ನ ಅನಾಹಿತಾ ಪಾಂಡೋಲೆ ಅವ್ರೆ ಓಡಿಸ್ತಾ ಇದ್ರು ಅಂತಾ ಹೇಳಲಾಗ್ತಿದೆ. ಸೈರಸ್ ಮಿಸ್ತ್ರಿ ಮತ್ತು ಜಂಹಾಗೀರ್ ಪಾಂಡೋಲೆ ಹಿಂಬಂದಿ ಸೀಟ್ ನಲ್ಲಿ ಕುಳಿತಿದ್ರು

ಭಾರತದ ಪ್ರಮುಖ ಸಂಸ್ಥೆ ಟಾಟಾ ಸನ್ಸ್‌ ಸಮೂಹದ ನೇತೃತ್ವ ವಹಿಸಿದ ನಂತರದಲ್ಲಿ ಸೈರಸ್‌ ಮಿಸ್ತ್ರಿ ದೇಶದಾದ್ಯಂತ ಖ್ಯಾತಿ ಗಳಿಸಿದ್ದರು. ಟಾಟಾ ಸನ್ಸ್‌ನಲ್ಲಿ ಅತಿ ಹೆಚ್ಚು ಪಾಲುದಾರಿಕೆ ಹೊಂದಿರುವ ಶಾಪೂರ್ಜಿ ಪಾಲೋನಜಿ ಸಮೂಹದ ಪ್ರತಿನಿಧಿಯಾಗಿ ಸೈರಸ್‌ ಮಿಸ್ತ್ರಿ ಅವರನ್ನು ಟಾಟಾ ಸಮೂಹ ಸಂಸ್ಥೆಗಳ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ರತನ್‌ ಟಾಟಾ ಅವರು 2012ರಲ್ಲಿ ಕಂಪನಿಯ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು.

ಸೈರಸ್ ಮಿಸ್ತ್ರಿ ಅಪಘಾತದಲ್ಲಿ ಸಾವನ್ನಪ್ಪಿರುವ ಸುದ್ದಿ ಕೇಳಿ ಭಾರತೀಯ ಉದ್ಯಮ ವಲಯವೇ ಶೇಕ್ ಆಗಿದೆ. ಮಿಸ್ತ್ರಿ ದುರಂತ ಸಾವಿಗೆ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಸೇರಿದಂತೆ ಅನೇಕ ಗಣ್ಯರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಇನ್ನು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಸೈರಸ್ ಮಿಸ್ತ್ರಿ ಸಾವಿಗೆ ಕಾರಣವಾದ ಅಪಘಾತದ ತನಿಖೆಗೆ ಆದೇಶಿಸಿದ್ದಾರೆ.

ಇದನ್ನೂ ಓದಿ : Kohli breaks Rohit’s Record: ರೋಹಿತ್ ಶರ್ಮಾ ವಿಶ್ವದಾಖಲೆಯನ್ನು ಪುಡಿಗಟ್ಟಿದ ಕಿಂಗ್ ಕೊಹ್ಲಿ

ಇದನ್ನೂ ಓದಿ : hotel fire : ಐಷಾರಾಮಿ ಹೋಟೆಲ್​ನಲ್ಲಿ ಅಗ್ನಿ ಅವಘಡ : ನಾಲ್ವರು ಸಾವು, 20 ಮಂದಿ ರಕ್ಷಣೆ

Cyrus Mistry, Tata Sons Ex Chairman, Dies In Accident Near Mumbai

Comments are closed.