ಉಜಿರೆ ಬಾಲಕನ ಕಿಡ್ನಾಪ್ ಪ್ರಕರಣ : 7 ಲಕ್ಷಕ್ಕೆ ಪರಿಚಯಸ್ಥನೇ ಕೊಟ್ಟಿದ್ನಾ ಸುಫಾರಿ ..??

ಮಂಗಳೂರು : ಉಜಿರೆಯ ಬಾಲಕನ ಅಪಹರಣ ಪ್ರಕರಣ ಪ್ರಕರಣ ಸುಖ್ಯಾಂತ್ಯ ಕಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದ್ರೆ ಬಂಧಿತರರು ಸ್ಪೋಟಕ ಮಾಹಿತಿಯೊಂದನ್ನು ನೀಡಿದ್ದು, ಬಾಲಕನ ಪರಿಚಯಸ್ಥ 7 ಲಕ್ಷಕ್ಕೆ ಕಿಡ್ನಾಪ್ ಮಾಡಲು ಸುಫಾರಿ ಕೊಟ್ಟಿದ್ದಾರೆ ಅನ್ನೋದು ಬಯಲಾಗಿದೆ.

ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಅವರು ಮಾಹಿತಿ ನೀಡಿದ್ದಾರೆ. ಪ್ರಕರಣದ ಬಗ್ಗೆ ಮೊದಲೇ ಮನೆಯವರಿಂದ ಮಾಹಿತಿ ಪಡೆದಿದ್ದೆವು. ಈ ವೇಳೆ, ಸಿಕ್ಕ ಮಾಹಿತಿ ಮತ್ತು ನಾವು ಸಂಗ್ರಹಿಸಿದ ಮಾಹಿತಿ ಆಧರಿಸಿ ನಾಲ್ಕು ಪೊಲೀಸ್ ತಂಡಗಳನ್ನು ರಚಿಸಿದ್ದು ಚಿಕ್ಕಮಗಳೂರಿನ ಮೂಡಿಗೆರೆ, ಮಂಡ್ಯ ಜಿಲ್ಲೆಯ ಮಧುಗಿರಿ, ಹಾಸನ, ಬೆಂಗಳೂರಿಗೆ ತೆರಳಿತ್ತು. ಮಧುಗಿರಿಗೆ ತೆರಳಿದ್ದ ತಂಡಕ್ಕೆ ಒಂದಷ್ಟು ಮಾಹಿತಿಗಳು ಸಿಕ್ಕಿದ್ದವು.

ಮಾಹಿತಿಯನ್ನು ಆಧರಿಸಿ ಮಂಡ್ಯದ ರಂಜಿತ್ (22 ವರ್ಷ), ಹನುಮಂತ್ (21 ವರ್ಷ), ಮೈಸೂರಿನ ಗಂಗಾಧರ (25ವರ್ಷ ) ಮತ್ತು ಬೆಂಗಳೂರಿನ ಕಮಲ್ (22ವರ್ಷ) ಪ್ರಮುಖ ಆರೋಪಿಗಳು ಮಗುವನ್ನು ಅಪಹರಣ ಮಾಡಿದ್ದರೆ. ಮಂಜುನಾಥ ಎಂಬಾತನ (24 ವರ್ಷ)ನ ನೆರವಿನಿಂದ ಕೋಲಾರದ ಮಹೇಶ್ (26 ವರ್ಷ) ಮನೆಯಲ್ಲಿ ಮಗುವನ್ನು ಇರಿಸಿದ್ದರು. ಈ ಹಿನ್ನೆಲೆಯಲ್ಲಿ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರರನ್ನು ವಿಚಾರಣೆಗೆ ಒಳಪಡಿಸಿದಾಗ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ಮಗುವನ್ನು ಅಪಹರಣ ಮಾಡಿದ್ದ 4 ಮಂದಿಗೆ ವ್ಯಕ್ತಿಯೋರ್ವ 7 ಲಕ್ಷ ರೂಪಾಯಿಗೆ ಸುಫಾರಿಯನ್ನು ಕೊಟ್ಟಿದ್ದ. ಆ ಕುಟುಂಬಕ್ಕೆ ಪರಿಚಯಸ್ಥನಾಗಿದ್ದ ವ್ಯಕ್ತಿ ಆತ ಅನ್ನೋದು ತಿಳಿದು ಬಂದಿದ್ದು, ಸುಫಾರಿ ನೀಡಿದಾತನ ಬಂಧನಕ್ಕೆ ಬಲೆ ಬೀಸಲಾಗಿದೆ. ಆ ವ್ಯಕ್ತಿಯ ಬಂಧನದ ನಂತರದಲ್ಲಿ ಕಿಡ್ನಾಪ್ ಪ್ರಕರಣದ ಉದ್ದೇಶ ಬಯಲಾಗಲಿದೆ. ಈ ಕೃತ್ಯ ನಡೆಸಲು ಇವರಿಗೆ ಸುಪಾರಿ ಕೊಟ್ಟ ವ್ಯಕ್ತಿ ಬೇರೊಬ್ಬನಿದ್ದು ಆತನ ಬಗ್ಗೆ ಮಾಹಿತಿ ಕಲೆ ಹಾಕಿದ್ದು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದಿದ್ದಾರೆ.

ಇನ್ನು ಬಾಲಕ ತಂದೆ ಬಿಜೋಯ್ ಸುಮಾರು ನಾಲ್ಕು ವರ್ಷಗಳ ಹಿಂದೆ ಬಿಟ್ ಕಾಯಿನ್ ಖರೀದಿ ಮಾಡಿದ್ದರು. ಆದರೆ ಬಳಿಕ ಮೌಲ್ಯ ಕುಸಿಯುತ್ತಿದೆ ಎಂದು ಮಾರಾಟ ಮಾಡಿರುವುದಾಗಿ ಪೊಲೀಸರ ಮುಂದೆ ತಿಳಿಸಿದ್ದಾರೆ. ಬಿಜೋಯ್ ಬಿಟ್ ಕಾಯಿನ್ ವಹಿವಾಟು ನಡೆಸುತ್ತಿದ್ದು, ಇದೀಗ ಬಿಟ್ ಕಾಯಿನ್ ಬೆಲೆಯಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಬಾಲಕನನ್ನು ಅಪಹರಿಸಿ ಬಿಟ್ ಕಾಯಿನ್ ಡಿಮ್ಯಾಂಡ್ ಮಾಡಲಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಒಟ್ಟಿನಲ್ಲಿ ಪೊಲೀಸರ ತನಿಖೆಯಿಂದಷ್ಟೇ ಸತ್ಯಾಂಶ ಹೊರ ಬರೋದಕ್ಕೆ ಸಾಧ್ಯ.

Comments are closed.