Banana Benefits : ಬಾಳೆಕಾಯಿ ತಿನ್ನಿ, ಕ್ಯಾನ್ಸರ್‌ನಿಂದ ದೂರವಿರಿ; ರಿಸರ್ಚ್‌ನಿಂದ ಬಯಲಾಯ್ತು ಈ ಸೀಕ್ರೆಟ್‌

ಕ್ಯಾನ್ಸರ್ (Cancer) ಒಂದು ಮಾರಣಾಂತಿಕ ಕಾಯಿಲೆ. ಇದರಲ್ಲಿ ಹಲವಾರು ವಿಧಗಳು ಮತ್ತು ಉಪ ವಿಧಗಳಿವೆ (Types and Sub-types). ದೇಹದ ಯಾವುದೇ ಭಾಗದ ಮೇಲೆ ಇದು ಪರಿಣಾಮ ಬೀರಬಹುದು. ಕ್ಯಾನ್ಸರ್ ನ ಅಪಾಯವನ್ನು ಕಡಿಮೆ ಮಾಡಲು ಅದನ್ನು ತಡೆಗಟ್ಟುವ ಕ್ರಮಗಳು ಅತ್ಯಂತ ಮಹತ್ವದ್ದಾಗಿದೆ. ಹೊರಗಡೆಯಿಂದ ತರುವ ಬಹುತೇಕ ಎಲ್ಲಾ ಆಹಾರ ಪದಾರ್ಥಗಳು ಹೆಚ್ಚಾಗಿ ಸಂಸ್ಕರಿಸಿದ ಮತ್ತು ಫಾಸ್ಟ್‌ ಫುಡ್‌ಗಳು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು. ಆದರೆ, ಹಣ್ಣುಗಳು ಮತ್ತು ತರಕಾರಿಗಳು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ (Banana Benefits). ಅಷ್ಟೇ ಅಲ್ಲದೇ ಅವುಗಳು ಅಗಾಧವಾದ ಪ್ರಯೋಜನವನ್ನೂ ನೀಡುತ್ತದೆ. ಅಂತಹ ಒಂದು ಹಣ್ಣು ಬಾಳೆಹಣ್ಣು (Banana).

“ಕ್ಯಾನ್ಸರ್ ಪ್ರಿವೆನ್ಷನ್ ರಿಸರ್ಚ್” ನಿಯತಕಾಲಿಕದಲ್ಲಿ ಪ್ರಕಟವಾದ ಸಂಶೋಧನಾ ಅಧ್ಯಯನದ ಇತ್ತೀಚಿನ ಫಲಿತಾಂಶವು ಬಾಳೆಕಾಯಿಯಲ್ಲಿ ಕಂಡುಬರುವ ಪಿಷ್ಟವು ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತೋರಿಸುತ್ತದೆ. ಇಂಗ್ಲೆಂಡ್‌ನ ಲೀಡ್ಸ್ ವಿಶ್ವವಿದ್ಯಾನಿಲಯ ಮತ್ತು ನ್ಯೂ ಕ್ಯಾಸಲ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ಜಂಟಿ ತಂಡವು ಈ ಸಂಶೋಧನೆಯನ್ನು ನಡೆಸಿದೆ.

ಈ ಸಂಶೋಧನೆಯು ಲಿಂಚ್ ಸಿಂಡ್ರೋಮ್ ರೋಗಿಗಳ ಮೇಲೆ ನಡೆಸಿದ 20 ವರ್ಷಗಳ ಸುದೀರ್ಘ ಅಧ್ಯಯನವಾಗಿದೆ. ರೋಗಿಗಳು ಗುದನಾಳದ ಮತ್ತು ಕರುಳಿನ ಕ್ಯಾನ್ಸರ್‌ನ ದೊಡ್ಡ ಅಪಾಯದಲ್ಲಿದ್ದಾರೆ. ಅವರಿಗೆ ಬಾಳೆಕಾಯಿ ಸೇವಿಸಲು ಹೇಳಲಾಯಿತು. ಇದರಿಂದ ಆಶ್ಚರ್ಯಕರ ವಿಷಯ ಹೊರಬಂದಿತು. ಅದೇನೆಂದರೆ ಬಾಳೆಕಾಯಿಯಲ್ಲಿರುವ ಪಿಷ್ಟವು ಮೇದೋಜ್ಜೀರಕ ಗ್ರಂಥಿ, ಅನ್ನನಾಳ, ಜಠರ ಮತ್ತು ಡ್ಯುವೋಡೆನಲ್ ಕ್ಯಾನ್ಸರ್ ಅನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಯು ಕಂಡುಬಂದಿತು. ರೋಗಿಗಳು ಪೂರಕ ಪಿಷ್ಟವನ್ನು ಸೇವಿಸುವುದನ್ನು ನಿಲ್ಲಿಸಿದ ನಂತರವೂ ಇದರ ಪರಿಣಾಮಗಳು ಕಂಡುಬಂದವು. ಸಂಶೋಧಕರು ಈ ಜನರಿಗೆ 30 ಗ್ರಾಂ ರೆಸಿಸ್ಟೆನ್ಸ್‌ ಪಿಷ್ಟವನ್ನು ನೀಡಿಲಾಯಿತು ಮತ್ತು ಪರಿಣಾಮಗಳನ್ನು ನೋಡಲು ಪ್ರತಿ ಹತ್ತು ವರ್ಷಗಳಿಗೊಮ್ಮೆ ಫಾಲೋ-ಅಪ್ ಡೇಟಾವನ್ನು ತೆಗೆದುಕೊಳ್ಳಲಾಯಿತು.

ನಾವು ಯಾವಾಗಲೂ ಮಾಗಿದ ಬಾಳೆಹಣ್ಣುಗಳನ್ನು ಸೇವಿಸಲು ಇಷ್ಟಪಡುತ್ತೇವೆ. ಆದರೆ ಬಾಳೆಕಾಯಿಯಿಂದಲೂ ಕೆಲವು ಅನಿರೀಕ್ಷಿತ ಪ್ರಯೋಜನಗಳೂ ಸಹ ಇದೆಯಂತೆ. ಹೊಸ ಅಧ್ಯಯನದ ಪ್ರಕಾರ, ಬಾಳೆಕಾಯಿಯಲ್ಲಿ ಕಂಡುಬರುವ ಪಿಷ್ಟದ ಪೂರಕಗಳು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ.

ಬಾಳೆಕಾಯಿಯನ್ನು ಹೊರತುಪಡಿಸಿ, ರೆಸಿಸ್ಟೆನ್ಸ್‌ ಪಿಷ್ಟವು ಅಕ್ಕಿ, ಧಾನ್ಯಗಳು, ಬೇಯಿಸಿದ ಮತ್ತು ಶೀತಲವಾಗಿರುವ ಪಾಸ್ತಾ, ಬೀನ್ಸ್ ಮತ್ತು ಹೆಚ್ಚಿನ ಆಹಾರ ಪದಾರ್ಥಗಳಲ್ಲಿ ಕಂಡುಬರುತ್ತದೆ. ಬಾಳೆಕಾಯಿಯಲ್ಲಿ ಕಂಡುಬರುವ ರೆಸಿಸ್ಟೆನ್ಸ್‌ ಪಿಷ್ಟವು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ದೃಢಪಡಿಸಲಾಗಿದೆ. ಮತ್ತು ಇದರ ಮೇಲೆ ಇನ್ನೂ ಹೆಚ್ಚಿನ ಅಧ್ಯಯನದ ಅಗತ್ಯವಿದೆ.

ಇದನ್ನೂ ಓದಿ : Benefits Of Clay Pots: ಮಣ್ಣಿನ ಪಾತ್ರೆಗಳಿಂದ ನೀರು ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ

ಇದನ್ನೂ ಓದಿ : Iron Rich Food: ಕಬ್ಬಿಣಂಶದ ಕೊರತೆಯನ್ನು ತಪ್ಪಿಸಲು ಈ ಆಹಾರಗಳನ್ನು ಸೇವಿಸಿ

(Banana Benefits Eating Bananas Can Reduce Risk of Cancer)

Comments are closed.