Chamarajpet Idgah Ganeshotsava : ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ : ಅವಕಾಶವಿಲ್ಲ ಎಂದ ಶಾಸಕ ಜಮೀರ್‌, ಹಿಂದೂ ಸಂಘಟನೆಗಳ ಆಕ್ರೋಶ

ಬೆಂಗಳೂರು : (Chamarajpet Idgah Ganeshotsava) ಇನ್ನೇನು ಚಾಮರಾಜಪೇಟೆಯ ಈದ್ಗಾ ಮೈದಾನದ ಮಾಲೀಕತ್ವ ವಿವಾದ ಮುಗಿಯಿತು ಅಂತ ಸಮಾಧಾನ ಪಡುವಷ್ಟರಲ್ಲಿ ಮತ್ತೊಂದು ವಿವಾದ ಭುಗಿಲೆದ್ದಿದೆ. ಈದ್ಗಾ ಮೈದಾನ ಕಂದಾಯ ಇಲಾಖೆಯ ಆಸ್ತಿ. ಹೀಗಾಗಿ‌ನಾವು ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತೇವೆ ಎಂದು ಸ್ಥಳೀಯ ಸಂಘಟನೆಗಳು ಹಾಗೂ ಹಿಂದೂ ಮುಖಂಡರು ಪಟ್ಟು ಹಿಡಿದಿದ್ದರೇ, ಅತ್ತ ಮುಸ್ಲಿಂ‌ನಾಯಕರು ಹಾಗೂ ಶಾಸಕ ಜಮೀರ್ ಅಹ್ಮದ್ ಗಣೇಶೋತ್ಸವ ಆಚರಿಸೋದಿಕ್ಕೆ ಬಿಡೋದಿಲ್ಲ ಎಂದು ಅಬ್ಬರಿಸಿದ್ದಾರೆ. ಈ ಮಧ್ಯೆ ಈದ್ಗಾ ಮೈದಾನದಲ್ಲಿರೋ ಗೋಡೆ ಕೆಡವೋದಿಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಕಾಲಾವಕಾಶ ನೀಡಿದ್ದಾರೆ.

ಹೌದು ವಿವಾದಕ್ಕೆ ಕಾರಣವಾಗಿದ್ದ ಚಾಮರಾಜಪೇಟೆ ಈದ್ಗಾ ಮೈದಾನದ ಮಾಲೀಕತ್ವ ಕಂದಾಯ ಇಲಾಖೆಯದ್ದು ಎಂದು ಬಿಬಿಎಂಪಿ ಘೋಷಿಸಿದೆ. ಆದರೆ ಈ ಘೋಷಣೆಯೊಂದಿಗೆ ವಿವಾದ ಕೊನೆಗೊಳ್ಳುವ ಬದಲು ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಈದ್ಘಾ ಮೈದಾನ ಮುಸ್ಲಿಂರದ್ದು. ತಲೆತಲಾಂತರದಿಂದ ನಾವು ಇದನ್ನು ಪ್ರಾರ್ಥನೆಗಾಗಿ ಬಳಸುತ್ತ ಬಂದಿದ್ದೇವೆ. ಈ ಮೈದಾನದಲ್ಲಿ ನಾವು ಸ್ವಾತಂತ್ರೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಗಣೇಶೋತ್ಸವ ಆಚರಿಸೋಕೆ ಬಿಡೋದಿಲ್ಲ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಪಟ್ಟು ಹಿಡಿದಿದ್ದಾರೆ.

ಇದಕ್ಕೆ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಈದ್ಘಾ ಮೈದಾನ ಕಂದಾಯ ಇಲಾಖೆಯ ಸ್ವತ್ತು. ಅಲ್ಲಿ ಮುಸ್ಲಿಂ ಸಮುದಾಯದವರು ಹಬ್ಬ ಆಚರಿಸಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಇರೋದಾದರೇ ನಾವು ಅದ್ದೂರಿ ಗಣೇಶೋತ್ಸವ ಆಚರಿಸುತ್ತೇವೆ ಎಂದಿದ್ದಾರೆ. ಗಣೇಶೋತ್ಸವಕ್ಕೆ ವಿರೋಧ ವ್ಯಕ್ತಪಡಿಸಿಸಲು ಜಮೀರ್ ಅಹ್ಮದ್ ಖಾನ್ ಯಾರು ? ತಾಕತ್ತಿದ್ದರೇ ಗಣೇಶೋತ್ಸವ ತಡೆದು ನೋಡಲಿ ಎಂದು ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಸವಾಲು ಹಾಕಿದ್ದಾರೆ.

ಈ ಮಧ್ಯೆ ಈದ್ಘಾ ಮೈದಾನ ಇನ್ಮುಂದೇ ಕಂದಾಯ ಇಲಾಖೆ ಆಸ್ತಿಯಾಗಿರೋದರಿಂದ ಇಲ್ಲಿ ಒಂದು ಧರ್ಮ ವನ್ನು ಪ್ರತಿನಿಧಿಸುವ ಈದ್ಗಾ ಗೋಡೆ ಬೇಕಾಗಿಲ್ಲ. ಅದನ್ನು ಬಿಬಿಎಂಪಿ ಹಾಗೂ ಸರ್ಕಾರ ತೆರವುಗೊಳಿಸಬೇಕೆಂದು ಸ್ಥಳೀಯ ನಾಗರೀಕ ಒಕ್ಕೂಟ ಹಾಗೂ ಹಿಂದೂಪರ ಸಂಘಟನೆಗಳು ಒತ್ತಾಯಿಸಿವೆ.‌ಮಾತ್ರವಲ್ಲ ಇದಕ್ಕಾಗಿ ಸರ್ಕಾರಕ್ಕೆ ನವೆಂಬರ್ ೧೫ ರವರೆಗೆ ಗಡುವು ಕೂಡ ನೀಡಿದೆ.

ಸದ್ಯ ಚಾಮರಾಜಪೇಟೆಯ ಈದ್ಘಾ ಮೈದಾನದಲ್ಲಿ ಬಿಗುವಿನ ವಾತಾವರಣವಿದ್ಧು ಮುಂಜಾಗ್ರತಾ ಕ್ರಮವಾಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇನ್ನು ಗಣೇಶೋತ್ಸವ ಆಚರಣೆಗೆ ಹಿಂದೂ ಸಂಘಟನೆಗಳು ಸಜ್ಜಾಗುತ್ತಿದ್ದು, ಇದು ಇನ್ನಷ್ಟು ಹೋರಾಟವನ್ನು ತೀವ್ರಗೊಳಿಸುವ ಸಾಧ್ಯತೆ ಇದೆ. ಹೀಗಾಗಿ ಸದ್ಯ ಚಾಮರಾಜಪೇಟೆಯ ಈದ್ಘಾ ವಿವಾದ ಕೊನೆಗೊಳ್ಳುವ ಲಕ್ಷಣವಿಲ್ಲ.

ಇದನ್ನೂ ಓದಿ : ಮಂಗಳೂರಲ್ಲಿ ಮತ್ತೋರ್ವ ಹಿಂದೂ ಮುಖಂಡನ ಹತ್ಯೆಗೆ 3 ಬಾರಿ ಸ್ಕೆಚ್‌ , ದೂರು ದಾಖಲು

ಇದನ್ನೂ ಓದಿ : death threats : ವಿಹೆಚ್​ಪಿ ಕಾರ್ಯಕರ್ತನ ಕೊಲೆ ಯತ್ನ ಪ್ರಕರಣಕ್ಕೆ ಟ್ವಿಸ್ಟ್​ : ಬಂದಿದ್ದು ಹಂತಕರಲ್ಲ, ಡೆಲಿವರಿ ಬಾಯ್​

Chamarajpet Idgah Ganeshotsava Celebration Permission Controversy MLA Zamir Ahamed Khan vs Hindu Activists

Comments are closed.