ಸೋಮವಾರ, ಏಪ್ರಿಲ್ 28, 2025
Homeನಮ್ಮ ಬೆಂಗಳೂರುಗ್ರಾಹಕರ ಮನಗೆದ್ದ ವನಸ್ಥಾ ಆಹಾರ ಉತ್ಪನ್ನ ಮಾರುಕಟ್ಟೆಗೆ ಬಿಡುಗಡೆ

ಗ್ರಾಹಕರ ಮನಗೆದ್ದ ವನಸ್ಥಾ ಆಹಾರ ಉತ್ಪನ್ನ ಮಾರುಕಟ್ಟೆಗೆ ಬಿಡುಗಡೆ

- Advertisement -

ಬೆಂಗಳೂರು : ಕರಾವಳಿ ಸೊಗಡಿನ ವನಸ್ಥಾ ಉತ್ಪನ್ನಗಳು ಈಗಾಗಲೇ ಗ್ರಾಹಕರ ಮನಗೆದ್ದಿದೆ. ಕಲಬೆರಕೆ ಹಾಗೂ ರಾಸಾಯನಿಕ ಮುಕ್ತ, ಕೃತಕ ಬಣ್ಣ, ಸಂರಕ್ಷಕಗಳನ್ನು ಬಳಸದೇ ಗ್ರಾಹಕರ ಆರೋಗ್ಯದ ಏಕನಿಷ್ಠ ಕಾಳಜಿಯೊಂದಿಗೆ ನೈಸರ್ಗಿಕವಾಗಿ ಆಹಾರ ಪದಾರ್ಥ ಹಾಗೂ ಮಸಾಲೆಗಳನ್ನು ಉತ್ಪಾದಿಸುತ್ತಿದೆ. ಇದೀಗ ವನಸ್ಥಾ ಆಗ್ರೋ ಪುಡ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯು ಆಹಾರ ಉತ್ಪನ್ನಗಳನ್ನು ಸಿಲಿಕಾನ್ ಸಿಟಿಯಲ್ಲಿ ಬಿಡುಗಡೆ ಮಾಡಿದೆ.

ಬೆಂಗಳೂರಿನ ವಸಂತನಗರದ “ದಿ ಕ್ಯಾಪಿಟಲ್” ಹೋಟೇಲಿನಲ್ಲಿ ನಡೆದ ಸಮಾರಂಭದಲ್ಲಿ ಆಹಾರೋತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ವನಸ್ಥಾ ಉತ್ಪನ್ನಗಳನ್ನು ಒದಗಿಸುವ ನಿಟ್ಟಿನಲ್ಲಿ ಆಹಾರ ಮತ್ತು ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯೊಂದಿಗೆ ಉತ್ಪನ್ನಗಳನ್ನು ಒದಗಿಸಲು ಸಂಸ್ಥೆ ಮುಂದಾಗಿದೆ.

ಬಿಗ್ ಬಾಸ್ ಖ್ಯಾತಿಯ ನಟ ಶೈನ್ ಶೆಟ್ಟಿ ಅವರನ್ನು ವನಸ್ಥಾ ಉತ್ಪನ್ನಗಳ ರಾಯಭಾರಿಯಾಗಿ ನಿಯೋಜನೆ ಮಾಡಲಾಗಿದೆ. ಶೈನ್ ಶೆಟ್ಟಿ ಅವರು ಆಹಾರ ಉತ್ಪನ್ನಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.

ಅವಧೂತ ಶ್ರೀ ಶ್ರೀ ವಿನಯ ಗುರೂಜಿಯವರು ಈ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿದ್ದು, ಫಾಸ್ಟ್ ಫುಡ್ ಲೈಪ್ ನಲ್ಲಿ ಮರೆಯಾಗುತ್ತಿ ರುವ ಪಾರಂಪರಿಕ ರುಚಿಯನ್ನು ಮತ್ತೆ ಜನರ ಮುಂದೆ ತರುವ ವನಸ್ಥಾ ಸಂಸ್ಥೆಯ ಪ್ರಯತ್ನ ಮೆಚ್ಚುವಂಥದ್ದು. ಸಂಸ್ಥೆಯು ರಾಸಾಯನಿಕ ಮುಕ್ತವಾದಂತಹ ಅನೇಕ ಬಗೆ ಆಹಾರೋತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವುದರಿಂದ ಸಮಾಜದ ಆರೋಗ್ಯದ ದೃಷ್ಟಿಯಿಂದ ಉತ್ತಮ ಕೆಲಸವಾಗಿದೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕಿರುತೆರೆ ನಟಿಯರಾದ ಭೂಮಿ ಶೆಟ್ಟಿ, ಚಂದನ, ಕರ್ನಾಟಕ ಕರಕುಶಲ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷ ಡಾ. ಬೇಳೂರು ರಾಘವೇಂದ್ರ ಶೆಟ್ಟಿ ಭಾಗವಹಿಸಿದ್ದರು.

ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಸಂಸ್ಥಾಪಕ ಶ್ರೀಯುತ ನಟರಾಜ್ ಕಲ್ಯಾಣಿ ಮತ್ತು ನಿರ್ದೇಶಕರಾದ ರಾಮ್_ಪ್ರದೀಪ್ ಆಚಾರ್, ಆರ್ಥಿಕ ಸಲಹೆಗಾರರಾದ ಆನಂದ ಪಿ. ಎಸ್., ಮಾರುಕಟ್ಟೆ ಪ್ರಧಾನ ವ್ಯವಸ್ಥಾಪಕ ವಿಶ್ವಜ್ಞಾಚಾರ್, ಪ್ರಾದೇಶಿಕ ವ್ಯವಸ್ಥಾಪಕರಾದ ಧನಂಜಯ್ ನೆಲ್ಯಾಡಿ ಹಾಗೂ ವಿತರಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular