ಬೆಂಗಳೂರು : ಹೆಚ್ಚುತ್ತಿರುವ ಒಮಿಕ್ರಾನ್ ಪ್ರಕರಣ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಳನ್ನು ಗಮನದಲ್ಲಿಟ್ಟುಕೊಂಡು ನಿನ್ನೆಯಿಂದ 10 ದಿನಗಳ ಕಾಲ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ನಿನ್ನೆಯಿಂದ ಆರಂಭವಾದ ನೈಟ್ ಕರ್ಫ್ಯೂವಿನ ಮೊದಲ ದಿನ ಪೂರ್ಣಗೊಂಡಿದೆ. ನೈಟ್ ಕರ್ಫ್ಯೂ ಮೊದಲ ದಿನವೇ ಬಿಗ್ ಬಾಸ್ ಸೀಸನ್ 8ರ ಖ್ಯಾತಿಯ ದಿವ್ಯಾ ಸುರೇಶ್ ಮದ್ಯಪಾನ ಮಾಡಿ ( divya suresh violates night curfew) ರಂಪಾಟ ಮಾಡಿದ್ದಾರೆ.
ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಸ್ನೇಹಿತರ ಜೊತೆ ಇದ್ದ ದಿವ್ಯಾ ಸುರೇಶ್ ಕುಡಿದ ಅಮಲಿನಲ್ಲಿದ್ದರು ಎನ್ನಲಾಗಿದೆ. ಸ್ನೇಹಿತರೊಂದಿಗೆ ಬ್ರಿಗೇಡ್ ರೋಡ್ ಸುತ್ತುತ್ತಿದ್ದ ದಿವ್ಯಾ ಸುರೇಶ್ಗೆ ಪೊಲೀಸರು ನೈಟ್ ಕರ್ಫ್ಯೂ ಇದೆ ಮನೆಗೆ ಹೋಗಿ ಎಂದು ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ದಿವ್ಯಾ ಸುರೇಶ್ ಪೊಲೀಸರ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್ ಸೀಸನ್ 8ರಲ್ಲಿ ಕಾಣಿಸಿಕೊಂಡಿದ್ದ ನಟಿ ದಿವ್ಯಾ ಸುರೇಶ್ ಈ ಸೀಸನ್ನ ಟಾಪ್ 6 ಸ್ಪರ್ಧಿಯಾಗಿ ಹೊರಹೊಮ್ಮಿದ್ದರು. ಕೂದಲೆಳೆ ಅಂತರದಲ್ಲಿ ದಿವ್ಯಾ ಸುರೇಶ್ಗೆ ಬಿಗ್ ಬಾಸ್ ಫೈನಲ್ನಲ್ಲಿ ಸ್ಪರ್ಧಿಸುವ ಅವಕಾಶ ಕೈತಪ್ಪಿ ಹೋಗಿತ್ತು.
ರಾಜ್ಯಾದ್ಯಂತ ಡಿಸೆಂಬರ್ 28ರಿಂದ ಜನವರಿ 7ರವರೆಗೆ ನೈಟ್ ಕರ್ಫ್ಯೂ ಆದೇಶ ಜಾರಿಯಲ್ಲಿ ಇರಲಿದೆ. ರಾತ್ರಿ 10 ಗಂಟೆಗೆ ಆರಂಭಗೊಳ್ಳುವ ನೈಟ್ ಕರ್ಫ್ಯೂ ಬೆಳಗ್ಗೆ 5 ಗಂಟೆಗೆ ಕೊನೆಗಾಣಲಿದೆ. ಈ ಸಂದರ್ಭದಲ್ಲಿ ವೈದ್ಯಕೀಯ ಸೇವೆ, ಸಾರಿಗೆ ಸೇವೆ, ಕಂಪನಿಗಳು ಸೇರಿದಂತೆ ವಿವಿಧ ಅಗತ್ಯ ಸೇವೆಗಳಿಗೆ ಅವಕಾಶ ನೀಡಲಾಗಿದೆ. ಆದರೆ ಪಬ್,, ಲೇಟ್ ನೈಟ್ ಪಾರ್ಟಿ,ಹೋಟೆಲ್ಗಳಿಗೆ ನೈಟ್ ಕರ್ಫ್ಯೂ ಅವಧಿಯಲ್ಲಿ ಅವಕಾಶ ಇರುವುದಿಲ್ಲ ಎಂದು ರಾಜ್ಯ ಸರ್ಕಾರ ಈಗಾಗಲೇ ಪ್ರಕಟಣೆಯನ್ನು ಹೊರಡಿಸಿದೆ. ಅಲ್ಲದೇ ಈ 10 ದಿನಗಳಲ್ಲಿ ಕೊರೊನಾ ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.
ಇದನ್ನೂ ಓದಿ : Corona Vaccine to Children : ಮಕ್ಕಳಿಗೂ ಸಿಗಲಿದೆ ಲಸಿಕೆ: ವಾಕ್ಸಿನ್ ನೀಡಲು ಬಿಬಿಎಂಪಿ ಮಾಸ್ಟರ್ ಪ್ಲ್ಯಾನ್
biggboss fame divya suresh violates night curfew rules..!