Karnataka Bandh postponed : ಕರ್ನಾಟಕ ಬಂದ್ ಗೂ ವಿಘ್ನ: ಸ್ಟ್ರೈಕ್ ದಿನಾಂಕ ಬದಲಿಗೆ ಕರವೇ ಒತ್ತಾಯ

ಬೆಂಗಳೂರು : ರಾಜ್ಯದಲ್ಲಿ ಹೊಸ ವರ್ಷಾಚರಣೆಗೆ ಕೊರೋನಾ, ಓಮೈಕ್ರಾನ್ ಅಡ್ಡಿಯಾಗಿದ್ದರೇ, ವರ್ಷಾಂತ್ಯದ ದಿನದ ಸೆಲಿಬ್ರೇಶನ್ ಗೆ ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟಿದ್ದ ಬಂದ್ ಅಡ್ಡಿಯಾಗಿತ್ತು. ಈ ಬಂದ್ ಗೆ ಕರೆ ನೀಡುವಾಗ ಕೈಜೋಡಿಸಿದ ಸಂಘಟನೆಗಳೇ ಯೂ ಟರ್ನ್ ಹೊಡೆದಿದ್ದು ಬಂದ್ ಮುಂದೂಡಿಕೆಯ ಬೇಡಿಕೆ ಇಟ್ಟಿದ್ದಾರೆ. ಕನ್ನಡದ ನೆಲದಲ್ಲಿ ಪುಂಡಾಟ ಹಾಗೂ ಕನ್ನಡದ ಮಹಾನ್ ಹೋರಾಟಗಾರರಿಗೆ ಅವಮಾನ ಮಾಡಿದ ಎಂಇಎಸ್ ಸಂಘಟನೆ ನಿಷೇಧಿಸುವಂತೆ ಆಗ್ರಹಿಸಿ ಕರವೇ ಸೇರಿದಂತೆ ಎಲ್ಲ ಕನ್ನಡ ಪರ ಸಂಘಟನೆಗಳು (Karnataka Bandh postponed) ಡಿಸೆಂಬರ್31 ರಂದು ಬಂದ್ ಗೆ ಕರೆ ನೀಡಿದ್ದವು.

ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆಯಲಿದ್ದ ಬಂದ್ ಗೆ ಹಲವು ಸಂಘಟನೆಗಳು ಬೆಂಬಲ ನೀಡಿದ್ದವು. ಆದರೆ ಕನ್ನಡ ರಕ್ಷಣಾ ವೇದಿಕೆಯ ನಾರಾಯಣ ಗೌಡರ ಬಣ ಬಂದ್ ವಿರೋಧಿಸಿತ್ತು. ಮಾತ್ರವಲ್ಲ ಡಿಸೆಂಬರ್ 31 ರಂದು ಶುಕ್ರವಾರವಾಗಿರೋದರಿಂದ ಕನ್ನಡದ ಮೂರು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗ್ತಿರೋದರಿಂದ ಚಿತ್ರರಂಗ ಕೂಡ ಬಂದ್ ಗೆ ಬೆಂಬಲ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಈಗ ಕರ್ನಾಟಕ ಬಂದ್ ಮುಂದೂಡಿಕೆ ಮಾಡೋದು ಸೂಕ್ತ ಎಂಬ ಅಭಿಪ್ರಾಯ ಕನ್ನಡ ಪರ ಸಂಘಟನೆಗಳಿಂದಲೇ ವ್ಯಕ್ತವಾಗಿದೆ.

ಈ ಕುರಿತು ಬಂದ್ ಗೆ ಬೆಂಬಲ ನೀಡಿದ ಕರವೇಯ ಪ್ರವೀಣ್ ಶೆಟ್ಟಿ ಬಣ ಈಗ ಯೂ ಟರ್ನ್ ಹೊಡೆದಿದ್ದು, ಈಗ ಬಂದ್ ಹಿಂಪಡೆದು ಜನವರಿ ಮೊದಲ ವಾರದಲ್ಲಿ ಬಂದ್ ನಡೆಸೋಣ ಎಂದು ಮನವಿ ಮಾಡಿದ್ದಾರೆ. ಈ ಕುರಿತು ಪ್ರವೀಣ್ ಶೆಟ್ಟಿ ವಾಟಾಲ್ ನಾಗರಾಜ್ ಗೆ ವಿಸ್ಕೃತ ಪತ್ರ ಬರೆದಿದ್ದಾರೆ. ಅದರಲ್ಲಿ ಡಿಸೆಂಬರ್ 31 ರ ಬಂದ್ ಇರುವ ಸಮಸ್ಯೆಗಳೇನು ಎಂಬುದರ ಮೇಲೆ ಬೆಳಕು ಚೆಲ್ಲಿದ್ದಾರೆ.

ಅಧ್ಯಕ್ಷರು
ಕನ್ನಡ ಪರ ಸಂಘಟನೆಗಳ ಒಕ್ಕೂಟ
ಬೆಂಗಳೂರು

ಕನ್ನಡದ,ಕನ್ನಡಿಗರ,ಕನ್ನಡ ಪರ ಹೋರಾಟಗಾರರ ಪ್ರಶ್ನಾತೀತ ನಾಯಕರೆ ತಮ್ಮಲ್ಲಿ ವಿನಮ್ರತೆಯಿಂದ ನಿವೇದಿಸಿ ಕೊಳ್ಳುವುದೇನೆಂದರೆ ದಿನಾಂಕ 22-12-21 ರಂದು ನಾವೆಲ್ಲರೂ ಒಮ್ಮತದಿಂದ ದಿನಾಂಕ ಮೂವತ್ತೊಂದರ ಶುಕ್ರವಾರ ರಾಜ್ಯ ಬಂದ್ ಕರೆ ನೀಡಿದ್ದು ಸರಿಯಷ್ಟೆ ಆದರೆ ನಂತರ ನಡೆದ ಹಲವಾರು ಬೆಳವಣಿಗೆಗಳು ನಮ್ಮ ಈ ನಿರ್ಧಾರ ಪ್ರಸ್ತುತ ಸರಿ ಇಲ್ಲವೆಂಬ ಭಾವನೆ ಮೂಡುತ್ತಿದೆ ಕಾರಣ ಓಮಿಕ್ರಾನ್ ಈಗಾಗಲೇ ತನ್ನ ಕಬಂಧ ಬಾಹುಗಳನ್ನ ಚಾಚುತ್ತಿದೆ ತತ್ಪರಿಣಾಮವಾಗಿ ಸೆಕ್ಷನ್ 144 ಹಾಗು ರಾತ್ರಿ ಕರ್ಫ್ಯೂ ಕೂಡ ಜಾರಿ ಮಾಡಲಾಗಿದೆ ಈಗಾಗಲೆ ಕೊವಿಡ್ ಕಾರಣದಿಂದ ಸಾಕಷ್ಟು ಸಂಕಷ್ಟದಲ್ಲಿರುವ ವರ್ತಕರು ವಾಣಿಜ್ಯೋದ್ಯಮಿಗಳು ಹೋಟೆಲ್ ಮಾಲೀಕರು ನಮ್ಮ ಈ ನಿರ್ಧಾರದಿಂದ ಸಾಕಷ್ಟು ಆತಂಕ ದಲ್ಲಿದ್ದಾರೆ ಹಳೆ ವರ್ಷದ ಕೊನೆಯಲ್ಲಿ ಹೊಸ ವರ್ಷದ ಆರಂಭದಲ್ಲಿ ಒಳ್ಳೆಯ ವ್ಯಾಪಾರ ವಹಿವಾಟಿನ ನಿರೀಕ್ಷೆಯಲ್ಲಿದ್ದ ವ್ಯಾಪಾರಸ್ಥರು ಬಹಳ ನಷ್ಠ ಹೊಂದುತ್ತಾರೆ ಸದಾಕಾಲ ನಮ್ಮ ಜೊತೆ ನಿಲ್ಲುತ್ತಿದ್ದ ಚಿತ್ರೋದ್ಯಮ ಕೆಲವು ಸಂಘಟನೆಗಳು ತಮ್ಮ ಅಸಮಾಧಾನವನ್ನ ಹೊರ ಹಾಕಿವೆ ಸಾರ್ವಜನಿಕ ವಲಯ ಹಾಗೂ ಬಹಳ ಪ್ರಮುಖವಾಗಿ ಬೆಳಗಾವಿಯ ಕ್ರಿಯ ಸಮಿತಿ ಕೂಡ ನಮ್ಮ ಬಂದ್ ಗೆ ಬೆಂಬಲ ನೀಡುತ್ತಿಲ್ಲ ನಮ್ಮ ಸಂಘಟನೆಯ ಪದಾಧಿಕಾರಿಗಳಲ್ಲೂ ಬಂದ್ ಬಗ್ಗೆ ಒಮ್ಮತ ಸಾದ್ಯವಾಗಿಲ್ಲ ಈ ಎಲ್ಲಾ ಕಾರಣಗಳನ್ನ ಗಮನಿಸಿ ಸಾರ್ವಜನಿಕರ ಹಿತದೃಷ್ಟಿಯಿಂದ ನಾವು ಬಂದ್ ದಿನಾಂಕವನ್ನ ಮೂಂದೂಡುವುದು ಸೂಕ್ತ ಮುಂದಿನ ಸಭೆಯಲ್ಲಿ ಚರ್ಚಿಸಿ ದಿನಾಂಕ ನಿಗಧಿ ಗೊಳಿಸೋಣಾ ಎಂದು ತಮ್ಮಲ್ಲಿ ಕಳಕಳಿಯಿಂದ ಪ್ರಾರ್ಥಿಸುತ್ತೇವೆ ವಂದನೆಗಳೊಂದಿಗೆ.

ಇಂತಿ
ತಮ್ಮ ವಿಧೇಯ
ಪ್ರವೀಣ್ ಕುಮಾರ್ ಶೆಟ್ಟಿ

ಈ ಪತ್ರದ ಹಿನ್ನೆಲೆಯಲ್ಲಿ ವಾಟಾಲ್ ನಾಗರಾಜ್ ಬಂದ್ ಬೇಡಿಕೆಗೆ ಬೆಂಬಲ ಕುಸಿತಕಂಡಂತಾಗಿದ್ದು, ಎಲ್ಲರೂ ಡಿಸೆಂಬರ್ 31 ರ ಕರ್ನಾಟಕ ಬಂದ್ ಗೆ ವಿರೋಧ ವ್ಯಕ್ತಪಡಿಸುತ್ತಾ ಇರುವುದರಿಂದ ಬಂದ್ ಮುಂದೂಡಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.

(Karnataka Bandh postponed)

Comments are closed.