Independence Day 2022 : ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದ ವೀರರ ಬಗ್ಗೆ ಇಲ್ಲಿದೆ ಮಾಹಿತಿ

Independence Day 2022: ಸುದೀರ್ಘ ಹೋರಾಟದ ಬಳಿಕ ಭಾರತವು 1947ರಲ್ಲಿ ಬ್ರಿಟೀಷ್​ ಪಾರುಪತ್ಯದಿಂದ ಸ್ವಾತಂತ್ರ್ಯವನ್ನು ಪಡೆದಿದೆ. ಈ ಅಮೃತ ಘಳಿಗೆಗೆ ಇದೀಗ 75 ವರ್ಷ ತುಂಬುವುದರಲ್ಲಿದ್ದು ಇಡೀ ಭಾರತವೇ ಅಮೃತ ಮಹೋತ್ಸವವನ್ನು ಆಚರಿಸುವ ಸಿದ್ಧತೆಯಲ್ಲಿದೆ. 75ನೇ ವರ್ಷದ ಅಮೃತ ಮಹೋತ್ಸವ ಆಚರಿಸುವ ಈ ಸಂದರ್ಭದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ಬಿಟ್ಟ ವೀರರನ್ನು ನಾವು ಸ್ಮರಿಸುವುದು ಅವಶ್ಯವಾಗಿದೆ.

ತಾಂತ್ಯಾ ಟೋಪೆ :

Independence Day 2022: heroes of our struggle for freedom


1857ರ ಭಾರತೀಯ ದಂಗೆಯ ಪ್ರಮುಖ ಪಾತ್ರವನ್ನು ವಹಿಸಿದ ನಾಯಕರಲ್ಲಿ ತಾಂತ್ಯಾ ಟೋಪೆ ಕೂಡ ಒಬ್ಬರು. ಇದನ್ನು ಸಿಪಾಯಿ ದಂಗೆ ಅಥವಾ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದೂ ಕರೆಯುತ್ತಾರೆ. ಇದು ಯಶಸ್ವಿಯಾಗದೇ ಇದ್ದರೂ ಸಹ ಇದನ್ನು ಭಾರತದ ಸ್ವಾತಂತ್ರ್ಯ ಹೋರಾಟದ ನಿರ್ಣಾಯಕ ಕ್ಷಣವಾಗಿತ್ತು.

ರಾಣಿ ಲಕ್ಷ್ಮೀಬಾಯಿ :

Independence Day 2022: heroes of our struggle for freedom


ಶೌರ್ಯಕ್ಕೆ ಒಂದು ಸಮಾನಾರ್ಥಕ ಪದ ನೀಡಬೇಕು ಅಂದರೆ ರಾಣಿ ಲಕ್ಷ್ಮೀಬಾಯಿ ಎಂದು ಹೇಳಿದರೆ ತಪ್ಪಾಗಲಾರದು. ಬ್ರಿಟೀಷರ ವಿರುದ್ಧ ಬಂಡಾಯವೆದ್ದ ದೇಶದ ಪ್ರಬಲ ಹೋರಾಟಗಾರರಲ್ಲಿ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಕೂಡ ಒಬ್ಬರು. ಬ್ರಿಟೀಷರ ಆಳ್ವಿಕೆಯ ವಿರುದ್ಧ ಪ್ರಬಲ ಹೋರಾಟ ಮಾಡಿದ ಕಾರಣಕ್ಕೆ ದೇಶದ ಇತಿಹಾಸದಲ್ಲಿ ಲಕ್ಷ್ಮೀಬಾಯಿ ಪ್ರಮುಖ ಸ್ಥಾನವನ್ನು ಪಡೆದಿದ್ದಾರೆ .

ಲಾಲಾ ಲಜಪತ್​ ರಾಯ್​ :

Independence Day 2022: heroes of our struggle for freedom


ಲಾಲಾ ಲಜಪತ್​ ರಾಯ್​, ಬಾಲಗಂಗಾಧರ ತಿಲಕ್​ ಹಾಗೂ ಬಿಪಿನ್​ ಚಂದ್ರ ಪಾಲ್​​ ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ್ದಾರೆ. 1928ರ ಅಕ್ಟೋಬರ್​​ನಲ್ಲಿ ಲಾಹೋರ್​ನಲ್ಲಿ ಸೈಮನ್​ ಕಮಿಷನ್​ ವಿರುದ್ಧ ಪ್ರತಿಭಟನೆಯನ್ನು ಮುನ್ನೆಡಿಸಿದ ಕಾರಣಕ್ಕೆ ಲಾಲಾ ಲಜಪತ್​ ರಾಯ್​​ರನ್ನು ಭಾರತದ ಇತಿಹಾಸ ನೆನೆಪಿಸಿಕೊಳ್ಳುತ್ತದೆ. ಇಂದು ನನ್ನ ಮೇಲೆ ಹೊಡೆದ ಪೆಟ್ಟುಗಳು ಬ್ರಿಟಿಷ್ ಆಳ್ವಿಕೆಯ ಶವಪೆಟ್ಟಿಗೆಗೆ ಕೊನೆಯ ಮೊಳೆಯಾಗಿರುತ್ತವೆ ಎಂದು ಹೇಳಿದ್ದರು .

ಮಹಾತ್ಮ ಗಾಂಧಿ :

ಅಹಿಂಸಾತ್ಮಕ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದಕೊಟ್ಟ ಕೀರ್ತಿ ರಾಷ್ಟ್ರಪಿತ ಮಹಾತ್ಮ ಗಾಂಧಿಗೆ ಸಲ್ಲುತ್ತದೆ . ಭಾರತ ಬಿಟ್ಟು ತೊಲಗಿ ಮತ್ತು ನಾಗರಿಕ ಅಸಹಕಾರದಂತಹ ಚಳುವಳಿಗಳನ್ನು ನಡೆಸಿದರು. ಅವರು ಪ್ರಪಂಚದಾದ್ಯಂತ ನಾಗರಿಕ ಹಕ್ಕುಗಳು ಮತ್ತು ವಿಮೋಚನಾ ಚಳುವಳಿಗಳನ್ನು ಪ್ರೇರೇಪಿಸಿದರು. ಗಾಂಧಿಯಿಂದ ಆಳವಾಗಿ ಪ್ರಭಾವಿತರಾದವರಲ್ಲಿ ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ವಿರೋಧಿ ಐಕಾನ್ ನೆಲ್ಸನ್ ಮಂಡೇಲಾ ಕೂಡ ಒಬ್ಬರು.

ಇದನ್ನು ಓದಿ : Har Ghar Tiranga : ಹರ್‌ ಘರ್‌ ತಿರಂಗಾ ಅಭಿಯಾನದಲ್ಲಿ ಫ್ಲಾಗ್‌ ಪಿನ್‌ ಮಾಡಿ, ಪ್ರಮಾಣಪತ್ರ ಪಡೆಯಲು ಹೀಗೆ ಮಾಡಿ…

ಇದನ್ನೂ ಓದಿ : Pingali Venkayya : ತ್ರಿವರ್ಣ ಧ್ವಜದ ವಿನ್ಯಾಸಗಾರ ಪಿಂಗಲಿ ವೆಂಕಯ್ಯ ಯಾರು ಗೊತ್ತಾ?

Independence Day 2022: heroes of our struggle for freedom

Comments are closed.