ಕಾರ್ಮಿಕರಿಗೆ ಬಿಎಂಟಿಸಿ ಶಾಕ್ : ಇಂದಿನಿಂದಲೇ ಉಚಿತ ಪಾಸ್ ಸ್ಥಗಿತ

ಬೆಂಗಳೂರು : ಕೊರೋನಾದಿಂದ ಜಗತ್ತೇ ತಲ್ಲಣಿಸಿ ಹೋಗಿದ್ದರೇ, ಇತ್ತ ದುಡಿಯುವ ಕಾರ್ಮಿಕ ವರ್ಗವಂತೂ ಬದುಕುವುದೇ ದುಸ್ತರ ಎಂಬ ಸ್ಥಿತಿ ತಲುಪಿತ್ತು. ಈ ವೇಳೆ ದುಡಿಯುವ ಶ್ರಮಿಕರ ನೆರವಿಗೆ ಬಂದಿದ್ದ ಬಿಎಂಟಿಸಿ ನಗರದ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಒದಗಿಸಿತ್ತು. ಆದರೆ ಈಗ ದುಡಿದು ತಿನ್ನುವ ಕಾರ್ಮಿಕರಿಗೆ ಶಾಕ್ ಎದುರಾಗಿದ್ದು ಯಾವುದೇ ಕಾರಣ ನೀಡದೇ ಕಾರ್ಮಿಕರ ಉಚಿತ ಪಾಸ್ ( BMTC cancels bus passes) ಸ್ಥಗಿತಗೊಳಿಸಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಹಯೋಗದೊಂದಿಗೆ ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಉಚಿತ ಸಹಾಯ ಹಸ್ತ ಬಸ್ ಪಾಸು‌ ವಿತರಿಸಿತ್ತು. ಈ ಪಾಸ್ ಗಳನ್ನು ಬಳಸಿಕೊಂಡು ಕಾರ್ಮಿಕರು ನಗರದ ಯಾವ ಭಾಗಕ್ಕಾದರೂ ತೆರಳಿ ಕೆಲಸ ಮಾಡಬಹುದಿತ್ತು. ಆದ್ರೆ ಈಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಶಾಕ್ ನೀಡಿದ್ದು,ಪಾಸ್ ವಿತರಣೆ ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ.

ಬಿಎಂಟಿಸಿಯ (BMTC ) ಈ ಆದೇಶದಿಂದ ಕಾರ್ಮಿಕರು ಇನ್ಮುಂದೆ ಟಿಕೇಟ್ ಪಡೆದು ಬಸ್ ನಲ್ಲಿ ಪ್ರಯಾಣಿಸಬೇಕಿದೆ. ಇವತ್ತಿನಿಂದಲೇ ಜಾರಿಗೆ ಬರುವಂತೆ ಕಾರ್ಮಿಕರಿಗೆ ಉಚಿತವಾಗಿ ಸಿಕ್ತಿದ್ದ ಸಹಾಯಹಸ್ತ ಪಾಸ್ ಹಿಂಪಡೆಯಲಾಗ್ತಿದೆ ಎಂದು ಬಿಎಂಟಿಸಿ ತನ್ನ ಆದೇಶದಲ್ಲಿ ಹೇಳಿದೆ. ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ಸಹಾಯಹಸ್ತ ಪಾಸ್ ನ್ನು ಸ್ಥಗಿತ ಗೊಳಿಸಿದ್ದಾರೆ. ಈ ಮೊದಲು ಕೂಡಾ ಎಲ್ಲಾ ಕಾರ್ಮಿಕರಿಗು ಈ ಸೌಲಭ್ಯ ದೊರಕಿರಲಿಲ್ಲ. ಬದಲಾಗಿ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕಾಯಂ ವಾಸವಾಗಿರುವ ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮಾತ್ರ ಅವಕಾಶವಿತ್ತು.

ಆದರೆ ಈಗ ಸಹಾಯಹಸ್ತ ಪಾಸ್ ನ್ನು ಬಿಎಂಟಿಸಿ (BMTC )ಸ್ಥಗಿತಗೊಳಿಸಿದ್ದು, ಕಾರ್ಮಿಕರು ದುಡ್ಡು ಪಾವತಿಸಿಯೇ ಕೆಲಸಕ್ಕೆ ತೆರಳುವ ಸ್ಥಿತಿ ನಿರ್ಮಾಣವಾಗಿದೆ. ಕಟ್ಟಡ ಕಾರ್ಮಿಕರ ಬಳಿಕ ಬಿಎಂಟಿಸಿ ಗಾರ್ಮೆಂಟ್ಸ್ ನ ಮಹಿಳಾ ಉದ್ಯೋಗಿಗಳಿಗೆ ಫ್ರೀ ಪಾಸ್ ವಿತರಿಸಿತ್ತು. ಈಗ ಕಾರ್ಮಿಕರ ಪಾಸ್ ಹಿಂಪಡೆದಿರೋದರಿಂದ ಗಾರ್ಮೇಂಟ್ಸ್ ಮಹಿಳಾ ಉದ್ಯೋಗಿಗಳ ಪಾಸ್ ( BMTC cancels bus passes) ಮೇಲೂ ತೂಗುಕತ್ತಿ ನಿಂತಂತಾಗಿದೆ.

BMTC cancels bus passes for Labour

ಮೂಲಗಳ ಮಾಹಿತಿ ಪ್ರಕಾರ ಕೊರೋನಾದ ಎರಡು ವರ್ಷಗಳಲ್ಲಿ ಬಿಎಂಟಿಸಿ ನಷ್ಟದ ಹಾದಿಯಲ್ಲಿದೆ. ಈ ಮಧ್ಯೆ ಸದ್ಯ ಕೊರೋನಾ ಪ್ರಮಾಣ ಕುಗ್ಗಿದ್ದರೂ ವರ್ಕ್ ಫ್ರಂ ಹೋಂ ಸೇರಿದಂತೆ ವಿವಿಧ ಕಾರಣಗಳಿಗಾಗಿ ಬಿಎಂಟಿಸಿ ಆದಾಯದಲ್ಲಿ ಚೇತರಿಕೆಯಾಗಿಲ್ಲ. ಹೀಗಾಗಿ ಬಿಎಂಟಿಸಿಗೆ ಈ ಉಚಿತ ಸಹಾಯ ಗಳನ್ನು ನಿಲ್ಲಿಸಲು ಮುಂದಾಗಿದೆ ಎನ್ನಲಾಗಿದೆ.

ಇದನ್ನೂ ಓದಿ : Fix My Street ಗೆ ದೂರಿನ ಸುರಿಮಳೆ : 9 ಸಾವಿರ ರಸ್ತೆ ಗುಂಡಿ ಮುಚ್ಚಲು ಸಾರ್ವಜನಿಕರಿಂದ ದೂರು

ಇದನ್ನೂ ಓದಿ :  ಮದುವೆಯಾಗುವುದಿಲ್ಲ ಎಂದ ಯುವತಿ: ಕೋಪಗೊಂಡ ಮಾವನ ಮಕ್ಕಳಿಂದ ಅಪಹರಣ ಯತ್ನ

BMTC cancels bus passes for Labour

Comments are closed.