ಬೆಂಗಳೂರು : ನಗರದ ಸೌಂದರ್ಯಕ್ಕೆ ಫ್ಲೆಕ್ಸ್, ಜಾಹೀರಾತು ಫಲಕಗಳೇ ಕಾರಣ ಅನ್ನೋ ಮಾತು ಬೆಂಗಳೂರಿನ ಮಟ್ಟಿಗೆ ನಿಜವಾಗಿತ್ತು. ನಗರದ ಸೌಂದರ್ಯ ಹಾಳುಗೆಡವೋ ಜಾಹೀರಾತು ಫಲಕಗಳ ವಿರುದ್ಧ ಹೈಕೋರ್ಟ್ (Karnataka High Court) ಕೂಡ ಚಾಟಿ ಬೀಸಿತ್ತು. ಆದರೆ ಈಗ ಬಿಬಿಎಂಪಿ (BBMP) ಅದೇ ಜಾಹೀರಾತುಗಳನ್ನು (Hordings) ಆದಾಯದ ಮೂಲವಾಗಿ ಬಳಸಿಕೊಳ್ಳುವ ಸಿದ್ಧತೆಯಲ್ಲಿದೆ.
ನಗರದಲ್ಲಿ ಚಿಕ್ಕ ಪುಟ್ಟ ಕಾರ್ಯಕ್ರಮಗಳಿಂದ ಆರಂಭಿಸಿ, ಅಂಗಡಿಮುಂಗಟ್ಟುಗಳವರೆಗೆ ಎಲ್ಲದಕ್ಕೂ ಜಾಹೀರಾತು ಫಲಕ ಹಾಕೋದು ಕಾಮನ್. ಇದರಲ್ಲಿ ನೂರು ಅಧಿಕೃತವಾದರೇ, ಸಾವಿರ ಅನಧಿಕೃತ. ಆದರೆ ನಗರದಲ್ಲಿ ಅನಧಿಕೃತ ಜಾಹೀರಾತಿಗೆ ಕಡಿವಾಣ ಹಾಕಲು ಹಾಗೂ ಬಿಬಿಎಂಪಿ ಖಜಾನೆ ಭರ್ತಿ ಮಾಡಲು ಬಿಬಿಎಂಪಿ ಮಾಸ್ಟರ್ ಪ್ಲ್ಯಾನ್ ಮಾಡಿದೆ.

ಇದಕ್ಕಾಗಿ ಜಾಹೀರಾತು ಬೈಲಾಗೆ ತಿದ್ದುಪಡಿ ಮಾಡಲು ಬಿಬಿಎಂಪಿ ಸಿದ್ಧವಾಗಿದೆ. ನಗರದ ಸೌಂದರ್ಯ ಮತ್ತು ಪರಿಸರ ಹಾಳು ಮಾಡುತ್ತಿರುವ ಜಾಹೀರಾತು ಪ್ರದರ್ಶನವನ್ನು ಈ ಹಿಂದೆ ನಿಷೇಧಿಸಲಾಗಿತ್ತು. ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಕೆಲ ಸಂದರ್ಭಗಳನ್ನು ಹೊರತುಪಡಿಸಿ ಜಾಹೀರಾತು ಪ್ರದರ್ಶನ ಸಂಪೂರ್ಣ ನಿಷೇಧಿಸಲಾಗಿದೆ.
ಇದನ್ನೂ ಓದಿ : ಮಂಗಳಮುಖಿಯರಿಗೆ ಗೃಹಲಕ್ಷ್ಮೀ ಯೋಜನೆ : ರಾಜ್ಯ ಸರಕಾರದಿಂದ ಮಹತ್ವದ ನಿರ್ಧಾರ
ಅದರೂ ಕೂಡ ರಾಜಕೀಯ ಪಕ್ಷಗಳು ಸೇರಿ ಖಾಸಗಿಯವರು ಎಲ್ಲೆಂದರಲ್ಲಿ ಫ್ಲೆಕ್ಸ್ , ಬ್ಯಾನರ್ ಗಳನ್ನು ಅಳವಡಿಸಿ ಬಿಬಿಎಂಪಿ ನಿಯಮ ಹಾಗೂ ಹೈಕೋರ್ಟ್ ಆದೇಶ ಉಲ್ಲಂಘನೆ ನಡೆಯುತ್ತಲೇ ಇತ್ತು. ಈಗ ಅದಕ್ಕೊಂದು ಉಪಾಯ ಕಂಡುಕೊಂಡಿದೆ ಪಾಲಿಕೆ. ಈ ರೂಲ್ಸ್ ಪ್ರಕಾರ ಬಿಬಿಎಂಪಿಯ ಬೊಕ್ಕಸ ತುಂಬಿಸಿಕೊಳ್ಳೋದು ಪ್ಲ್ಯಾನ್.
ಇದಕ್ಕಾಗಿ ಬಿಬಿಎಂಪಿ ಬೈಲಾಗೇ ತಿದ್ದುಪಡಿ ತಂದು ಬಿಬಿಎಂಪಿ ಹೊಸ ಜಾಹೀರಾತು ಪಾಲಿಸಿ ರೂಪಿಸಲು ಮುಂದಾಗಿದೆ. ಇದಕ್ಕಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾಹೀರಾತು ಅಳವಡಿಕೆ ಬೈಲಾದಲ್ಲಿ ತಿದ್ದುಪಡಿ ತರಲಾಗುತ್ತಿದೆ. ಈ ತಿದ್ದುಪಡಿ ಬಳಿಕ ಬಿಬಿಎಂಪಿಯ ಜಾಹೀರಾತು ದರ ಕಳೆದ ಅವಧಿಗಿಂತ 50% ರಷ್ಟು ದರ ಏರಿಕೆಮಾಡೋ ಲೆಕ್ಕಾಚಾರದಲ್ಲಿದೆ ಪಾಲಿಕೆ.
ಇದಲ್ಲದೇ ಬಿಬಿಎಂಪಿ ಒಡೆತನದ ಜಾಗಗಳಲ್ಲಿ ಮಾತ್ರ ಜಾಹೀರಾತು ಪ್ರದರ್ಶನಕ್ಕೆ ಅನುಮತಿ ನೀಡಬೇಕು ಎಂಬ ನಿಯಮ ರೂಪಿಸಲು ಮುಂದಾಗಿದೆ. ಅಲ್ಲದೇ ಜಾಹೀರಾತು ಪ್ರದರ್ಶನದಿಂದ ಆದಾಯ ಹೆಚ್ಚಿಸಿಕೊಳ್ಳಲು ವಲಯಗಳ ನಿಗದಿ ಮಾಡಲಾಗುತ್ತಿದೆ. ಬಿಬಿಎಂಪಿ ವಲಯ ಅನುಸಾರವಾಗಿ ಪ್ರತ್ಯೇಕ ದರ ನಿಗದಿ ಮಾಡಬೇಕು ಎಂದು ನಿಯಮ ರೂಪಿಸಲಾಗುತ್ತಿದೆ.
ಇದನ್ನೂ ಓದಿ : ಮೀಸಲಾತಿ ಸಂಕಷ್ಟ: ಸದ್ಯಕ್ಕಿಲ್ಲ ಬಿಬಿಎಂಪಿ ಎಲೆಕ್ಷನ್
ಇನ್ನೂ ನಗರದಲ್ಲಿ ಅನಧಿಕೃತ ಜಾಹೀರಾತು ಅಳವಡಿಕೆಗೆ ಸಂಬಂಧಿಸಿದಂತೆ ವಲಯ ಮಟ್ಟದಲ್ಲಿ ಕಣ್ಗಾವಲು ತಂಡ ನೇಮಿಸಲಾಗುತ್ತದೆ. ಪ್ರತಿ ವಲಯದಲ್ಲಿ ಪ್ರತಿ ತಿಂಗಳು ತಲಾ 10 ಪ್ರಕರಣ ದಾಖಲಿಸುವ ಗುರಿ ಹೊಂದಲಾಗಿದ್ದು, ಇವುಗಳಿಗೆ ದಂಡ ವಿಧಿಸುವ ಮೂಲಕ ಆದಾಯ ಸಂಗ್ರಹಣೆ ಗುರಿ ಹೊಂದಿದೆ.

ಹಿಂದಿನ ಜಾಹೀರಾತು ಟೆಂಡರ್ ನಿಯಮದಲ್ಲೂ ಬದಲಾವಣೆ ತರಲಾಗುತ್ತದೆ. ಹೀಗೆ ಸಾರ್ವಜನಿಕ ಸ್ಥಳದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಖಾಸಗಿಯವರಿಗೆ ಅನುಮತಿ ನೀಡೋದ್ರಿಂದ ಬಿಬಿಎಂಪಿಯ ಆದಾಯ ವೃದ್ಧಿಯಾಗಲಿದೆ. ಈ ಹಿಂದೆ ಜಾಹೀರಾತು ಪ್ರದರ್ಶನ ನಿಷೇಧಿಸೋದಕ್ಕೂ ಮುನ್ನ ಪಾಲಿಕೆಗೆ ವಾರ್ಷಿಕ ಅಂದಾಜು 100 ಕೋಟಿ ರೂ ಆದಾಯ ಬರುತ್ತಿತ್ತು.
ಇದನ್ನೂ ಓದಿ : ಕಾಂಗ್ರೆಸ್ ಗ್ಯಾರಂಟಿ ಎಫೆಕ್ಟ್ : ಸಿದ್ದರಾಮಯ್ಯ ಕಾಲದಲ್ಲೇ ಅನುದಾನವಿಲ್ಲದೆ ಬಾಗಿಲು ಮುಚ್ಚುತ್ತಿದೆ ಇಂದಿರಾ ಕ್ಯಾಂಟೀನ್
ಆ ಸಂದರ್ಭದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ 8 ಸಾವಿರಕ್ಕೂ ಹೆಚ್ಚಿನ ಜಾಹೀರಾತು ಹೋರ್ಡಿಂಗ್ಸ್ ಗಳಲ್ಲಿ ಶೇ. 50 ಅಕ್ರಮವಾಗಿತ್ತು. ಅಷ್ಟೊಂದು ಅಕ್ರಮದ ನಡುವೆಯೂ ಪಾಲಿಕೆಗೆ 100 ಕೋಟಿ ಆದಾಯವನ್ನ ಜಾಹೀರಾತು ತಂದುಕೊಡ್ತಿತ್ತು. ಸದ್ಯ ಇದಕ್ಕಾಗೇ ಹೊಸ ನೀತಿ ತಂದು ಸಂಪೂರ್ಣ ಸಕ್ರಮ ಮಾಡಿದ್ದೇ ಆದ್ರೆ ಪಾಲಿಕೆಗೆ 600 ಕೋಟಿ ವಾರ್ಷಿಕ ಆದಾಯ ಬರೋ ನಿರೀಕ್ಷೆ ಇದೆ.
ಇದರಿಂದ ನಗರದ ಸೌಂದರ್ಯ ಕೆಟ್ಟರೂ ಪರವಾಗಿಲ್ಲ ತಮ್ಮ ಆದಾಯ ಹೆಚ್ಚಿಸಿಕೊಳ್ಳುವ ಬಿಬಿಎಂಪಿಯ ಈ ಪ್ಲ್ಯಾನ್ ಗೆ ಹೈಕೋರ್ಟ್ ಅವಕಾಶ ಕೊಡುತ್ತಾ ಅಥವಾ ಮತ್ತೊಮ್ಮೆ ಚಾಟಿ ಬೀಸಿ ಬಿಸಿ ಮುಟ್ಟಿಸುತ್ತಾ ಕಾದು ನೋಡಬೇಕಿದೆ.
BBMP to grant permission for installation of Advertisements Hordlings in Bangalore violates High Court order for grant