APP ನತ್ತ ಮುಖ ಮಾಡಿದ ನಾಯಕರು : ದಿವಾಕರ್, ಭಾಸ್ಕರ ರಾವ್ ಬಳಿಕ ಬ್ರಿಜೇಶ್ ಕಾಳಪ್ಪ ಆಪ್ ಸೇರ್ಪಡೆ

ಬೆಂಗಳೂರು : ಕರ್ನಾಟಕದಲ್ಲಿ ವಿಧಾನ ಸಭಾ ಚುನಾವಣೆಗೆ ಸದ್ದಿಲ್ಲದೇ ಸಿದ್ಧತೆ ನಡೆದಿದೆ. ಹಾಲಿ ಚಾಲ್ತಿಯಲ್ಲಿರೋ ಎರಡು ರಾಷ್ಟ್ರಿಯ ಹಾಗೂ ಒಂದು ಪ್ರಾದೇಶಿಕ ಪಕ್ಷ ಅಧಿಕಾರದ ಗದ್ದುಗೆ ಹಿಡಿಯೋ ಆಸೆಯಿಂದ ಈಗಾಗಲೇ ಲೆಕ್ಕಾಚಾರಾದ ಪಾಲಿಟಿಕ್ಸ್ ಆರಂಭಿಸಿದೆ. ಆದರೆ ಇದೆಲ್ಲದರ ಮಧ್ಯೆ ಹೊಸತೊಂದು ರಾಜಕೀಯ ಪಕ್ಷ ಸೈಲೆಂಟ್ ಆಫರೇಶನ್ ಆರಂಭಿಸಿದ್ದು, ವಿಶೇಷವಾಗಿ ರಾಜ್ಯದ ಅತೃಪ್ತ ರಾಜಕಾರಣಿಗಳನ್ನು ಜೊತೆಗೂಡಿಸಿಕೊಂಡೇ ಅಧಿಕಾರ ಹಿಡಿಯುವ ಸಿದ್ಧತೆಯಲ್ಲಿದೆ. ದಿವಾಕರ್‌, ಭಾಸ್ಕರ್‌ ರಾಜ್‌ ಬೆನ್ನಲ್ಲೇ ಬ್ರಿಜೆಶ್‌ ಕಾಳಪ್ಪ ಕೂಡ ಆಪ್‌ (APP) ಸೇರ್ಪಡೆಗೆ ಮುಂದಾಗಿದ್ದಾರೆ.

ಹೌದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ಹೆಸರನ್ನಷ್ಟೇ ಕೇಳಿದ್ದ ರಾಜ್ಯದ ಜನತೆಗೆ ನಿಧಾನಕ್ಕೆ ಆಪ್ ಎಂಬ ಜನಸಾಮಾನ್ಯರ ಪಕ್ಷ ಪರಿಚಿತವಾಗತೊಡಗಿದೆ. ಈಗಾಗಲೇ ನಾಡಿನ ಹಲವು ರಾಜಕಾರಣಿಗಳು ನಿಧಾನಕ್ಕೆ ಆಪ್ ನತ್ತ ಮುಖಮಾಡಿದ್ದು, ದೆಹಲಿ ಮಾದರಿಯಲ್ಲಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯುವ ಕನಸಿನಲ್ಲಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ನಿಂದ ಅತೃಪ್ತಿ ಹೊಂದಿದ್ದ ದಿವಾಕರ್ ಆಪ್ ಮೆಟ್ಟಿಲೇರಿದ್ದಾರೆ. ಒಂದು ಕಾಲದಲ್ಲಿ ಬಿಎಸ್ವೈ ಆಪ್ತರಾಗಿದ್ದ ದಿವಾಕರ್ ಸಾಬೂನು ಹಾಗೂ ಮಾರ್ಜಕ ನಿಗಮದ ಅಧ್ಯಕ್ಷರಾಗಿದ್ದ ಕೆ.ದಿವಾಕರ್ ಆಪ್ ಸೇರ್ಪಡೆಗೊಂಡಿದ್ದಾರೆ. ಹಿರಿಯ ವಕೀಲರಾಗಿರೋ ದಿವಾಕರ್ ಇದುವರೆಗಿನ ಮಾಹಿತಿ ಪ್ರಕಾರ ಸಾಗರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎನ್ನಲಾಗ್ತಿದೆ.

ದಿವಾಕರ್ ಬೆನ್ನಲ್ಲೇ ಬೆಂಗಳೂರಿನ ಮಾಜಿ ಆಯುಕ್ತ ಹಾಗೂ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಸ್ವಯಂ ನಿವೃತ್ತಿ ಪಡೆದು ರಾಜಕೀಯಕ್ಕಾಗಿ ಆಪ್ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ದೆಹಲಿಯಲ್ಲಿ ಆಪ್ ಪಕ್ಷಕ್ಕೆ ಸೇರಿದ ಭಾಸ್ಕರ್ ರಾವ್ ಎರಡೂ ರಾಜಕೀಯ ಪಕ್ಷಗಳು ಹಾಗೂ ಜೆಡಿಎಸ್ ವಿರುದ್ದವೂ ವಾಗ್ದಾಳಿ ನಡೆಸಿ ಸದ್ದು ಮಾಡಿದ್ದರು. ಅಲ್ಲದೇ ಬೆಂಗಳೂರು ದಕ್ಷಿಣ ಭಾಗದ ಬಸವನಗುಡಿ ಕ್ಷೇತ್ರದಿಂದ ಭಾಸ್ಕರ್ ರಾವ್ ಚುನಾವಣೆಗೆ ಸ್ಪರ್ಧಿಸಲು ಸಿದ್ಧವಾಗಿದ್ದಾರಂತೆ.

ಇದೆಲ್ಲದರ ಮಧ್ಯೆ ಈಗ ಕಾಂಗ್ರೆಸ್ ನ ಕಾನೂನು ಸಲಹೆಗಾರ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿರೋ ಬ್ರಿಜೇಶ್ ಕಾಳಪ್ಪ ಸಹ ಈಗ ಆಪ್ ಪಕ್ಷವನ್ನು ಸೇರಲಿದ್ದು ಮುಂದಿನ ವಿಧಾನಸಭಾ ಚುನಾವಣೆಗೆ ಬೆಂಗಳೂರಿನಿಂದ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಈ ಬಗ್ಗೆ ಸ್ವತಃ ಬ್ರಿಜೇಶ್ ಕಾಳಪ್ಪ ಸಹ‌ ಮಾಹಿತಿ ನೀಡಿದ್ದು, ಮತ್ತೆ ಕಾಂಗ್ರೆಸ್ ನಲ್ಲಿ ಉಳಿಯುವ ಪ್ರಶ್ನೆಯೇ ಇಲ್ಲ. ಆಪ್ ನಿಂದ ಆಹ್ವಾನವಿದೆ. ಪರಿಶೀಲಿಸಿ ಸದ್ಯದಲ್ಲೇ ತೀರ್ಮಾನ ಘೋಷಿಸುತ್ತೇನೆ ಎಂದಿದ್ದಾರೆ.

ಹೀಗೆ ಕರ್ನಾಟಕದಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯಿಂದ ಅತೃಪ್ತರಾಗಿ ಹೊರಬರ್ತಿರೋ ನಾಯಕರನ್ನೇ ಆಪ್ ಪಕ್ಷ ಟಾರ್ಗೆಟ್ ಮಾಡ್ತಿದ್ದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಒಂದಿಷ್ಟು ಕ್ಷೇತ್ರಗಳಲ್ಲಿ ಗೆದ್ದು ಕರ್ನಾಟಕದ ರಾಜಕೀಯದಲ್ಲಿ ಸ್ಥಾನ ಪಡೆಯುವ ಲೆಕ್ಕಾಚಾರದಲ್ಲಿದೆ. ಈ ಲೆಕ್ಕಾಚಾರಕ್ಕೆ ಕರುನಾಡಿನ ಮತದಾರರು ಹೇಗೆ ರೆಸ್ಪಾನ್ಸ್ ಮಾಡ್ತಾರೆ ಕಾದು ನೋಡಬೇಕು.

ಇದನ್ನೂ ಓದಿ : Suvarna Vidhana Soudha : ಸುವರ್ಣ ಸೌಧದ ಮೆಟ್ಟಿಲ‌ಲ್ಲಿ ಒಣಗುತ್ತಿದೆ ಸಂಡಿಗೆ

ಇದನ್ನೂ ಓದಿ : ಕಾರ್ಮಿಕರಿಗೆ ಬಿಎಂಟಿಸಿ ಶಾಕ್ : ಇಂದಿನಿಂದಲೇ ಉಚಿತ ಪಾಸ್ ಸ್ಥಗಿತ

After Baskar Rao Brijesh Kalappa Joined APP

Comments are closed.