ಮಂಗಳವಾರ, ಏಪ್ರಿಲ್ 29, 2025
HomeCrimeBitcoin Hacker Sriki Missing : ಹ್ಯಾಕರ್ ಶ್ರೀಕಿ ಮತ್ತೆ ನಾಪತ್ತೆ, ಪೊಲೀಸರಿಗೆ ತಲೆ ನೋವು...

Bitcoin Hacker Sriki Missing : ಹ್ಯಾಕರ್ ಶ್ರೀಕಿ ಮತ್ತೆ ನಾಪತ್ತೆ, ಪೊಲೀಸರಿಗೆ ತಲೆ ನೋವು : ಜಾಮೀನು ರದ್ದತಿಗೆ ಖಾಕಿ ಸಿದ್ದತೆ

- Advertisement -

ತನ್ನ ಹ್ಯಾಕಿಂಗ್ ಕೌಶಲ್ಯದಿಂದ ದೇಶವನ್ನೇ ಹೆಚ್ಚೇನು ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ಹ್ಯಾಕರ್ ಶ್ರೀಕಿ ಮತ್ತೊಮ್ಮೆ(Bitcoin Hacker Sriki Missing) ಬೆಂಗಳೂರು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿ ದ್ದಾರೆ. ತಿಂಗಳ ಹಿಂದೆ ತಾನು ವಾಸವಾಗಿದ್ದ ಹೊಟೇಲ್ ನಲ್ಲಿ ಡ್ರಗ್ಸ್ ಮತ್ತಿನಲ್ಲಿ ಗಲಾಟೆ‌ ಮಾಡಿಕೊಂಡಿದ್ದ ಪ್ರಕರಣದಲ್ಲಿ ಹ್ಯಾಕರ್ ಜೀವನಭೀಮಾ ನಗರ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ. ಇದೇ ಪ್ರಕರಣದಲ್ಲಿ ಜೈಲು ಸೇರಿದ್ದ ಶ್ರೀಕಿಗೆ ಷರತ್ತು ಬದ್ಧ ಜಾಮೀನು ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ಬಂದು ಸಹಿ ಹಾಕುವುದು ಸೇರಿದಂತೆ ಹಲವು ಷರತ್ತುಗಳ ಜೊತೆ ಜಾಮೀನು ನೀಡಲಾಗಿತ್ತು. ಆದರೆ ಜಾಮೀನು ಪಡೆದು ಜೈಲಿನಿಂದ ಹೊರಬಂದ ಶ್ರೀಕಿ ನಾಪತ್ತೆಯಾಗಿದ್ದು ಮತ್ತೆ ಆತನನ್ನು ಹುಡುಕಾಡಲಯ ಜೀವನಭೀಮಾನಗರ ಪೊಲೀಸರು ಪರದಾಡುತ್ತಿದ್ದಾರೆ.

ಒಂದು ವಾರದಿಂದ ಶ್ರೀಕಿ ಪತ್ತೆಗೆ ಇನ್ನಿಲ್ಲದ ಸರ್ಕಸ್ ನಡೆಸಿದ ಜೀವನಭೀಮಾ ನಗರ ಪೊಲೀಸರು ಸದ್ಯ ಶ್ರೀಕಿ ಜಾಮೀನು ರದ್ದುಗೊಳಿಸುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ. ಕೆಲ ದಿನಗಳ ಹಿಂದೆ ಬಿಟ್ ಕಾಯಿನ್ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಶ್ರೀಕಿ ಜೀವಕ್ಕೆ ಅಪಾಯವಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ಧರಾಮಯ್ಯ ದೂರಿದ್ದರು. ಇದೇ ಕಾರಣಕ್ಕೆ ಶ್ರೀಕಿಗೆ ಭದ್ರತೆ ಒದಗಿಸಲಾಗಿತ್ತು . ಆದರೆ ಇನ್ಸಪೆಕ್ಟರ್ ನೇತ್ರತ್ವದಲ್ಲಿ ಭದ್ರತೆ ಒದಗಿಸಲಾಗಿದ್ದರೂ ಆ ಇನ್ಸ್ಪೆಕ್ಟರ್ ಸಂಪರ್ಕ ಕ್ಕೂ ಸಿಗದೇ ಶ್ರೀಕಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಮೂಲಗಳ ಮಾಹಿತಿ ಪ್ರಕಾರ ಶ್ರೀಕಿ ರಾಜ್ಯವನ್ನೇ ತೊರೆದಿದ್ದು ದೆಹಲಿಯಲ್ಲಿ ಎರಡು ದಿನಗಳ ಕಾಲ ವಾಸ್ತವ್ಯ ಮಾಡಿದ ಬಳಿಕ ಸದ್ಯ ಉತ್ತರ ಭಾರತದ ಕಡೆಗೆ ಪ್ರಯಾಣ ಬೆಳೆಸಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಮೂಲಗಳಿಂದ ಲಭ್ಯವಾಗಿದೆ. ಜಾಮೀನು ಪಡೆಯುತ್ತಿದ್ದಂತೆ ತಂದೆಯನ್ನು ಭೇಟಿ ಮಾಡಿದ್ದ ಶ್ರೀಕಿ ಹೆಬ್ಬಾಳದ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ್ದ ಶ್ರೀಕಿ ಆ ಬಳಿಕ ಪೊಲೀಸರಿಗೆ ಸಿಕ್ಕಿಲ್ಲ.

ಇತ್ತೀಚಿಗೆ ಶ್ರೀಕಿ ಲ್ಯಾಪ್ ಟ್ಯಾಪ್ ತನಿಖೆಗೊಳಪಡಿಸುವ ವೇಳೆ ಪೊಲೀಸರಿಗೆ ಫಾಸ್ ವರ್ಡ್ ಸಮಸ್ಯೆ ಎದುರಾಗಿತ್ತು. ಈ ವೇಳೆಯೂ ಪೊಲೀಸರು ಶ್ರೀಕಿಯನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದರು. ಆದರೆ ಈ ವೇಳೆ ಶ್ರೀಕಿ ಸಹೋದರ ಆತ ಮನೆಗೆ ಬರುತ್ತಿಲ್ಲ. ಎಲ್ಲಿದ್ದಾನೆ ಎಂಬ ಮಾಹಿತಿ ನಮಗೂ ಇಲ್ಲ ಎಂದಿದ್ದರು. ಒಟ್ಟಾರೆ ಜಾಮೀನು ಪಡೆದು ಹೋಗಿರೋ ಶ್ರೀಕಿ ಜೀವನಭೀಮಾನಗರ ಪೊಲೀಸರ ಪಾಲಿಗೆ ತಲೆನೋವಾಗಿ ಪರಿಣಮಿಸಿದ್ದು ಮತ್ತೊಮ್ಮೆ ಶ್ರೀಕಿ ಹಿಡಿಯಲು ಪೊಲೀಸರು ಕೋರ್ಟ್ ಮೊರೆ ಹೋಗಲು ಸಿದ್ಧರಾಗುತ್ತಿದ್ದಾರೆ.

ಇದನ್ನೂ ಓದಿ : PM Modi’s Twitter account hacked : ಬಿಟ್ ಕಾಯಿನ್ ಕಾನೂನುಬದ್ಧ: ಮೋದಿ ಅಕೌಂಟ್ ಹ್ಯಾಕ್ ಮಾಡಿ ಟ್ವೀಟ್

ಇದನ್ನೂ ಓದಿ : Bitcoin : ಬಿಟ್‌ಕಾಯಿನ್‌ ಹೇಗಿರುತ್ತೆ? ಚಲಾವಣೆ – ವ್ಯವಹಾರ ಹೇಗೆ ಮಾಡುತ್ತಾರೆ ? ಈಗೇಕೆ ಹೆಚ್ಚು ಚರ್ಚೆಯಾಗುತ್ತಿದೆ ಈ ಕ್ರಿಪ್ಟೋಕರೆನ್ಸಿ

(Bitcoin Hacker Sriki Missing, Headache to police, bail revoked)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular