Ranji Trophy updates : ರಣಜಿ ಟ್ರೋಫಿ: ಕರ್ನಾಟಕಕ್ಕೆ ಸರ್ವಿಸಸ್ ಎದುರಾಳಿ, ಮೊದಲ ಪಂದ್ಯಕ್ಕೇ ವರುಣನ ಅಡ್ಡಿ

ಬೆಂಗಳೂರು: Ranji Trophy updates : 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡದ ರಣಜಿ ಟ್ರೋಫಿ (Ranji Trophy 2022-23) ಅಭಿಯಾನ ಸರ್ವಿಸಸ್ ವಿರುದ್ಧದ ಪಂದ್ಯದೊಂದಿಗೆ ಆರಂಭವಾಗಿದ್ದು, ಮೊದಲ ಪಂದ್ಯಕ್ಕೇ ಮಳೆಯ ಅಡಚಣೆ ಎದುರಾಗಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ (M Chinnaswamy Stadiuam, Bengaluru) ಕ್ರೀಡಾಂಗಣದಲ್ಲಿ ಬೆಳಗ್ಗೆ 9.30ಕ್ಕೆ ಆರಂಭವಾಗಬೇಕಿದ್ದ ಪಂದ್ಯ ಇನ್ನೂ ಆರಂಭವಾಗಿಲ್ಲ. ಬೆಂಗಳೂರಿನಲ್ಲಿ ಕಳೆದ 3-4 ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ಪಂದ್ಯಕ್ಕೆ ತಡವಾಗಿ ಆರಂಭವಾಗಲಿದೆ. ಈ ಬಾರಿ ಕರ್ನಾಟಕ ತಂಡ ನೂತನ ನಾಯಕ ಮಯಾಂಕ್ ಅಗರ್ವಾಲ್ (Mayank Agarwal) ಅವರ ನಾಯಕತ್ವದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದೆ. ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡ ಮಯಾಂಕ್ ಅಗರ್ವಾಲ್ ನಾಯಕತ್ವದಲ್ಲಿ ಕ್ವಾರ್ಟರ್ ಫೈನಲ್’ನಲ್ಲಿ ಪಂಜಾಬ್ ವಿರುದ್ಧ ಸೋಲು ಕಂಡಿತ್ತು. ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯ ಸೆಮಿಫೈನಲ್’ನಲ್ಲಿ ಕರ್ನಾಟಕ ತಂಡ ಸೌರಾಷ್ಟ್ರ ವಿರುದ್ಧ ಮುಗ್ಗರಿಸಿತ್ತು. ಇದೀಗ ರಣಜಿ ಟ್ರೋಫಿಯಲ್ಲಿ ಮಯಾಂಕ್ ಅಗರ್ವಾಲ್ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ.

ಕರ್ನಾಟಕ ತಂಡ ಈ ಬಾರಿ ತನ್ನ ಮೊದಲ ಎರಡು ಪಂದ್ಯಗಳನ್ನು ತವರು ನೆಲ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಆಡುತ್ತಿದೆ. ಸರ್ವಿಸಸ್ ವಿರುದ್ಧದ ಪಂದ್ಯದ ನಂತರ ಡಿಸೆಂಬರ್ 20ರಂದು ಆರಂಭವಾಗಲಿರುವ ಪಾಂಡಿಚೇರಿ ವಿರುದ್ಧದ ಪಂದ್ಯವನ್ನು ತವರು ನೆಲದಲ್ಲೇ ಆಡಲಿದೆ. 2014-15ನೇ ಸಾಲಿನಲ್ಲಿ ಆರ್.ವಿನಯ್ ಕುಮಾರ್ ನಾಯಕತ್ವದಲ್ಲಿ ರಣಜಿ ಟ್ರೋಫಿ ಗೆದ್ದ ನಂತರ ಕರ್ನಾಟಕ ತಂಡ ಮತ್ತೊಮ್ಮೆ ರಣಜಿ ಟ್ರೋಫಿ ಗೆದ್ದಿಲ್ಲ.

ರಣಜಿ ಟ್ರೋಫಿ 2022-23: ಮೊದಲೆರಡು ಪಂದ್ಯಗಳಿಗೆ ಕರ್ನಾಟಕ ತಂಡ (Karnataka Ranji Team)

1.ಮಯಾಂಕ್ ಅಗರ್ವಾಲ್ (ನಾಯಕ), 2.ಆರ್.ಸಮರ್ಥ್ (ಉಪನಾಯಕ), 3.ನಿಕಿನ್ ಜೋಸ್, 4.ವಿಶಾಲ್ ಓನಟ್, 5.ಮನೀಶ್ ಪಾಂಡೆ, 6.ಕೆ.ವಿ ಸಿದ್ಧಾರ್ಥ್, 7.ಬಿ.ಆರ್ ಶರತ್ (ವಿಕೆಟ್ ಕೀಪರ್), 8.ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್), 9.ಕೃಷ್ಣಪ್ಪ ಗೌತಮ್, 10.ಶ್ರೇಯಸ್ ಗೋಪಾಲ್, 11.ರೋನಿತ್ ಮೋರೆ, 12.ವಿ.ಕೌಶಿಕ್, 13.ವಿದ್ವತ್ ಕಾವೇರಪ್ಪ, 14.ವೈಶಾಖ್ ವಿಜಯ್ ಕುಮಾರ್, 15.ಶುಭಾಂಗ್ ಹೆಗ್ಡೆ.

ಕೋಚ್: ಪಿ.ವಿ ಶಶಿಕಾಂತ್
ಫೀಲ್ಡಿಂಗ್ ಕೋಚ್: ದೀಪಕ್ ಚೌಗುಲೆ
ಫಿಸಿಯೊ: ಜಾಬಾ ಪ್ರಭು
ಸ್ಟ್ರೆಂತ್ & ಕಂಡಿಷನಿಂಗ್ ಕೋಚ್: ಕೆ.ಸಿ ಅವಿನಾಶ್
ಮ್ಯಾನೇಜರ್: ಎ.ರಮೇಶ್ ರಾವ್
ವೀಡಿಯೊ ಅನಾಲಿಸ್ಟ್: ರಾಜ್ ಕಿರೀಟ್ ಕಪಾಡಿಯಾ

ರಣಜಿ ಟ್ರೋಫಿ 2022-23: ಕರ್ನಾಟಕ ತಂಡದ ವೇಳಾಪಟ್ಟಿ (Ranji Trophy Karnataka)

ಡಿಸೆಂಬರ್ 13-16 Vs ಸರ್ವಿಸಸ್ (ಬೆಂಗಳೂರು)
ಡಿಸೆಂಬರ್ 20-23 Vs ಪಾಂಡಿಚೇರಿ (ಬೆಂಗಳೂರು)
ಡಿಸೆಂಬರ್ 27-30 Vs ಗೋವಾ (ಪೊರ್ವರಿಮ್)
ಜನವರಿ 03-06 Vs ಛತ್ತೀಸ್’ಗಢ (ರಾಯ್ಪುರ)
ಜನವರಿ 10-13 Vs ರಾಜಸ್ಥಾನ (TBC)
ಜನವರಿ 17-20 Vs ಕೇರಳ (ತಿರುವನಂತಪುರಂ)
ಜನವರಿ 24-27 Vs ಜಾರ್ಖಂಡ್ (ರಾಂಚಿ)

ಇದನ್ನೂ ಓದಿ : 7.44 ಪಂದ್ಯಕ್ಕೊಂದು ಸೆಂಚುರಿ, ಶತಕ ಬೇಟೆಯಲ್ಲೂ ಸಚಿನ್ ತೆಂಡೂಲ್ಕರ್‌ಗಿಂತ ಕಿಂಗ್ ಕೊಹ್ಲಿಯೇ ಬೆಸ್ಟ್

ಇದನ್ನೂ ಓದಿ : Sanju Samson play Ireland: ಐರ್ಲೆಂಡ್ ಪರ ಆಡಲಿದ್ದಾರಾ ಸಂಜು ಸ್ಯಾಮ್ಸನ್.. ಐರ್ಲೆಂಡ್ ಆಫರ್‌ಗೆ ಸಂಜು ಹೇಳಿದ್ದೇನು ?

Ranji Trophy updates : Ranji Trophy 2022-23 Karnataka vs Services Cricket Team First match Rain Effect M Chinnaswamy Stadium Bengaluru

Comments are closed.